ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್: ಭರ್ಜರಿ ಅರ್ಧ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿ

India vs West Indies: Virat Kohli equals Rohit Sharmas record of 30 T20I fiftys

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ಅಧ್ಭುತ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಮಾತ್ರವಲ್ಲದೆ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ವೆಸ್ಟ್ ಇಂಡಿಸ್ ವಿರುದ್ದದ ಸಂಪೂರ್ಣ ಸರಣಿಯಲ್ಲಿ ಹಿನ್ನೆಡೆಯನ್ನು ಅನುಭವಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅರ್ಧ ಶತಕ ಸಿಡಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 30ನೇ ಅರ್ಧ ಶತಕವಾಗಿದೆ.

ಈ ಅರ್ಧ ಶತಕದ ಮೂಲಕ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮಾ ಸಾಧನೆಯನ್ನು ಸರಿಗಟ್ಟಿದ್ದಾರೆ. ರೋಹಿತ್ ಶರ್ಮಾ ಕೂಡ 30 ಅರ್ಧ ಶತಕವನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಹೀಗಾಗಿ ಭಾರತದ ಇಬ್ಬರು ಶ್ರೇಷ್ಠ ಆಟಗಾರರು ಈಗ ಚುಟುಕು ಮಾದರಿಯಲ್ಲಿ ಪ್ರಮುಖ ಸಾಧನೆಯೊಂದನ್ನು ಮಾಡಿದ್ದಾರೆ.

ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!

ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ ಭಾರತದ ಏಕೈಕ ಆಟಗಾರ

ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ ಭಾರತದ ಏಕೈಕ ಆಟಗಾರ

ಗಮನಾರ್ಹ ಸಂಗತಿಯೆಂದರೆ ಟಿ20 ಮಾದರಿಯಲ್ಲಿ 10,000ಕ್ಕೂ ಅಧಿಕ ರನ್‌ಗಳಿಸಿದ ಭಾರತ ಏಕೈಕ ಆಟಗಾರನಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ಪ್ರಮುಖ ಆಟಗಾರ ಕೊಹ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಟಿ30 ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು 14529 ರನ್‌ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶೋಯೆಬ್ ಮಲಿಕ್ ಇದ್ದು 11,611 ರನ್‌ಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿರುವ ಇತರ ಆಟಗಾರರಾದ ಕೀರಾನ್ ಪೊಲಾರ್ಡ್ (11419), ಆರೋನ್ ಫಿಂಚ್ (10434), ಮತ್ತು ಡೇವಿಡ್ ವಾರ್ನರ್ 10,308 ರನ್ ಗಳಿಸಿದ್ದಾರೆ.

ಭರ್ಜರಿ ಪ್ರದರ್ಶನ ನೀಡಿದ ಕೊಹ್ಲಿ

ಭರ್ಜರಿ ಪ್ರದರ್ಶನ ನೀಡಿದ ಕೊಹ್ಲಿ

ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧ ಆಡಲಿಳಿಯುವ ಮುನ್ನ ವಿರಾಟ್ ಕೊಹ್ಲಿ 96 ಪಂದ್ಯಗಳಲ್ಲಿ 29 ಅರ್ಧ ಶತಕವನ್ನು ಗಳಿಸಿದ್ದರು. ಆದರೆ ಅಂತಾರಾಷ್ಟ್ರೀಯ ಚುಟುಕು ಮಾದರಿಯಲ್ಲಿ ವಿರಾಟ್ ಕೊಹ್ಲಿ ಇನ್ನೂ ಒಂದೂ ಶತಕವನ್ನು ಬಾರಿಸಿಲ್ಲ. ಟಿ20Iನಲ್ಲಿ ವಿರಾಟ್ ಕೊಹ್ಲಿ 51ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ವಿಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 41 ಎಸೆತಗಳನ್ನು ಎದುರಿಸಿದ್ದ 52 ರನ್ ಬಾರಿಸಿ ಮಿಂಚಿದ್ದಾರೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 6283 ರನ್‌ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ 5 ಅರ್ಧ ಶತಕವನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ.

ಭಾರತದ ಉತ್ತಮ ಬ್ಯಾಟಿಂಗ್

ಭಾರತದ ಉತ್ತಮ ಬ್ಯಾಟಿಂಗ್

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನಿಡುವ ಮೂಲಕ ಬೃಹತ್ ಗುರಿಯನ್ನು ವಿಂಡಿಸ್ ಪಡೆಯ ಮುಂದಿಟ್ಟಿದೆ. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭಾರತ 186 ರನ್‌ಗಳಿಸಿದೆ. ಭಾರತದ ಪರವಾಗಿ ವಿರಾಟ್ ಕೊಹ್ಲಿ 52 ರನ್‌ಗಳಿಸಿದರೆ ರಿಷಬ್ ಪಂತ್ ಕೂಡ ಕೇವಲ 28 ಎಸೆತಗಳಲ್ಲಿ 52 ರನ್‌ಗಳಿಸಿದರು. ಆಲ್‌ರೌಂಡರ್ ವೆಂಕಟೇಶ್ ಐಯ್ಯರ್ ಕೂಡ 18 ಎಸೆತಗಳಲ್ಲಿ 33 ರನ್‌ ಸಿಡಿಸಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇದರ ಪರಿಣಾಮವಾಗಿ ಭಾರತ ವಿಂಡೀಸ್ ಪಡೆಗೆ ದೊಡ್ಡ ಮೊತ್ತದ ಗುರಿಯನ್ನು ನಿಗದಿಪಡಿಸಿದೆ.

ಬಾಲ್ ಒದ್ದು Bhubaneswar ಮೇಲೆ Rohit Sharma ಕೋಪ ತೋರಿಸಿದ ವಿಡಿಯೋ ವೈರಲ್ | Oneindia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಾಲ್.

ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಕೀರಾನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಶೆಲ್ಡನ್ ಕಾಟ್ರೆಲ್.

Story first published: Saturday, February 19, 2022, 8:58 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X