ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಉಳಿದ ಪಂದ್ಯಗಳನ್ನು ಭಾರತ ಬೇಕೆಂದೇ ಸೋಲುತ್ತೆ!: ಪಾಕ್ ಕ್ರಿಕೆಟರ್

India will lose their remaining games intentionally says Another ex-Pak cricketer

ಇಸ್ಲಮಾಬಾದ್, ಜೂನ್ 29: ಸದ್ಯ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ 2019ರಲ್ಲಿ ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ಗೆ ಪ್ರವೇಶಿಸಲು ಟೀಮ್ ಇಂಡಿಯಾ ಬಿಡಲೊಲ್ಲದು ಎಂದು ಪಾಕಿಸ್ತಾನ ಕ್ರಿಕೆಟಿಗ ಬಸಿತ್ ಅಲಿ ಹೇಳಿದ ಬಳಿಕ ಪಾಕ್ ಮತ್ತೊಬ್ಬ ಆಟಗಾರ ಸಿಕಂದರ್ ಬಖ್ತ್ ಕೂಡ ಇದೇ ಮಾತನ್ನು ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪಾಕಿಸ್ತಾನ ತಂಡದ ಸೆಮಿಫೈನಲ್ ಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಭಾರತ, ಒಮ್ಮೆ ಸೆಮಿಫೈನಲ್ ಪ್ರವೇಶಿಸಿದ ಬಳಿಕ ಇನ್ನುಳಿದ ವಿಶ್ವಕಪ್ ಪಂದ್ಯಗಳಲ್ಲಿ ಸೋಲಲಿದೆ ಎಂದು ಸಿಕಂದರ್ ಹೇಳಿಕೊಂಡಿದ್ದಾರೆ. ಪಾಕಿಸ್ತಾನ ಪರ ಸಿಕಂದರ್ ಬಖ್ತ್ 26 ಟೆಸ್ಟ್, 27 ಏಕದಿನ ಪಂದ್ಯಗಳನ್ನಾಡಿದ್ದರು.

ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸೀಸ್ ಮಾಜಿ ಕ್ರಿಕೆಟಿಗಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸೀಸ್ ಮಾಜಿ ಕ್ರಿಕೆಟಿಗ

ಪಾಕ್ ಕ್ರಿಕೆಟಿಗರು ಈ ರೀತಿ ಹೇಳಿಕೆಗಳನ್ನು ಕೊಡುತ್ತಿರುವುದೇಕೆ? ಭಾರತ ಇನ್ನುಳಿದ ಪಂದ್ಯಗಳನ್ನು ಸೋತರೆ ಪಾಕ್ ಯಾಕೆ ಅವಕಾಶ ಕಳೆದುಕೊಳ್ಳಲಿದೆ ಎಂಬುದಕ್ಕೆ ಇಲ್ಲೊಂದಿಷ್ಟು ಕುತೂಹಲಕಾರಿ ವಿವರಣೆಯಿದೆ.

ಬೇಕೆಂದೇ ಹೀನಾಯವಾಗಿ ಸೋಲುತ್ತೆ

ಬೇಕೆಂದೇ ಹೀನಾಯವಾಗಿ ಸೋಲುತ್ತೆ

ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸೋದನ್ನು ಭಾರತ ಯಾವತ್ತಿಗೂ ಬಯಸಲಾರದು. ಹೀಗಾಗಿ ವಿರಾಟ್ ಕೊಹ್ಲಿ ಬಳಗ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳನ್ನು ಬೇಕೆಂದೇ ಹೀನಾಯವಾಗಿ ಸೋಲಲಿದೆ ಎಂದು ಬಸಿತ್ ಅಲಿ, ಈ ಮೊದಲು ಹೇಳಿಕೆ ನೀಡಿದ್ದರು. ಪಾಕ್ ಇಬ್ಬರು ಕ್ರಿಕೆಟಿಗರು ಹೇಳಿಕೆ ನೀಡಿರುವಂತೆ ಟೀಮ್ ಇಂಡಿಯಾ,ಒಂದುವೇಳೆ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಕಾಕತಾಳೀಯವಾಗಿ ಸೋತರೆ!?(ಚಿತ್ರದಲ್ಲಿ ಬಸಿತ್ ಅಲಿ).

ಬಾಂಗ್ಲಾಕ್ಕೆ ಅನುಕೂಲವಾಗಲಿದೆ

ಬಾಂಗ್ಲಾಕ್ಕೆ ಅನುಕೂಲವಾಗಲಿದೆ

ಪಾಕಿಸ್ತಾನ ತಂಡ ಭಾರತ ವಿರುದ್ಧ 89 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಜಯ ಗಳಿಸಿರುವ ಪಾಕಿಸ್ತಾನ ಒಟ್ಟು 7 ಅಂಕಗಳನ್ನು ಕಲೆ ಹಾಕಿ ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಳ್ಳುವತ್ತ ಕಣ್ಣಿಟ್ಟಿದೆ. ಬಾಂಗ್ಲಾ ದೇಶವೂ ಇಷ್ಟೇ ಅಂಕಗಳನ್ನು ಕಲೆ ಹಾಕಿದೆ. ಹೀಗಾಗಿ ಭಾರತ ತಂಡ ಬಾಂಗ್ಲಾ ವಿರುದ್ಧ ಸೋತು, ಬಾಂಗ್ಲಾ ಸೆಮಿಫೈನಲ್ ಪ್ರವೇಶಿಸಲು ಅನುಕೂಲ ಮಾಡಲಿದೆ ಎಂಬುದು ಪಾಕ್ ಕ್ರಿಕೆಟಿಗರ ಆಲೋಚನೆ.

ಇಂಗ್ಲೆಂಡ್ ಲೀಗ್‌ನಲ್ಲಿ ಹೊರ ಬೀಳುತ್ತಾ?

ಇಂಗ್ಲೆಂಡ್ ಲೀಗ್‌ನಲ್ಲಿ ಹೊರ ಬೀಳುತ್ತಾ?

ಸದ್ಯ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಒಂದು ಪಂದ್ಯ ರದ್ದು ಸೇರಿ 5 ಗೆಲುವುಗಳನ್ನು ದಾಖಲಿಸಿರುವ ಭಾರತದ ಖಾತೆಯಲ್ಲಿ 11 ಅಂಕಗಳಿವೆ. ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೊಂದೇ ಗೆಲುವು ಬೇಕಿದೆ. ಟೀಮ್ ಇಂಡಿಯಾ ಮುಂದೆ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿರುವುದರಿಂದ ಆಂಗ್ಲರು ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳುವ ಸಂಭವವೂ ಇದೆ.

ಸಿಕಂದರ್, ಬಸಿತ್ ಖತರ್ನಾಕ್ ಊಹೆ!

ಸಿಕಂದರ್, ಬಸಿತ್ ಖತರ್ನಾಕ್ ಊಹೆ!

ಸಿಕಂದರ್ ಬಖ್ತ್ ಮತ್ತು ಬಸಿತ್ ಅಲಿ ಹೇಳುವ ಪ್ರಕಾರ ಭಾರತ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶ ಖಾತ್ರಿಪಡಿಸಿಕೊಳ್ಳಲಿದೆ. ನಂತರ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಸೋಲಲಿದೆ. ಆಗ ಇಂಗ್ಲೆಂಡ್ ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳಲಿದೆ. ಆದರೆ ಸೆಮಿಫೈನಲ್‌ನತ್ತ ಕಣ್ಣಿಟ್ಟಿರುವ ಬಾಂಗ್ಲಾ ವಿರುದ್ಧ ಭಾರತ ಬೇಕೆಂದೇ ಸೋಲುವುದರಿಂದ ಬಾಂಗ್ಲಾ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತದ ಈ ಸಂಚಿನಿಂದ ಪಾಕಿಸ್ತಾನಕ್ಕೆ ಹಿನ್ನಡೆಯಾಗಲಿದೆ. ಆದರೆ ಕ್ರಿಕೆಟ್ ಪಂಡಿತರ ಪ್ರಕಾರ ಬಾಂಗ್ಲಾ, ಲಂಕಾ ವಿರುದ್ಧ ಟೂರ್ನಿಯ ಪ್ರಬಲ ತಂಡ ಭಾರತ ಗೆಲ್ಲಲಿದೆ(ಚಿತ್ರದಲ್ಲಿ ಸಿಕಂದರ್ ಬಖ್ತ್).

Story first published: Monday, July 1, 2019, 10:29 [IST]
Other articles published on Jul 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X