ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟ

IND VS NZ 2020 : ನ್ಯೂಜಿಲೆಂಡ್ ತಂಡದ ಬೌಲಿಂಗ್ ವಿಭಾಗದಲ್ಲಿ ಮಹತ್ತರ ಬದಲಾವಣೆ | IND | NZ | 2020
India vsNew Zealand: New Zealand announce T20I squad

ಬೆಂಗಳೂರು, ಜನವರಿ 16: ಮುಂಬರಲಿರುವ ಭಾರತದ ವಿರುದ್ಧ ಟಿ20ಐ ಸರಣಿಗಾಗಿ ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡ 14 ಜನರ ತಂಡ ಪ್ರಕಟಿಸಿದೆ. ಬಲಗೈ ವೇಗಿ ಹಮೀಶ್ ಬೆನೆಟ್ ಕೀವೀಸ್ ತಂಡಕ್ಕೆ ಮರಳಿದ್ದಾರೆ. ಪ್ರಕಟಿತ ತಂಡದಲ್ಲಿ ಬೌಲಿಂಗ್‌ ವಿಭಾಗದಲ್ಲಿ ಮಹತ್ತರ ಬದಲಾವಣೆಯಾಗಿದ್ದು ಕಾಣಿಸಿದೆ.

India vs Australia: ದ್ವಿತೀಯ ಏಕದಿನ ಪಂದ್ಯದಿಂದ ರಿಷಬ್ ಪಂತ್ ಹೊರಕ್ಕೆ!India vs Australia: ದ್ವಿತೀಯ ಏಕದಿನ ಪಂದ್ಯದಿಂದ ರಿಷಬ್ ಪಂತ್ ಹೊರಕ್ಕೆ!

ನ್ಯೂಜಿಲೆಂಡ್‌ ಎಂದಿನ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್ ಮತ್ತು ಲಾಕಿ ಫಾರ್ಗುಸನ್ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ 2017ರ ಬಳಿಕ ಇದೇ ಮೊದಲ ಬಾರಿಗೆ ಬೆನೆಟ್, ನ್ಯೂಜಿಲೆಂಡ್‌ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಕೊಹ್ಲಿ ನಿರ್ಧಾರಕ್ಕೆ ಮಾಜಿ ಆಟಗಾರರ ಅಸಮಾಧಾನಭಾರತ vs ಆಸ್ಟ್ರೇಲಿಯಾ: ಕೊಹ್ಲಿ ನಿರ್ಧಾರಕ್ಕೆ ಮಾಜಿ ಆಟಗಾರರ ಅಸಮಾಧಾನ

ನ್ಯೂಜಿಲೆಂಡ್‌ಗೆ ಭಾರತದ ಪ್ರವಾಸ ಸರಣಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಪ್ರಮುಖ ಮಾಹಿತಿದೆ.

ಐದು ಟಿ20 ಪಂದ್ಯಗಳು

ಐದು ಟಿ20 ಪಂದ್ಯಗಳು

ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ವಿರಾಟ್ ಕೊಹ್ಲಿ ಪಡೆ, ಅಲ್ಲಿ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜನವರಿ 24ರಂದು ಆರಂಭಗೊಳ್ಳುವ ಟಿ20 ಸರಣಿ ಫೆಬ್ರವರಿ 2ರಂದು ಕೊನೆಗೊಳ್ಳಲಿದೆ. ಪಂದ್ಯಗಳು ಭಾರತೀಯ ಕಾಲಮಾನ 12.30 pmಗೆ ಆರಂಭಗೊಳ್ಳಲಿವೆ.

3 ಏಕದಿನ, 2 ಟೆಸ್ಟ್ ಪಂದ್ಯಗಳು

3 ಏಕದಿನ, 2 ಟೆಸ್ಟ್ ಪಂದ್ಯಗಳು

ಟಿ20 ಸರಣಿ ಮುಕ್ತಾಯದ ಬಳಿಕ ಭಾರತ, ಆತಿಥೇಯ ಕಿವೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಏಕದಿನ ಪಂದ್ಯಗಳು ಫೆಬ್ರವರಿ 5ರಿಂದ ಭಾರತೀಯ ಕಾಲಮಾನ 7.30 amಗೆ, ಟೆಸ್ಟ್ ಪಂದ್ಯಗಳು ಫೆಬ್ರವರಿ 21ರಿಂದ ಭಾರತೀಯ ಕಾಲಮಾನ 4 amಗೆ ಆರಂಭಗೊಳ್ಳಲಿವೆ.

ನ್ಯೂಜಿಲೆಂಡ್ ತಂಡ

ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ಸಿ), ಹಮೀಶ್ ಬೆನೆಟ್, ಟಾಮ್ ಬ್ರೂಸ್ (ಪಂದ್ಯಗಳು 4-5), ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ಪಂದ್ಯಗಳು 1-3), ಮಾರ್ಟಿನ್ ಗಪ್ಟಿಲ್, ಸ್ಕಾಟ್ ಕುಗ್ಗೆಲೀಜ್ನ್, ಡ್ಯಾರಿಲ್ ಮಿಚೆಲ್, ಕಾಲಿನ್ ಮುನ್ರೋ, ರಾಸ್ ಟೇಲರ್, ಬ್ಲೇರ್ ಟಿಕ್ನರ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿಕೆ), ಇಶ್ ಸೋಧಿ, ಟಿಮ್ ಸೌಥಿ.

ಭಾರತ ತಂಡ

ಭಾರತ ತಂಡ

ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ (ವಿಸಿ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ಶಿವಮ್ ದೂಬೆ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್.

Story first published: Thursday, January 16, 2020, 12:34 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X