ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: 4ನೇ ಕ್ರಮಾಂಕಕ್ಕೆ ಮರಳಲಿದ್ದಾರೆ ಕೆಎಲ್ ರಾಹುಲ್

India vs West Indies: With Shikhar Dhawan back, KL Rahul could be back at No. 4

ಗಯಾನಾ, ಆಗಸ್ಟ್ 7: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಆಗಸ್ಟ್ 8ರಂದು ಏಕದಿನ ಪಂದ್ಯವನ್ನಾಡಲಿದೆ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಆಘಾತ ಅನುಭವಿಸಿದ್ದ ಬಳಿಕ ಆಡುತ್ತಿರುವ ಮೊದಲ ಏಕದಿನ ಪಂದ್ಯವಿದು.

ಭಾರತ vs ವೆಸ್ಟ್ ಇಂಡೀಸ್: ಟಿ20ಐ ದಾಖಲೆ ಬರೆದ ದೀಪಕ್ ಚಹಾರ್ಭಾರತ vs ವೆಸ್ಟ್ ಇಂಡೀಸ್: ಟಿ20ಐ ದಾಖಲೆ ಬರೆದ ದೀಪಕ್ ಚಹಾರ್

3 ಪಂದ್ಯಗಳ ಟಿ20 ಸರಣಿಯಲ್ಲಿ ಮೂರೂ ಪಂದ್ಯಗಳನ್ನು ಗೆದ್ದು ವಿಂಡೀಸ್ ವಿರುದ್ಧ ಕ್ಲೀನ್‌ಸ್ವೀಪ್‌ ಸಾಧಿಸಿರುವ ಭಾರತ, 3 ಪಂದ್ಯಗಳ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಅಂತಿಮ ಟಿ20ಯಲ್ಲಿ ಆರಂಭಿಕರಾಗಿ ಶಿಖರ್ ಧವನ್-ಕೆಎಲ್ ರಾಹುಲ್ ಆಡಿದ್ದರು. ಆದರೆ ಮೊದಲ ಏಕದಿನದಲ್ಲಿ ರಾಹುಲ್ ಮತ್ತೆ 4ನೇ ಕ್ರಮಾಂಕಕ್ಕೆ ಮರಳಲಿದ್ದಾರೆ.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಉಪನಾಯಕ ರೋಹಿತ್ ಶರ್ಮಾ ಜೊತೆ ಧವನ್ ಆರಂಭಿಕರಾಗಿ ಇಳಿಯಲಿದ್ದಾರೆ. ಹೀಗಾಗಿ ಇಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ರಾಹುಲ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. 5ನೇ ಸ್ಥಾನದಲ್ಲಿ ಕೇದಾರ್ ಜಾಧವ್, 6ನೇ ಕ್ರಮಾಂಕದಲ್ಲಿ ರಿಷಬ್ ಪಂತ್‌ ಬರುವ ಸಾಧ್ಯತೆಯಿದೆ. 5ರಲ್ಲಿ ಪಂತ್, 6ರಲ್ಲಿ ಜಾಧವ್ ಬಂದರೂ ಬರಬಹುದು.

ವಿಝ್ಝಿ ಟ್ರೋಫಿಗಾಗಿ ಮುಂಬೈ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ವಿಝ್ಝಿ ಟ್ರೋಫಿಗಾಗಿ ಮುಂಬೈ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್

ಭಾರತ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್.

ವೆಸ್ಟ್ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ಕ್ಯಾಪ್ಟನ್), ಕ್ರಿಸ್ ಗೇಲ್, ಜಾನ್ ಕ್ಯಾಂಪ್ಬೆಲ್, ಎವಿನ್ ಲೂಯಿಸ್, ಶೈ ಹೋಪ್, ಶಿಮ್ರಾನ್ ಹೆಟ್ಮೈಯರ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಫ್ಯಾಬಿಯನ್ ಅಲೆನ್, ಕಾರ್ಲೋಸ್ ಬ್ರಾಥ್‌ವೈಟ್, ಕೀಮೋ ಪಾಲ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್, ಕೆಮರ್ ರೋಚ್.

Story first published: Wednesday, August 7, 2019, 18:56 [IST]
Other articles published on Aug 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X