ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೂ ಮೊದಲೇ ಭಾರತ ಹೆದರಿತ್ತು: ಇಂಜಮಾಮ್ ಉಲ್ ಹಕ್

ದುಬೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2021ರ ಪಂದ್ಯದ ಆರಂಭಕ್ಕೂ ಮೊದಲೇ, ಟೀಂ ಇಂಡಿಯಾ ಅಪಾರ ಒತ್ತಡದಲ್ಲಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.

ಅಕ್ಟೋಬರ್ 24, ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಆರಂಭಿಕ ಜೊತೆಯಾಟಕ್ಕೆ ಟೀಂ ಇಂಡಿಯಾ ಹೀನಾಯ ಸೋಲನ್ನ ಕಂಡಿತು. ಪಾಕ್ ಜೋಡಿ ಅದ್ಭುತ ಜೊತೆಯಾಟದ ಮೂಲಕ 10 ವಿಕೆಟ್‌ಗಳ ಭರ್ಜರಿ ಗೆಲುವನ್ನ ಸಾಧಿಸಿತು. ಅತ್ಯಂತ ಸುಲಭವಾಗಿ ಪಾಕಿಸ್ತಾನ ತಂಡವನ್ನ ಗೆಲುವಿನ ಗೆರೆ ದಾಟಿಸಿದ್ರು.

2025ಕ್ಕೆ ಪಾಕಿಸ್ತಾನಕ್ಕೆ ತೆರಳುವುದು ಟೀಂ ಇಂಡಿಯಾಗೆ ಸವಾಲಿನದ್ದಾಗಿದೆ: ಐಸಿಸಿ ಅಧ್ಯಕ್ಷ2025ಕ್ಕೆ ಪಾಕಿಸ್ತಾನಕ್ಕೆ ತೆರಳುವುದು ಟೀಂ ಇಂಡಿಯಾಗೆ ಸವಾಲಿನದ್ದಾಗಿದೆ: ಐಸಿಸಿ ಅಧ್ಯಕ್ಷ

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ನಡುವೆ ಹೋಲಿಸಿದಾಗ ಕೊಹ್ಲಿ ಹೆಚ್ಚು ಒತ್ತಡದಲ್ಲಿದ್ದರು ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಇಂಜಮಾಮ್ ಹೇಳಿದ್ದಾರೆ.

"ಪಂದ್ಯ ಪ್ರಾರಂಭವಾಗುವ ಮೊದಲೇ ಭಾರತೀಯರು ಭಯಭೀತರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಟಾಸ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಸಂದರ್ಶನವನ್ನು ನೀವು ನೋಡಿದರೆ ಅವರ ಬಾಡಿ ಲಾಂಗ್ವೇಜ್ ಮೂಲಕ ಯಾರು ಒತ್ತಡದಲ್ಲಿದ್ದಾರೆ ಎಂದು ನೀವು ಗ್ರಹಿಸಬಹುದು" ಎಂದು ಇಂಜಮಾಮ್ ಎಆರ್‌ವೈ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

"ನಮ್ಮ ತಂಡದ ಬಾಡಿ ಲಾಂಗ್ವೇಜ್ ಅವರಿಗಿಂತ ಉತ್ತಮವಾಗಿತ್ತು. ರೋಹಿತ್ ಶರ್ಮಾ ಔಟಾದ ನಂತರ ಭಾರತ ಒತ್ತಡಕ್ಕೆ ಸಿಲುಕಲಿಲ್ಲ. ರೋಹಿತ್ ಶರ್ಮಾ ಅವರೇ ಒತ್ತಡದಲ್ಲಿದ್ದರು. ಪಂದ್ಯ ಪ್ರಾರಂಭವಾಗುವ ಮೊದಲೇ ಅವರೆಲ್ಲರೂ ಒತ್ತಡದಲ್ಲಿದ್ದರು ಎಂಬುದು ಸ್ಪಷ್ಟವಾಗಿದೆ "ಎಂದು ಅವರು ಹೇಳಿದರು.

ಒಮ್ಮೆ ಶಾಹೀನ್ ಶಾ ಅಫ್ರಿದಿ, ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದ ಬಳಿಕ, ಪಾಕಿಸ್ತಾನವನ್ನು ತಡೆಯಲಾಗಲಿಲ್ಲ.

"ಭಾರತ ತಂಡ ಯಾವತ್ತೂ ಈ ರೀತಿಯಲ್ಲಿ ಆಡಿರಲಿಲ್ಲ. ಅವರದು ಉತ್ತಮ ಟಿ20 ತಂಡ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ 2-3 ವರ್ಷಗಳಲ್ಲಿ ಅವರ ಸಾಧನೆ ನೋಡಿದರೆ ಅವರೇ ಫೇವರಿಟ್ ಆಗಿದ್ದರು. ಆದರೆ ಆ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅವರ ಮೇಲಿದ್ದ ಒತ್ತಡವು ಕಡಿಮೆಯಾಗಲೇ ಇಲ್ಲ'' ಎಂದು ಇಂಜಮಾಮ್ ಟೀಮ್ ಇಂಡಿಯಾ ಪ್ರದರ್ಶನವನ್ನ ವಿಮರ್ಶಿಸಿದ್ದಾರೆ.

ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್

ಪಾಕಿಸ್ತಾನ ವಿರುದ್ಧ ಸೋತ ನಂತರ, ದುಬೈನ ಅದೇ ಮೈದಾನದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್‌ಗಳಿಂದ ಸೋತಿತು. ಇದಾದ ಬಳಿಕ ಭಾರತವು ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿ ಸತತ ಮೂರು ಪಂದ್ಯಗಳನ್ನು ಗೆದ್ದ ಆದರೆ ಸೆಮಿಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಈ ಪಂದ್ಯಾವಳಿಯು ಭಾರತದ ಟಿ20 ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅವರ ಕೊನೆಯ ಪಂದ್ಯವಾಗಿತ್ತು.

ಈ 4 ಆಟಗಾರರು ಮಾತ್ರ RCBಯಲ್ಲಿ ಸೇಫ್ | Oneindia Kannada

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಚೊಚ್ಚಲ ಬಾರಿಗೆ ಫೈನಲ್‌ಗೇರಿದ್ದ ನ್ಯೂಜಿಲೆಂಡ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲಗೊಂಡ್ರೆ, ಆಸ್ಟ್ರೇಲಿಯಾ ಮೊದಲ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಎಲ್ಲಾ ಐಸಿಸಿ ಟ್ರೋಫಿಗಳನ್ನ ತನ್ನದಾಗಿಸಿಕೊಂಡಿತು.

For Quick Alerts
ALLOW NOTIFICATIONS
For Daily Alerts
Story first published: Friday, November 26, 2021, 15:35 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X