ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭವಿಷ್ಯದಲ್ಲಿ ಈ ಆಟಗಾರನ ಮೇಲೆ ಭಾರತ ಸಾಕಷ್ಟು ಅವಲಂಬಿತವಾಗಿರಲಿದೆ: ಲಕ್ಷ್ಮಣ್

India will rely on Shubman Gill a lot in future says Former cricketer VVS Laxman

ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ಓರ್ವ ಯುವ ಆಟಗಾರನ ಸಾಕಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಟೀಮ್ ಇಂಡಿಯಾದ ದೊಡ್ಡ ಅಸ್ತ್ರವಾಗಲಿದ್ದಾನೆ. ಭಾರತದ ಭವಿಷ್ಯದಲ್ಲಿ ಸುದೀರ್ಘ ಕಾಲ ಈತನ ಮೇಲೆ ಅವಲಂಬಿತವಾಗಲಿದೆ ಎನಿಸುತ್ತದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ವಿವಿಎಸ್ ಲಕ್ಷ್ಮಣ್ ಹೀಗೆ ಭರವಸೆಯನ್ನು ವ್ಯಕ್ತಪಡಿಸಿದ ಆಟಗಾರ ಬೇರೆ ಯಾರೈ ಅಲ್ಲ, ಅದು ಶುಬ್ಮನ್ ಗಿಲ್. ಆಸ್ಟ್ರೇಲಿಯಾ ವಿರುದ್ಧದ ಟೆಸ್‌ ಸರಣಿಯಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಪ್ರದರ್ಶನವನ್ನು ನೀಡಿದಲ್ಲದೆ ಬ್ರಿಸ್ಬೇನ್‌ನಲ್ಲಿ ನಡೆದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಶತಕದ ಸನಿಹಕ್ಕೆ ತಲುಪಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆಯನ್ನು ನೀಡಿದ್ದರು.

ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್

"ನನಗನಿಸುತ್ತದೆ ಮುಂದೆ ಈತ ಕ್ರಿಕೆಟರ್‌ಗಳ ಪೈಕಿ ಅತಿ ಹೆಚ್ಚು ಚರ್ಚೆಗೆ ಕಾರಣವಾಗಲಿದ್ದಾನೆ. ಟೆಸ್ಟ್ ಪಂದ್ಯದಲ್ಲಿ ಮಾತ್ರವಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆತ ಉತ್ತಮ ಆಟಗಾರ ಎನಿಸಲಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಸ್ಪೋರ್ಟ್ಸ್‌ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಈ ರೀತಿಯ ಪ್ರದರ್ಶಣವನ್ನು ಗಿಲ್ ಎಲ್ಲಾ ಹಂತಗಳಲ್ಲೂ ನೀಡಿಕೊಂಡು ಬಂದಿದ್ದಾರೆ. ಅದು ಐಪಿಎಲ್ ಆಗಿರಬಹುದು, ಭಾರತ ಎ ತಂಡದ ಪರವಾಗಿ ಆಗರಬಹುದು ಅಥವಾ ಪಂಜಾಬ್ ತಂಡದ ಪರವಾಗಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಆಗಿರಬಹುದು. ಆತ ಬಹಳ ಸ್ಥಿರವಾದ ಪ್ರದರ್ಶನವನ್ನು ನೀಡಬಲ್ಲ ಆಟಗಾರ. ತನ್ನ ಸಹ ಆಟಗಾರರಿಗೆ ಅವಕಾಶಗಳು ದೊರೆತಾಗ ತನ್ನ ಅವಕಾಶಕ್ಕಾಗಿ ಆತ ತುಂಬಾ ತಾಳ್ಮೆಯಿಂದ ಕಾದಿದ್ದಾರೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನ

"ನಾನು ಆತನಲ್ಲಿ ಆನಂದಿಸುವುದೇನೆಂದರೆ, ದೊಡ್ಡ ಸಂದರ್ಭಗಳಿಗಾಗಿ ಆತ ಯಾವಾಗಲೂ ಸಿದ್ಧನಾಗಿರುತ್ತಾರೆ. ಆಸ್ಟ್ರೇಲಿಯಾದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಸ್ಟಾರ್ಕ್, ಹೇಜಲ್‌ವುಡ್ ಕಮ್ಮಿನ್ಸ್ ಅವರಂತಾ ಶ್ರೇಷ್ಠ ದಾಳಿಯನ್ನು ಎದುರಿಸುವುದು ಸುಲಭವಲ್ಲ. ಆದರೆ ಅದನ್ನು ತನ್ನ ಬದ್ಧತೆಯ ಕಾರಣದಿಂದಾಗಿ ಸಮರ್ಥವಾಗಿ ಎದುರಿಸಿದರು. ನನಗೆ ಅನಿಸುತ್ತದೆ ಭವಿಷ್ಯದಲ್ಲಿ ಭಾರತ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಗೆಲುವಿಗಾಗಿ ಈತನ ಮೇಲೆ ಸಾಕಷ್ಟು ಅವಲಂಬಿತವಾಗಿರುತ್ತದೆ" ಎಂದು ಲಕ್ಷ್ಮಣ್ ಶುಬ್ಲನ್ ಗಿಲ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Story first published: Wednesday, February 3, 2021, 13:59 [IST]
Other articles published on Feb 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X