ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

90ರ ದಶಕದಲ್ಲಿ ಭಾರತ ತಂಡ ಸಚಿನ್ ಆಟವನ್ನೇ ನೆಚ್ಚಿಕೊಂಡಿತ್ತು: ಸಂಜಯ್ ಮಂಜ್ರೇಕರ್

India Was Too Dependent on Sachin Tendulkar in the 90s-Sanjay Manjrekar

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಸಂವಾದವನ್ನು ನಡೆಸಿದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್ ಯಾವ ಪ್ರಮಾಣದಲ್ಲಿ ಆವರಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.

90ರ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾ ಸಾಕಷ್ಟು ನೆಚ್ಚಿಕೊಂಡಿತ್ತು ಎಂದು ಈ ಸಂದರ್ಭದಲ್ಲಿ ಮಂಜ್ರೇಕರ್ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಆಟದ ಮೇಲೆ ಟೀಮ್ ಇಂಡಿಯಾ ಅವಲಂಬಿತವಾಗಿತ್ತು ಎಂದು ಸಂವಾದದಲ್ಲಿ ಅಭಿಪ್ರಾಯಪಟ್ಟಿದ್ದಾರೆ ಮಂಜ್ರೇಕರ್.

ಗಂಗೂಲಿ ಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಇಂಗ್ಲೆಂಡ್ ಮಾಜಿ ನಾಯಕಗಂಗೂಲಿ ಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಇಂಗ್ಲೆಂಡ್ ಮಾಜಿ ನಾಯಕ

ಈ ಮಾತಿಗೆ ಮಂಜ್ರೇಕರ್ 1996ರ ಸೆಮಿಫೈನಲ್ ಪಂದ್ಯವನ್ನು ಉದಾಹರಣೆಯಾಗಿ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ವಿಕೆಟ್ ಪತನದ ನಂತರ ಭಾರತ ಕ್ರಿಕೆಟ್‌ ತಂಡ ಎದುರಾಳಿ ಶ್ರೀಲಂಕಾಗೆ ಯಾವುದೇ ರೀತಿಯಲ್ಲೂ ಪ್ರತಿರೋಧವನ್ನು ತೋರದೆ ವಿಕೆಟ್ ಒಪ್ಪಿಸುತ್ತಾ ಹೋದ ಸಂದರ್ಭವನ್ನು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಆಗಮನದವರೆಗೂ ಭಾರತ ಕ್ರಿಕೆಟ್ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಗುತ್ತಿತ್ತು, ಆದರೆ ಸಚಿನ್ ತೆಂಡೂಲ್ಕರ್ ಅದನ್ನು ಬದಲಾಯಿಸಿದರು. ಬೌಲರ್‌ಗಳನ್ನು ಬೆನ್ನತ್ತಿ ಬಾರಿಸಲು ಸಚಿನ್ ಹಿಂದೇಟಿ ಹಾಕುತ್ತಿರಲಿಲ್ಲ. ಮತ್ತು 90ರ ದಶಕದಲ್ಲಿ ಅತ್ಯುತ್ತಮ ರೀತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಚಿನ್ ಯಶಸ್ವಿಯಾಗಿದ್ದರು ಎಂದು ಮಂಜ್ರೇಕರ್ ಹೇಳಿದ್ದಾರೆ.

ಜಗಳಕ್ಕಾಗಿ ಹರ್ಭಜನ್ ರೂಮ್‌ ಬಳಿ ತೆರಳಿದ್ದೆ: ಏಷ್ಯಾ ಕಪ್ ಪಂದ್ಯದ ಘಟನೆ ಸ್ಮರಿಸಿದ ಅಖ್ತರ್ಜಗಳಕ್ಕಾಗಿ ಹರ್ಭಜನ್ ರೂಮ್‌ ಬಳಿ ತೆರಳಿದ್ದೆ: ಏಷ್ಯಾ ಕಪ್ ಪಂದ್ಯದ ಘಟನೆ ಸ್ಮರಿಸಿದ ಅಖ್ತರ್

ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಕೆರಿಯರ್‌ನ ಉದ್ದಕ್ಕೂ ಅತ್ಯಂತ ಕಡಿಮೆ ಹಿನ್ನಡೆಯನ್ನು ಕಂಡರು, ನಿರಂತರವಾಗಿ ಸ್ಥಿರತೆಯನ್ನು ಅವರು ಕಾಪಾಡಿಕೊಳ್ಳುವಲ್ಲಿ ವೃತ್ತಿ ಜೀವನದುದ್ದಕ್ಕೂ ಯಶಸ್ವಿಯಾಗಿದ್ದರು. ಇದು ಸಚಿನ್ ತೆಂಡೂಲ್ಕರ್ ಅವರ ಶ್ರೇಷ್ಠತೆ ಎಂದು ಸಂಜಯ್ ಮಂಜ್ರೇಕರ್ ಈ ಸಂವಾದದಲ್ಲಿ ಹೇಳಿದ್ದಾರೆ.

Story first published: Sunday, May 17, 2020, 18:10 [IST]
Other articles published on May 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X