ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಜಿಂಬಾಬ್ವೆ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಬಲ್ಲ ಮೂವರು ಆಟಗಾರರು ಇವರು!

India vs Zimbabwe ODI series: 3 cricketers who can score the most runs in ODI series

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ. ಕೆಎಲ್ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಸರಣಿಯಿಂದ ಹೊರಗುಳಿದಿದ್ದಾರೆ. ಈ ಸರಣಿಯ ಮೂರು ಪಂದ್ಯಗಳು ಕೂಡ ಹರಾರೆಯಲ್ಲಿ ನಡೆಯಲಿದೆ.

ಕಳೆದ ಕೆಲ ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಗಾಯದ ಕಾರಣಕ್ಕೆ ದೂರವುಳಿದಿದ್ದ ಕೆಎಲ್ ರಾಹುಲ್ ಈ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಆಡಿದ ಬಳಿಕ ರಾಹುಲ್ ಇದೇ ಮೊದಲ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆರಂಭದಲ್ಲಿ ಈ ಸರಣಿಗೆ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಶಿಖರ್ ಧವನ್ ಅವರನ್ನು ಈ ಸರಣಿಗೆ ನಾಯಕನನ್ನಾಗಿ ನೇಮಕಗೊಳಿಸಲಾಗಿತ್ತು. ಆದರೆ ಬಳಿಕ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ನಾಯಕನನ್ನಾಗಿ ನೇಮಿಸಲಾಯಿತು.

ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?

ಇನ್ನು ಈ ಸರಣಿಯಲ್ಲಿ ಭಾಗವಹಿಸುವ ಭಾರತ ಹಾಗೂ ಜಿಂಬಾಬ್ವೆ ಎರಡು ತಂಡಗಳಲ್ಲಿಯೂ ಕೆಲ ಆಟಗಾರರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಯಾವ ಆಟಗಾರ ಅದ್ಭುತ ಪ್ರದರ್ಶನ ನಿಡಿ ಅತಿ ಹೆಚ್ಚು ರನ್‌ಗಳಿಸಬಹುದು ಎಂಬುದು ಕುತೂಹಲ ಮೂಡಿಸಿದೆ. ಆ ಮುವರು ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್

ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್

ಸುದೀರ್ಘ ಕಾಲದಿಂದ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಕಮ್‌ಬ್ಯಾಕ್ ಮಾಡಿದ್ದು ನಾಯಕತ್ವದ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ. ಈ ಸರಣಿಯಲ್ಲಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಶಿಖರ್ ಧವನ್‌ಗೆ ಜೊತೆಗಾರನಾಗಿ ರಾಹುಲ್ ಅಂಗಳಕ್ಕಿಳಿಯಬಹುದು. ಇನ್ನು ರಾಹುಲ್ ಗಾಯದಿಂದಾಗಿ ಹೊರಗುಳಿಯುವ ಮುನ್ನ ಅದ್ಭುತ ಫಾರ್ಮ್‌ನಲ್ಲಿದ್ದರು. ಇನ್ನು ಜಿಂಬಾಬ್ವೆ ಬೌಲರ್‌ಗಳನ್ನು ದಂಡಿಸಿ ರನ್ ಹೊಳೆ ಹರಿಸುವ ಸಾಮರ್ಥ್ಯವನ್ನು ರಾಹುಲ್ ಹೊಂದಿದ್ದು ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸುವ ಆಟಗಾರ ಎನಿಸುವ ಸಾಧ್ಯತೆಯಿದೆ.

ಕುತೂಹಲಕಾರಿ ಸಂಗತಿಯೆಂದರೆ 2016ರಲ್ಲಿ ರಾಹುಲ್ ಜಿಂಬಾಬ್ವೆ ಪ್ರವಾಸದಲ್ಲಿಯೇ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದು ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಪ್ರಥಮ ಹಾಗೂ ಏಕೈಕ ಭಾರತೀಯ ಆಟಗಾರ ಎನಿಸಿದ್ದಾರೆ.

ಜಿಂಬಾಬ್ವೆ ಕ್ರಿಕೆಟಿಗ ಸಿಕಂದರ್ ರಾಜಾ

ಜಿಂಬಾಬ್ವೆ ಕ್ರಿಕೆಟಿಗ ಸಿಕಂದರ್ ರಾಜಾ

ಜಿಂಬಾಬ್ವೆ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಸಿಕಂದರ್ ರಾಜಾ ಇತ್ತೀಚೆಗೆ ಅದ್ಭುತ ಫಾರ್ಮ್‌ನಲ್ಲಿದ್ದು ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಆಲ್‌ರೌಂಡರ್ ಆಗಿರುವ ಸಿಕಂದರ್ ರಾಜಾ ಈ ವರ್ಷ ಬ್ಯಾಟ್ ಹಾಗೂ ಚೆಂಡು ಎರಡರಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಬಾಂಗ್ಲಾದೇಶದ ವಿರುದ್ಧ ಸಿಕಂದರ್ ರಾಜಾ ನೀಡಿದ ಪ್ರದರ್ಶನ ಅಮೋಘವಾಗಿತ್ತು. ಈ ಸರಣಿಯಲ್ಲಿ ಸತತ ಎರಡು ಶತಕವನ್ನು ಸಿಡಿಸಿ ಮಿಂಚಿದ್ದಾರೆ ಸಿಕಂದರ್ ರಾಜಾ. ಪಾಕಿಸ್ತಾನ ಮೂಲದ ಸಿಕಂದರ್ ರಾಜಾ ಭಾರತದ ವಿರುದ್ಧದ ಕುಡ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಭಾರತದ ಯುವ ಆಟಗಾರ ಶುಬ್ಮನ್ ಗಿಲ್

ಭಾರತದ ಯುವ ಆಟಗಾರ ಶುಬ್ಮನ್ ಗಿಲ್

ಇತ್ತೀಚಿನ ದಿನಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಮತ್ತೋರ್ವ ಭಾರತದ ಆಟಗಾರ ಶುಬ್ಮನ್ ಗಿಲ್. ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಈ ಯುವ ಆಟಗಾರ ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದಾರೆ. ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರೆ ಮತ್ತಷ್ಟು ಹೆಚ್ಚಿನ ಅವಕಾಶಗಳು ದೊರೆಯುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ಗಿಲ್ ಮೂರು ಪಂದ್ಯಗಳಲ್ಲಿ 205 ರನ್‌ಗಳಿಸಿದ್ದರು. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಗಿಲ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಜಿಂಬಾಬ್ವೆ ಸರಣಿಯಲ್ಲಿ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ತಂಡದಲಲ್ಇರುವ ಕಾರಣ ಈ ಇಬ್ಬರು ಆರಂಭಿಕರಾಗಿ ಕಣಕ್ಕಿಳಿಯಬಹುದು. ಗಿಲ್ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

Story first published: Tuesday, August 16, 2022, 17:28 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X