ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಾನು ಹೇಳುತ್ತಿದ್ದೇನೆ ರಿವ್ಯೂ ತಗೋ' ಎಂದ ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿತ್ತು

India vs West Indies: Virat Kohli convinced Rohit Sharma to for DRS in the first T20

ಒಂದೆಡೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಫೆಬ್ರವರಿ 16ರಿಂದ ಆರಂಭವಾಗಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಸುದ್ದಿಗೀಡಾಗಿದೆ.

ಐಪಿಎಲ್: ರೈನಾ ಬಿಕರಿಯಾಗದೇ ಇರಲು ಆತ ಧೋನಿ ವಿರುದ್ಧ ಮಾಡಿದ್ದ ಈ ಕೆಲಸ ಕಾರಣ ಎಂದ ಮಾಜಿ ಕ್ರಿಕೆಟಿಗಐಪಿಎಲ್: ರೈನಾ ಬಿಕರಿಯಾಗದೇ ಇರಲು ಆತ ಧೋನಿ ವಿರುದ್ಧ ಮಾಡಿದ್ದ ಈ ಕೆಲಸ ಕಾರಣ ಎಂದ ಮಾಜಿ ಕ್ರಿಕೆಟಿಗ

ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ಟೀಂ ಇಂಡಿಯಾ ವಿರುದ್ಧ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿದು ಎಲ್ಲಾ ಪಂದ್ಯಗಳಲ್ಲಿಯೂ ಹೀನಾಯವಾಗಿ ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಇತ್ತ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ಮೇಲೆ ಇದೇ ಮೊದಲ ಬಾರಿಗೆ ಈ ಸರಣಿ ಮೂಲಕ ಟೀಮ್ ಇಂಡಿಯಾವನ್ನು ಮುನ್ನಡೆಸಿದ ರೋಹಿತ್ ಶರ್ಮಾ ವೈಟ್ ವಾಷ್ ಸಾಧನೆ ಮಾಡುವ ಮೂಲಕ ಶುಭಾರಂಭವನ್ನು ಮಾಡಿದ್ದಾರೆ.

ರಣಜಿ 2022: ಕರ್ನಾಟಕ vs ರೈಲ್ವೇಸ್ ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ ಮತ್ತು ಹವಾಮಾನ ವರದಿರಣಜಿ 2022: ಕರ್ನಾಟಕ vs ರೈಲ್ವೇಸ್ ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ ಮತ್ತು ಹವಾಮಾನ ವರದಿ

ಹೀಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇದೀಗ ಕೆರಿಬಿಯನ್ನರ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು ಫೆಬ್ರವರಿ 16ರಂದು ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರವಿ ಬಿಷ್ಣೋಯಿ ತನ್ನ ಮೊದಲನೇ ಓವರ್ ಮಾಡಿದ ಸಂದರ್ಭದಲ್ಲಿ ಗೂಗ್ಲಿ ಎಸೆತವನ್ನು ಹಾಕಿದ್ದರು. ಈ ಎಸೆತ ಬ್ಯಾಟ್ಸ್‌ಮನ್‌ ರೋಸ್ಟನ್ ಚೇಸ್ ಹೊಡೆತಕ್ಕೆ ಸಿಗದೇ ವಿಕೆಟ್ ಕೀಪರ್ ರಿಷಭ್ ಪಂತ್ ಕೈಸೇರಿತ್ತು. ಚೆಂಡು ಕೈಸೇರುತ್ತಿದ್ದಂತೆ ರಿಷಭ್ ಪಂತ್ ಸ್ಟಂಪ್ ಔಟ್ ಮಾಡುವ ಯತ್ನವನ್ನು ಮಾಡಿದ್ದರು. ಹೀಗೆ ರಿಷಭ್ ಪಂತ್ ಚೆಂಡನ್ನು ವಿಕೆಟ್‌ಗೆ ತಾಗಿಸುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಔಟ್‌ಗಾಗಿ ಅಂಪೈರ್ ಬಳಿ ಮನವಿಯನ್ನು ಮಾಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ಅಂಪೈರ್ ವೈಡ್ ಎಂದು ತೀರ್ಪನ್ನು ಕೊಟ್ಟರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಮಾತನ್ನು ಕೇಳಿದ ಘಟನೆ ನಡೆಯಿತು. ಅದರ ವಿವರ ಮುಂದಿದೆ ಓದಿ..

ರಿವ್ಯೂ ತೆಗೆದುಕೊಳ್ಳುವಂತೆ ಸಲಹೆ ನೀಡಿದ ಕೊಹ್ಲಿ

ರಿವ್ಯೂ ತೆಗೆದುಕೊಳ್ಳುವಂತೆ ಸಲಹೆ ನೀಡಿದ ಕೊಹ್ಲಿ

ಇದೇ ಸಮಯಕ್ಕೆ ಬೌಲರ್ ರವಿ ಬಿಷ್ಣೋಯಿ ಸೇರಿ ಟೀಮ್ ಇಂಡಿಯಾದ ಕೆಲ ಆಟಗಾರರು ರೋಹಿತ್ ಶರ್ಮಾಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ ಅಂಪೈರ್ ವೈಡ್ ನೀಡಿದ್ದರಿಂದ ಗೊಂದಲಕ್ಕೆ ಒಳಗಾಗಿದ್ದ ರೋಹಿತ್ ಶರ್ಮಾ ರಿವ್ಯೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಬಳಿ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ 'ನಾನು ಹೇಳ್ತಾ ಇದ್ದೇನೆ ರಿವ್ಯೂ ತಗೋ' ಎಂದು ರೋಹಿತ್ ಶರ್ಮಾಗೆ ಸಲಹೆಯನ್ನು ನೀಡಿದರು.

ಕೊಹ್ಲಿ ಹೇಳುತ್ತಿದ್ದಂತೆ ರಿವ್ಯೂ ತೆಗೆದುಕೊಳ್ಳಲು ಮುಂದಾದ ರೋಹಿತ್ ಶರ್ಮಾ

ಕೊಹ್ಲಿ ಹೇಳುತ್ತಿದ್ದಂತೆ ರಿವ್ಯೂ ತೆಗೆದುಕೊಳ್ಳಲು ಮುಂದಾದ ರೋಹಿತ್ ಶರ್ಮಾ

ಹೀಗೆ ವಿರಾಟ್ ಕೊಹ್ಲಿ ನಾನು ಹೇಳುತ್ತಿದ್ದೇನೆ ರಿವ್ಯೂ ತೆಗೆದುಕೋ ಎಂದು ನೀಡಿದ ಸಲಹೆಯನ್ನು ತಿರಸ್ಕರಿಸದ ರೋಹಿತ್ ಶರ್ಮಾ ಕೊಹ್ಲಿ ಮಾತಿಗೆ ಮೌಲ್ಯ ಕೊಟ್ಟು ತಕ್ಷಣವೇ ಡಿಆರ್‌ಎಸ್ ಚಿಹ್ನೆಯನ್ನು ತೋರಿಸಿದರು. ಹೀಗೆ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಹೇಳಿದ ಮಾತಿಗೆ ರಿವ್ಯೂ ತೆಗೆದುಕೊಂಡ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊಂದಾಣಿಕೆಯ ಕುರಿತು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ವಿರಾಟ್ ಕೊಟ್ಟ ಗಿಫ್ಟ್ ನೋಡಿ ಬಿಕ್ಕಿ‌ಬಿಕ್ಕಿ ಅತ್ತಿದ್ದ ಸಚಿನ್‌ ಆ ಕ್ಷಣವನ್ನು ಇಂದಿಗೂ ಮರೆತಿಲ್ಲ |Oneindia Kannada
ರಿವ್ಯೂನಲ್ಲಿಯೂ ನಾಟೌಟ್ ಆದರೆ ಭಾರತದ ಡಿಆರ್‌ಎಸ್ ಸೇಫ್

ರಿವ್ಯೂನಲ್ಲಿಯೂ ನಾಟೌಟ್ ಆದರೆ ಭಾರತದ ಡಿಆರ್‌ಎಸ್ ಸೇಫ್

ಸ್ಟಂಪ್ ಔಟ್‌ಗಾಗಿ ಮನವಿ ಮಾಡಿದ್ದ ಟೀಮ್ ಇಂಡಿಯಾಗೆ ಬ್ಯಾಟ್ಸ್‌ಮನ್‌ ಸ್ಕ್ರೀಸ್ ಒಳಗೆ ಇದ್ದಿದ್ದರಿಂದ ಹಿನ್ನಡೆಯುಂಟಾಯಿತು. ಆದರೆ ಟೀಮ್ ಇಂಡಿಯಾ ರಿವ್ಯೂ ನಷ್ಟವಾಗಲಿಲ್ಲ. ಏಕೆಂದರೆ ರೋಹಿತ್ ಶರ್ಮಾ ಡಿಆರ್‌ಎಸ್ ತೆಗೆದುಕೊಳ್ಳುವ ಮುನ್ನವೇ ತೃತೀಯ ಅಂಪೈರ್ ಸ್ಟಂಪ್ ಔಟ್ ರಿವ್ಯೂವನ್ನು ಸ್ವತಃ ಕೈಗೆತ್ತಿಕೊಂಡಿದ್ದರು. ಹೀಗಾಗಿ ಇಲ್ಲಿ ರೋಹಿತ್ ಶರ್ಮಾ ತೆಗೆದುಕೊಂಡಿದ್ದ ಡಿಆರ್‌ಎಸ್ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದುದರಿಂದ ಭಾರತದ ಪಾಲಿನ ಆ ಡಿಆರ್‌ಎಸ್ ನಷ್ಟವಾಗದೆ ಹಾಗೇ ಉಳಿಯಿತು.

Story first published: Thursday, February 17, 2022, 17:51 [IST]
Other articles published on Feb 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X