ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಭಾರತ ತಂಡದಲ್ಲಿ ಶಿಖರ್ ಧವನ್ ಬದಲು ಸಂಜುಗೆ ಸ್ಥಾನ!

Dhawan has been replaced by Sanju Samson for upcoming t20 series
India vs West Indies T20Is: Shikhar Dhawan ruled out

ನವದೆಹಲಿ, ನೆವಂಬರ್ 27: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ. ಅನುಭವಿ ಧವನ್ ಬದಲಿಗೆ ಯುವ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

'ನನಗಿಲ್ಲಿ ಗೌರವ ಸಿಗುತ್ತಿಲ್ಲ'. ಕ್ರಿಸ್ ಗೇಲ್ ಹೀಗಂದಿದ್ದು ಯಾರ ವಿರುದ್ಧ?'ನನಗಿಲ್ಲಿ ಗೌರವ ಸಿಗುತ್ತಿಲ್ಲ'. ಕ್ರಿಸ್ ಗೇಲ್ ಹೀಗಂದಿದ್ದು ಯಾರ ವಿರುದ್ಧ?

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಡೆಲ್ಲಿ ತಂಡದಲ್ಲಿದ್ದ ಶಿಖರ್ ಧವನ್, ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಫೀಲ್ಡ್‌ನಲ್ಲಿ ಡೈವ್ ಮಾಡುವ ವೇಳೆ ಗಾಯಕ್ಕೀಡಾಗಿದ್ದ ಧವನ್ ಆಸ್ಪತ್ರೆಗೆ ದಾಖಲಾಗಿದ್ದರು. ಅದಾಗಿ ಧವನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

'ಮಹಾರಾಷ್ಟ್ರ-ಡೆಲ್ಲಿ ನಡುವೆ ಸೂರತ್ ನಲ್ಲಿ ನಡೆದಿದ್ದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಪಂದ್ಯದ ವೇಳೆ ಧವನ್ ಎಡ ಮೊಣ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಮಂಗಳವಾರ (ನವೆಂಬರ್ 26) ಬಿಸಿಸಿಐಯ ವೈದ್ಯಕೀಯ ತಂಡ ಧವನ್ ಅವರನ್ನು ಪರೀಕ್ಷಿಸಿದೆ,' ಎಂದು ಬಿಸಿಸಿಐ ಪ್ರಕಟನೆ ಮೂಲಕ ತಿಳಿಸಿದೆ.

ಜನಾಂಗೀಯ ನಿಂದನೆ ಪ್ರಕರಣ: ಆರ್ಚರ್‌ನ್ನು ನಿಂದಿಸಿದ ವ್ಯಕ್ತಿ ಪತ್ತೆ?ಜನಾಂಗೀಯ ನಿಂದನೆ ಪ್ರಕರಣ: ಆರ್ಚರ್‌ನ್ನು ನಿಂದಿಸಿದ ವ್ಯಕ್ತಿ ಪತ್ತೆ?

'ಧವನ್ ಕಾಲಿಗೆ ಗಂಭೀರವಾಗಿ ಕುಯ್ದಗಾಯವಾಗಿತ್ತು. ಹೀಗಾಗಿ ಹೊಲಿಗೆ ಗುಣಮುಖವಾಗಲು, ಧವನ್ ಸಂಪೂರ್ಣ ಚೇತರಿಕೊಳ್ಳಲು ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿದೆ. ಹೀಗಾಗಿ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಧವನ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ತರಲಾಗಿದೆ,' ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ!ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ!

ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಆತಿಥೇಯ ಭಾರತದ ವಿರುದ್ಧ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಪ್ರವಾಸ ಸರಣಿಯ ಮೊದಲ ಟಿ20 ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಡಿಸೆಂಬರ್ 6ರಂದು 7 pmಗೆ ಆರಂಭವಾಗಲಿದೆ.

Story first published: Wednesday, November 27, 2019, 13:32 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X