ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತvs ವೆಸ್ಟ್‌ಇಂಡೀಸ್ ಎರಡನೇ ಟಿ20 :ತವರಿನಲ್ಲಾದರೂ ಸಂಜು ಗೆ ಸಿಗುತ್ತಾ ಅವಕಾಶ:

India vs West indies; will sanju samson make it to playing 11?

ಸಂಜು ಸ್ಯಾಮ್ಸನ್‌ ಪ್ರತಿಭಾವಂತ ಕ್ರಿಕೆಟಿಗ. ಅಂಡರ್‌19 ಹಾಗೂ ಐಪಿಎಲ್‌ನಲ್ಲಿ ಮಿಂಚಿರುವ ಈ ಆಟಗಾರನಿಗೆ ಅದೋಕೋ ಸರಿಯಾಗಿ ಅವಕಾಶಗಳೇ ದೊರೆಯುತ್ತಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿದೆ. ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಯುವ ಕ್ರಿಕೆಟಿಗ ರಿಷಬ್ ಪಂತ್ ಕೈಗೆ ಗ್ಲೌಸ್ ತೊಡಿಸಲಾಗಿದೆ. ಆದರೆ ರಿಷಬ್ ತನ್ನ ಮೇಲಿನ ಒತ್ತಡವನ್ನು ನಿಭಾಯಿಸುವಲ್ಲಿ ಎಡವಿ ಪದೇ ಪದೇ ವಿಫಲರಾಗುತ್ತಿದ್ದಾರೆ.

ಪ್ರತಿ ಪಂದ್ಯದಲ್ಲೂ ರಿಷಬ್ ಪಂತ್‌ ಎಡವುತ್ತಲೇ ಇದ್ದಾರೆ. ಆದರೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತೆ ಮತ್ತೆ ಅವಕಾಶಗಳನ್ನು ನೀಡುತ್ತಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಪಂತ್ ಬೆನ್ನಿಗೆ ನಿಂತಿದ್ದಾರೆ. ಕ್ರಿಕೆಟಿಗರು ಮಾತ್ರವಲ್ಲ ಅಭಿಮಾನಿಗಳು ಕೂಡ ಪಂತ್‌ಗೆ ಬೆಂಬಲವನ್ನು ನೀಡಬೇಕು. ಪಂತ್ ಎಡವಿದಾಗ ಧೋನಿ ಧೋನಿ ಎಂದು ಕೂಗಿದರೆ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ

ಆದರೆ ಪಂತ್‌ನಷ್ಟೇ ಪ್ರತಿಭಾವಂತ ಇರುವಾಗ ಆ ಇನ್ನೊಂದು ಪ್ರತಿಭೆಗೆ ಅನ್ಯಾಯವಾಗುತ್ತಿದೆಯೇನೋ ಅನ್ನುವ ಮಾತು ಕ್ರಿಕೆಟ್ ಅಭಿಮಾನಿಗಳಿಂದ ಕೇಳಿ ಬರುತ್ತಿದೆ.

ರಿಷಬ್ ಪಂತ್ 22 ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿರೋದು ಕೇವ 5 ಪಂದ್ಯಗಳಲಲ್ಲಿ ಮಾತ್ರ. ಉಳಿದ 17 ಇನ್ನಿಂಗ್ಸ್‌ಗಳಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವತ್ತು ಸಂಜು ಸ್ಯಾಮ್ಸನ್‌ನವರು ಅಂಗಳ ತಿರುವನಂತಪುರಂನಲ್ಲಿ ಪಂದ್ಯ ನಡೆಯಲಿದೆ. ಈ ಪದ್ಯದಲ್ಲಾದರೂ ಸಂಜು ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರಾ ಅನ್ನೋದು ಕಾದು ನೋಡಬೇಕಿದೆ.

ಕಳೆದ ಪಂದ್ಯದ ಪ್ರದರ್ಶನವನ್ನು ನೋಡಿದರೆ ಪಂತ್‌ ಸ್ಥಾನವನ್ನು ಉಳಿಸಿಕೊಂಡೇ ಮತ್ತೋರ್ವ ಆಟಗಾರನ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ಮಾಡಿಕೊಟ್ಟರೂ ಅಚ್ಚರಿಯಿಲ್ಲ. ಅದು ಆಲ್ರೌಂಡರ್ ವಾಶಿಂಗಟನ್‌ ಸುಂದರ್. ಕಳೆದ ಪಂದ್ಯದಲ್ಲಿ ವಾಶಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಂದ ಸರಿಯಾಗಿ ಚಚ್ಚಿಸಿಕೊಂಡರೆ ಫೀಲ್ಡಿಂಗ್‌ನಲ್ಲೂ ಕ್ಯಾಚ್‌ ಕೈಚೆಲ್ಲಿ ದುಬಾರಿ ಎನಿಸಿದರು. ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ಈ ಇಬ್ರು ಆಲ್‌ರೌಂಡರ್‌ಗಳು ಇರುವಾಗ ಸಂಜುಗೆ ಈ ಸ್ಥಾನದಲ್ಲಿ ಅವಕಾಶ ದೊರೆತರೂ ಅಚ್ಚರಿಯಿಲ್ಲ.

ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!

ಚೇಸಿಂಗ್ ಕಿಂಗ್ ಎನಿಸಿರುವ ಟೀಮ್ ಇಂಡಿಯಾ ಹೆಸರಿಗೆ ತಕ್ಕಂತೆ ಮೊದಲ ಪಂದ್ಯದ ದೊಡ್ಡ ಮೊತ್ತವನ್ನು ಬೆನ್ನತ್ತಿ ಗೆಲುವು ದಕ್ಕಿಸಿಕೊಂಡಿತು. ಇಂದು ಎರಡೂ ತಂಡಗಳು ಎರಡನೇ ಪಂದ್ಯಕ್ಕೆ ಸಜ್ಜಾಗಿದ್ದು ಈಗಾಗಲೇ ತಿರುವನಂತಪುರಂಗೆ ಕಾಲಿಟ್ಟಿದೆ.

Story first published: Sunday, December 8, 2019, 14:32 [IST]
Other articles published on Dec 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X