ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್, ರಾಯುಡು ಶತಕ: ವಿಂಡೀಸ್ ವಿರುದ್ಧ ಭಾರತಕ್ಕೆ 224 ರನ್ ಜಯ

INDIA v/s WEST INDIES :ಭಾರತಕ್ಕೆ 224 ರನ್ ಗಳ ಅಮೋಘ ಜಯ | Oneindia Kannada
India vs Windies, 4th ODI - Live Score

ಮುಂಬೈ, ಅಕ್ಟೋಬರ್ 29: ಮುಂಬೈಯ ಬ್ರಾಬೌರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ 224 ರನ್ ಭರ್ಜರಿ ಜಯ ಸಾಧಿಸಿದೆ. ಉಪನಾಯಕ ರೋಹಿತ್ ಶರ್ಮಾ ಮತ್ತು ಅಂಬಾಟಿ ರಾಯುಡು ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ ಕೆರಿಬಿಯನ್ನರನ್ನು ಸುಲಭವಾಗಿ ಮಣಿಸಿತು. ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಕೂಡ ತಂಡದ ಗೆಲುವಿನಲ್ಲಿ ಪ್ರಮುಖರೆನಿಸಿದರು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44269

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತ, ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತು. ಶಿಖರ್ ಧವನ್ 38, ವಿರಾಟ್ ಕೊಹ್ಲಿ 16 ರನ್ ಗಳಿಸಿ ನಿರ್ಗಮಿಸಿದರು. ಆದರೆ ರೋಹಿತ್ ಶರ್ಮಾ ಮತ್ತು ರಾಯುಡು ಜೋಡಿ ತಂಡದ ಬಲವಾಗಿ ನಿಂತಿತು.

ರೋಹಿತ್ ಶರ್ಮಾ, 137 ಎಸೆತಗಳಿಗೆ 162 ರನ್ ಸೇರಿಸಿದರಲ್ಲದೆ 21ನೇ ಅಂತಾರಾಷ್ಟ್ರೀಯ ಶತಕವನ್ನೂ ಪೂರೈಸಿದರು. ಈ ವೇಳೆ ರೋಹಿತ್ 7ನೇ ಬಾರಿ 150+ರನ್ ಗಳಿಸಿದ ಮೈಲಿಗಲ್ಲನ್ನೂ ಸ್ಥಾಪಿಸಿದರು. ರಾಯುಡು ಕೂಡ 81 ಎಸೆತಗಳಿಗೆ 100 ರನ್ ಪೇರಿಸುವ ಮೂಲಕ ಉತ್ತಮ ಜೊತೆಯಾಟ ನೀಡಿದರು. ಭಾರತ 50 ಓವರ್ ಗೆ 5 ವಿಕೆಟ್ ಕಳೆದು 377 ರನ್ ಪೇರಿಸಿತು.

ಗುರಿ ಬೆನ್ನತ್ತಿದ ವಿಂಡೀಸ್ ಗೆ ಆರಂಭಿಕ ಆಟಗಾರರನ್ನು ಒಳಗೊಂಡಂತೆ ಬಹುತೇಕ ಬ್ಯಾಟ್ಸ್ಮನ್ ಗಳ ಬೆಂಬಲ ಸಿಗಲಿಲ್ಲ. ಚಂದ್ರಪೌಲ್ ಹೇಮರಾಜ್ 14, ಕೀರನ್ ಪೊವೆಲ್ 4, ಶೈ ಹೋಪ್ 0, ಮರ್ಲಾನ್ ಸ್ಯಾಮ್ಯುಯೆಲ್ಸ್ 18, ಶಿಮ್ರಾನ್ ಹೆಟ್ಮರ್ 13, ರೋವ್ಮನ್ ಪೊವೆಲ್ 1ಗೆ ವಿಕೆಟ್ ಒಪ್ಪಿಸಿದ್ದು ತಂಡದ ಕಳಪೆ ಬ್ಯಾಟಿಂಗ್ ಗೆ ಸಾಕ್ಷಿಯಾಯಿತು. ಹೀಗಾಗಿ ವಿಂಡೀಸ್ 36.2 ಓವರ್ ಗೆ ಎಲ್ಲಾ ವಿಕೆಟ್ ಕಳೆದು 153 ರನ್ ಪೇರಸಿ ಸೋಲೊಪ್ಪಿಕೊಂಡಿತು.

ವಿಂಡೀಸ್ ತಂಡದ ಪರ ಜೇಸನ್ ಹೋಲ್ಡರ್ ಒಬ್ಬರೇ 54 ರನ್ ಸೇರಿಸಿ ತಂಡದ ಗೆಲುವಿಗೆ ಹೋರಾಡಿದರಾದರೂ ಬ್ಯಾಟಿಂಗ್ ವಿಭಾಗದ ನಿರ್ಲಕ್ಷ್ಯದಿಂದ ವೆಸ್ಟ್ ಇಂಡೀಸ್ ಸೋಲಿನ ಬೆಲೆ ತೆರಬೇಕಾಯ್ತು. ಭಾರತ ಪರ ಬೌಲಿಂಗ್ ವಿಭಾಗದಲ್ಲಿ ಮಿಂಚಿದ ಕೆ ಖಲೀಲ್ ಅಹ್ಮದ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್ ಉರುಳಿಸಿ ವಿಂಡೀಸ್ ಬ್ಯಾಟ್ಸ್ಮನ್ ಗಳನ್ನು ಕಾಡಿದರು.

ಅಕ್ಟೋಬರ್ 27ರಂದು ಪುಣೆಯಲ್ಲಿ ನಡೆದಿದ್ದ 3ನೇ ಏಕದಿನದಲ್ಲಿ ಭಾರತ 43 ರನ್ ಗಳಿಂದ ವೆಸ್ಟ್ ಇಂಡೀಸ್ ಗೆ ಶರಣಾಗಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಹೊರತಾಗಿ ಉಳಿದ ಬ್ಯಾಟ್ಸ್ಮನ್ ಗಳ ಬೆಂಬಲವಿಲ್ಲದೆ ಭಾರತ ಸೋಲೊಪ್ಪಿಕೊಂಡಿತ್ತು. ಒಂದು ಪಂದ್ಯ ಟೈಗೊಂಡಿದ್ದರಿಂದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1ರ ಮುನ್ನಡೆಯಲ್ಲಿದೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ರೋಹಿತ್ ಶರ್ಮಾ ಪಡೆದುಕೊಂಡರು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ಡಬ್ಲ್ಯೂ), ಕೇದಾರ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಕೆ ಖಲೀಲ್ ಅಹ್ಮದ್, ಜಾಸ್‌ಪ್ರೀತ್ ಬೂಮ್ರಾ.

ವಿಂಡೀಸ್ ತಂಡ: ಕೀರಾನ್ ಪೊವೆಲ್, ಚಂದ್ರಪಾಲ್ ಹೇಮ್ರಾಜ್, ಶೈ ಹೋಪ್ (W), ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರಾನ್ ಹೆಟ್ಮರ್, ರೋವ್ಮನ್ ಪೊವೆಲ್, ಜಾಸನ್ ಹೋಲ್ಡರ್ (ಸಿ), ಫ್ಯಾಬಿಯನ್ ಅಲೆನ್, ಆಶ್ಲೆ ನರ್ಸ್, ಕೆಮರ್ ರೋಚ್, ಕೀಮೊ ಪಾಲ್

Story first published: Monday, October 29, 2018, 20:53 [IST]
Other articles published on Oct 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X