Ind vs Zim 1st ODI: ಟಾಸ್ ವರದಿ, ಪ್ಲೇಯಿಂಗ್ 11, LIVE SCORE

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಭಾರತ ತಂಡದಲ್ಲಿ ಯುವ ಆಟಗಾರರೇ ತುಂಬಿಕೊಂಡಿದ್ದು, ನಾಯಕ ರಾಹುಲ್ ಸೇರಿದಂತೆ ದೀಪಕ್ ಚಹಾರ್ ಮತ್ತು ಕುಲ್‌ದೀಪ್ ಯಾದವ್ ಬಹಳ ಸಮಯದ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ.

ಐಪಿಎಲ್ 2022ರ ಸೀಸನ್‌ಗೂ ಮುನ್ನ ಫೆಬ್ರವರಿಯಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಕೆ.ಎಲ್ ರಾಹುಲ್ ಬಳಿಕ ಅನೇಕ ಕ್ರಿಕೆಟ್ ಸರಣಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇದೀಗ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹೊಂದಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಕೊಹ್ಲಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿರಂತಹ ಪ್ರಮುಖ ಸ್ಟಾರ್‌ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ.

1
54620
ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಓಪನಿಂಗ್

ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಓಪನಿಂಗ್

ಶಿಖರ್ ಧವನ್ ಜೊತೆಗೆ ಕೆ.ಎಲ್ ರಾಹುಲ್ ಓಪನಿಂಗ್ ಬ್ಯಾಟಿಂಗ್ ಮಾಡಲಿದ್ದು, ಶುಭಮನ್ ಗಿಲ್‌ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಆದ್ರೆ ರಾಹುಲ್ ತ್ರಿಪಾಠಿ ಚೊಚ್ಚಲ ಪಂದ್ಯವನ್ನಾಡುವ ನಿರಾಸೆಯಾಗಿದೆ.

ಜಿಂಬಾಬ್ವೆ ಮತ್ತು ಭಾರತ ತಂಡಗಳು ಇದುವರೆಗೆ 63 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಜಿಂಬಾಬ್ವೆ ಕೇವಲ 10 ಪಂದ್ಯಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ 51 ಪಂದ್ಯಗಳಲ್ಲಿ ಗೆಲುವಿನ ಗೆರೆ ದಾಟಿದ್ದು, ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.

ಮೊದಲ ಏಕದಿನ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನ ಮುಂದೆ ತಿಳಿಯಿರಿ.

KKR ಹೊಸ ಕೋಚ್‌ ಚಂದ್ರಕಾಂತ್ ಪಂಡಿತ್ ಹಿನ್ನಲೆ ಏನು? ಬ್ರೆಂಡನ್ ಮೆಕಲಮ್‌ಗಿಂತ ಉತ್ತಮರೇ?

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್

ಬೆಂಚ್‌: ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಅವೇಶ್‌ ಖಾನ್, ಶಬಾಜ್ ನದೀಮ್, ರುತುರಾಜ್ ಗಾಯಕ್ವಾಡ್‌

NZ vs WI: ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತ ವಿಲಿಯಮ್ಸನ್ ಬಳಗ

ಭಾರತ-ಜಿಂಬಾಬ್ವೆ ಮೊದಲ ಪಂದ್ಯದಲ್ಲಿರ್ತಾರಾ ಆರ್‌.ಸಿ.ಬಿ ಹುಡುಗ ಶಾಬಾಜ್..? *Cricket | OneIndia Kannada
ಜಿಂಬಾಬ್ವೆ ಪ್ಲೇಯಿಂಗ್ ಇಲೆವೆನ್‌

ಜಿಂಬಾಬ್ವೆ ಪ್ಲೇಯಿಂಗ್ ಇಲೆವೆನ್‌

ತಡಿವಾನಾಶೆ ಮರುಮನಿ, ಇನೋಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ(ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ರಿಚರ್ಡ್ ನ್ಗರವ

ಬೆಂಚ್ : ತಕುಡ್ಜ್ವಾನಾಶೆ ಕೈಟಾನೊ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ, ಕ್ಲೈವ್ ಮದಂಡೆ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ತನಕಾ ಚಿವಂಗಾ

ಭಾರತ vs ಜಿಂಬಾಬ್ವೆ ಸರಣಿಯ ನೇರ ಪ್ರಸಾರ ಯಾವ ಚಾನೆಲ್‌ನಲ್ಲಿ ಲಭ್ಯ? ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

For Quick Alerts
ALLOW NOTIFICATIONS
For Daily Alerts
Story first published: Thursday, August 18, 2022, 12:44 [IST]
Other articles published on Aug 18, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X