ಕುಲ್‌ದೀಪ್ ಯಾದವ್‌ಗೆ ಟೀಂ ಇಂಡಿಯಾ ಬುಲಾವ್‌, ರವಿ ಬಿಷ್ನೋಯಿಗೆ ಅವಕಾಶ!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ವೈಫಲ್ಯದ ಬಳಿಕ ಹೊಸ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದ್ದು, ಮುಂಬರುವ ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಗೆ ಚೈನಾಮೆನ್ ಬೌಲರ್ ಕುಲ್‌ದೀಪ್‌ ಯಾದವ್‌ಗೆ ಮಣೆ ಹಾಕಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದ ಕುಲ್‌ದೀಪ್ ಯಾದವ್ ಮತ್ತೆ ಚೇತರಿಸಿಕೊಂಡಿದ್ದು, ವಿಂಡೀಸ್ ವಿರುದ್ಧ ಭಾರತದಲ್ಲೇ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಯಲ್ಲಿ ಕುಲ್‌ದೀಪ್ ಯಾದವ್ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

ವಿರಾಟ್‌ಗೆ ಮತ್ತೆ ಆರ್‌ಸಿಬಿ ನಾಯಕತ್ವ ಪಟ್ಟ? ಕೊಹ್ಲಿ ಉತ್ತರಕ್ಕೆ ಕಾದಿದೆ ಫ್ರಾಂಚೈಸಿ!ವಿರಾಟ್‌ಗೆ ಮತ್ತೆ ಆರ್‌ಸಿಬಿ ನಾಯಕತ್ವ ಪಟ್ಟ? ಕೊಹ್ಲಿ ಉತ್ತರಕ್ಕೆ ಕಾದಿದೆ ಫ್ರಾಂಚೈಸಿ!

ಕುಲ್‌ದೀಪ್ ಜೊತೆಗೆ ಯುವ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿಗೆ ಟೀಂ ಇಂಡಿಯಾದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲು ಸಮಿತಿ ಸಜ್ಜಾಗಿದೆ.

''ಕುಲದೀಪ್ ಯಾದವ್ ಕಂಬ್ಯಾಕ್ ಮಾಡಲಿದ್ದಾರೆ. ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ರವಿ ಬಿಷ್ಣೋಯಿ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಹೊಸ ಮುಖವಾಗಿದ್ದಾರೆ. ರೋಹಿತ್ ಶರ್ಮಾ ಅವರು ಭಾರತ ತಂಡವನ್ನ ಮುನ್ನಡೆಸಲಿದ್ದಾರೆ'' ಎಂದು ಬಿಸಿಸಿಐನ ಹಿರಿಯ ಮೂಲಗಳು ಪಿಟಿಐಗೆ ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಕೆಟ್ ಪಡೆಯಲು ವಿಫಲಗೊಂಡ ಭುವನೇಶ್ವರ್ ಕುಮಾರ್‌ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಉಳಿಸಿಕೊಳ್ಳಲಾಗಿದ್ದು, ಟಿ20 ತಂಡದಿಂದ ಅವರನ್ನ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ ಎರಡೂ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿರಿಯ ವ್ರಿಸ್ಟ್‌ ಸ್ಪಿನ್ನರ್ ಆಗಿರುವ ಕುಲ್‌ದೀಪ್ ಯಾದವ್ ಕಳೆದ ವರ್ಷ ಸೆಪ್ಟಂಬರ್‌ನಂದು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.

ಕೊಹ್ಲಿ-ಶಾಸ್ತಿ ಕಾಲದಲ್ಲಿ ಕುಲ್‌ದೀಪ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೇ ತಂಡದಿಂದ ಹೊರಬಿದ್ದಿದ್ದರು. ಶಸ್ತ್ರಚಿಕಿತ್ಸೆ ಮುಗಿಸಿ ಸಂಪೂರ್ಣ ಫಿಟ್ ಆಗಿದ್ದು, ಈತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದು ಆಯ್ಕೆ ಸಮಿತಿಯು ನಂಬಿದೆ.

KL Rahul ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ | Oneindia Kannada

ಫೆಬ್ರವರಿ 6ರಿಂದ ಭಾರತ-ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, ಎಲ್ಲಾ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫೆಬ್ರವರಿ 16ರಿಂದ ಆರಂಭಗೊಳ್ಳಲಿರುವ ಟಿ20 ಸರಣಿಯ ಮೂರು ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, January 26, 2022, 22:08 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X