ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಧೋನಿ ಧಾಖಲೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿ

IND vs WI 2nd test : ಧೋನಿಯನ್ನು ಮೀರಿಸುವ ಹೊಸ್ತಿಲಲ್ಲಿ ಕೊಹ್ಲಿ | Oneindia Kannada
India vs West Indies: Virat Kohli set to surpass MS Dhonis record

ಕಿಂಗ್ಸ್‌ಟನ್, ಆಗಸ್ಟ್ 29: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿರುವ ಧೀರ್ಘ ಕಾಲದ ದಾಖಲೆಯೊಂದನ್ನು ನಾಯಕ ವಿರಾಟ್ ಕೊಹ್ಲಿ ಮುರಿಯುವುದರಲ್ಲಿದ್ದಾರೆ. ವೆಸ್ಟ್ ಇಂಡೀಸ್ vs ಭಾರತ 2ನೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡುವುದರಲ್ಲಿದ್ದಾರೆ.

ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!

ಜಮೈಕಾದ ಕಿಂಗ್ಸ್‌ಟನ್‌ನಲ್ಲಿರುವ ಸಬಿನಾ ಪಾರ್ಕ್ ಸ್ಟೇಡಿಯಂನಲ್ಲಿ ಆಗಸ್ಟ್ 30ರಂದು ನಡೆಯಲಿರುವ ದ್ವಿತೀಯ ಮತ್ತು ಕೊನೆಯ ಟೆಸ್ಟ್‌ನಲ್ಲಿ ಭಾರತ ತಂಡವೇನಾದರೂ ಗೆದ್ದರೆ, ಧೋನಿ ಹೆಸರಿನಲ್ಲಿರುವ ದಾಖಲೆಯೊಂದು ಮುರಿದು ಹೋಗಲಿದೆ.

85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!

ಭಾರತ ತಂಡವನ್ನು ಮುನ್ನಡೆಸಿ ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದ ನಾಯಕರಾಗಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಈ ದಾಖಲೆ ಸರಿದೂಗಿಸಿಕೊಂಡಿದ್ದಾರೆ.

27 ಪಂದ್ಯಗಳಲ್ಲಿ ಗೆಲುವು

27 ಪಂದ್ಯಗಳಲ್ಲಿ ಗೆಲುವು

ಧೋನಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಭಾರತ 27 ಪಂದ್ಯಗಳಲ್ಲಿ ಗೆದ್ದು, 18 ಪಂದ್ಯಗಳಲ್ಲಿ ಸೋತು, 15 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ 47 ಪಂದ್ಯಗಳನ್ನಾಡಿದ್ದು, ಇದರಲ್ಲಿ 27 ಗೆಲುವು, 10 ಸೋಲು, 15 ಪಂದ್ಯಗಳು ಡ್ರಾ ಎನಿಸಿವೆ.

ಗಂಗೂಲಿಗೆ 3ನೇ ಸ್ಥಾನ

ಗಂಗೂಲಿಗೆ 3ನೇ ಸ್ಥಾನ

ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 318 ರನ್‌ಗಳಿಂದ ಗೆದ್ದುಕೊಂಡಿದ್ದರಿಂದ ಧೋನಿ ದಾಖಲೆಯನ್ನು ಕೊಹ್ಲಿ ಸರಿದೂಗಿಸಿಕೊಂಡಿದ್ದರು. ಟೆಸ್ಟ್‌ ನಾಯಕತ್ವದಲ್ಲಿ ಭಾರತ ಅತೀ ಹೆಚ್ಚು ಜಯಗಳಿಸಿದ ದಾಖಲೆ ಸಾಲಿನಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ 3ನೇ ಸ್ಥಾನದಲ್ಲಿದ್ದಾರೆ. 49 ಪಂದ್ಯಗಳಲ್ಲಿ ಗಂಗೂಲಿ ನಾಯಕತ್ವದಲ್ಲಿ ವಹಿಸಿದ್ದು, ಇದರಲ್ಲಿ 21 ಜಯ, 13 ಸೋಲು, 15 ಡ್ರಾ ಎನಿಸಿತ್ತು.

ಕೊಹ್ಲಿ ಮತ್ತೊಂದು ದಾಖಲೆ

ಕೊಹ್ಲಿ ಮತ್ತೊಂದು ದಾಖಲೆ

ವಿದೇಶದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದವರಲ್ಲಿ ಕೊಹ್ಲಿ, ಗಂಗೂಲಿಯನ್ನು ಮೀರಿಸಿದ್ದಾರೆ. ವಿದೇಶದಲ್ಲಿ ನಡೆದ 26 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ 12 ಗೆಲುವು, 9 ಸೋಲು, 5 ಪಂದ್ಯಗಳು ಡ್ರಾ ಎನಿಸಿವೆ.

ಎಂಎಸ್‌ಡಿ ತೃತೀಯ

ಎಂಎಸ್‌ಡಿ ತೃತೀಯ

ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ ಹೆಚ್ಚು ಗೆಲುವು ದಾಖಲಿಸಿದವರಲ್ಲಿ ದ್ವಿತೀಯ ಸ್ಥಾನದಲ್ಲಿರುವ ಗಂಗೂಲಿ, 28 ಪಂದ್ಯಗಳಲ್ಲಿ 11 ಜಯ, 10 ಸೋಲು, 5 ಡ್ರಾ ಎನಿಸಿವೆ, ಎಂಎಸ್ ಧೋನಿ ನಾಯಕತ್ವದಲ್ಲಿ 30 ಪಂದ್ಯಗಳಲ್ಲಿ ಭಾರತ 6 ಗೆಲುವು, 15 ಸೋಲು, 9 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.

Story first published: Thursday, August 29, 2019, 17:09 [IST]
Other articles published on Aug 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X