ಐಸಿಸಿಯಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷ ಭಾರತದಲ್ಲೇ ಟಿ20 ವಿಶ್ವಕಪ್

2021ರ ಟಿ20 ವಿಶ್ವಕಪ್ ಆಯೋಜನೆ ಭಾರತದಲ್ಲೇ ಉಳಿದುಕೊಂಡಿದೆ . ಈ ಬಾರಿ ನಡೆಯಬೇಕಿದ್ದ ವಿಶ್ವಕಪ್ 2022ಕ್ಕೆ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದು ನಡೆದ ಐಸಿಸಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ನಿಗದಿಯಂತೆ ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಬೇಕಿತ್ತು. ಮುಂದಿನ ವರ್ಷ ಭಾರತ ಟಿ20 ವಿಶ್ವಕಪ್ ಆಯೋಜನೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಈ ಬಾರಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡುವ ಅನಿವಾರ್ಯತೆ ಉಂಟಾಗಿತ್ತು.

ಆದರೆ ಮುಂದಿನ ವರ್ಷ ಮತ್ತೊಂದು ವಿಶ್ವಕಪ್ ಮೊದಲೇ ನಿಗದಿಯಾಗದ್ದ ಕಾರಣ ಆಯೋಜನೆಯ ಬಗ್ಗೆ ಗೊಂದಲ ಉಂಟಾಗಿತ್ತು. ಇಂದು ಐಸಿಸಿ ತನ್ನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದೆ. ಐಸಿಸಿಯ ವ್ಯವಹಾರ ಅಭಿವೃದ್ಧಿ ವಿಭಾಗವಾದ ಇಂಟರ್ನ್ಯಾಷನಲ್ ಬಿಸಿನೆಸ್ ಕಾರ್ಪೊರೇಷನ್ ಈ ನಿರ್ಧಾರಗಳನ್ನು ಕೈಗೊಂಡಿದೆ.

ಭಾರತದಲ್ಲಿ ನಡೆಯ ಬೇಕಿದ್ದ ಮುಂದಿನ ವರ್ಷದ ಟಿ20 ವಿಶ್ವಕಪ್ ನಿಗದಿಯಾಗಿದ್ದಂತೆಯೇ ನಡೆಯಲಿದೆ. ಆದರೆ ಈ ವರ್ಷದ ಸೆಪ್ಟೆಂಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಬೇಕಿದ್ದ ವಿಶ್ವಕಪ್ 2022ಕ್ಕೆ ಮುಂದೂಡಿಕೆಯಾಗಿದೆ. ವರದಿಯ ಪ್ರಕಾರ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಒಮ್ಮತದ ನಿಲುವನ್ನು ತೆಗೆದುಕೊಂಡು ಮುಂದಿನ ವರ್ಷದ ವಿಶ್ವಕಪ್ ಭಾರತ ಆಯೋಜಿಸಲು ಒಪ್ಪಿಕೊಂಡಿತ್ತು ಎಂದು ತಿಳಿದು ಬಂದಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, August 7, 2020, 20:19 [IST]
Other articles published on Aug 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X