ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಧೋನಿ, ಅಜರುದ್ದೀನ್ ಸಾಲಿಗೆ ಸೇರಿದ ರೋಹಿತ್ ಶರ್ಮಾ

IND vs ENG: India Wins Series Against England; Captain Rohit Sharma Joins MS Dhoni and Azharuddin Elite List

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದ ನಂತರ, ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದ ಮೂರನೇ ಭಾರತೀಯ ನಾಯಕರಾದರು.

ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಅಜೇಯ 125 ರನ್ ಮತ್ತು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗಿನ 133 ರನ್‌ಗಳ ಜೊತೆಯಾಟವು ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಅಂತಿಮ ಎಕದಿನ ಪಂದ್ಯದಲ್ಲಿ ಭಾರತ 260 ರನ್ ಯಶಸ್ವಿಯಾಗಿ ಚೇಸ್ ಮಾಡಲು ಸಹಾಯ ಮಾಡಿತು ಮತ್ತು ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.

ಐಸಿಸಿ ಟಿ20 ವಿಶ್ವಕಪ್ 2022ಗೆ ಅಂತಿಮ ತಂಡಗಳು ಸಿದ್ಧ; ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನಐಸಿಸಿ ಟಿ20 ವಿಶ್ವಕಪ್ 2022ಗೆ ಅಂತಿಮ ತಂಡಗಳು ಸಿದ್ಧ; ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ

ಆಲ್‌ರೌಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ (4/24) ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (3/60) ಅವರ ಕೆಲವು ಅದ್ಭುತ ಸ್ಪೆಲ್‌ಗಳಿಂದ ಆತಿಥೇಯ ಇಂಗ್ಲೆಂಡ್ 259 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (60), ಜೇಸನ್ ರಾಯ್ (41) ಮತ್ತು ಮೊಯಿನ್ ಅಲಿ (34) ಆತಿಥೇಯರ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಭಾರತದ ಅಗ್ರ ಕ್ರಮಾಂಕಕ್ಕೆ ಶಾಕ್ ನೀಡಿದ ರೀಸ್ ಟೋಪ್ಲೆ

ಭಾರತದ ಅಗ್ರ ಕ್ರಮಾಂಕಕ್ಕೆ ಶಾಕ್ ನೀಡಿದ ರೀಸ್ ಟೋಪ್ಲೆ

260 ರನ್‌ಗಳನ್ನು ಬೆನ್ನಟ್ಟಿದ ಪ್ರವಾಸಿ ತಂಡ, ಇಂಗ್ಲೆಂಡ್ ಬೌಲರ್ ರೀಸ್ ಟೋಪ್ಲೆ ಭಾರತದ ಅಗ್ರ ಕ್ರಮಾಂಕದ ವಿಕೆಟ್ ಪಡೆದು ಶಾಕ್ ನೀಡಿದರು ಮತ್ತು 72 ರನ್‌ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಪಾಂಡ್ಯ-ಪಂತ್ ಅವರ ಜುಗಲ್‍ಬಂದಿ 133 ರನ್‌ಗಳ ಮ್ಯಾಚ್-ವಿನ್ನಿಂಗ್ ಜೊತೆಯಾಟವಾಡಿದರು.

ನಾಯಕ ರೋಹಿತ್ ಶರ್ಮಾ ಹೊರತಾಗಿ, ಎಂಎಸ್ ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದ ಇತರ ಇಬ್ಬರು ಭಾರತೀಯ ನಾಯಕರು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ಗೆದ್ದುಕೊಂಡಿತು.

IND vs ENG 3rd ODI: ರಿಷಭ್ ಪಂತ್ ಚೊಚ್ಚಲ ಶತಕ; ಇಂಗ್ಲೆಂಡ್‌ಗೆ ಮುಖಭಂಗ; ಭಾರತಕ್ಕೆ ಸರಣಿ ಜಯ

1990ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಗೆದ್ದಿತ್ತು

1990ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಗೆದ್ದಿತ್ತು

ಇನ್ನು 1990ರಲ್ಲಿ ಮೊಹಮ್ಮದ್ ಅಜರುದ್ದೀನ್ ಅವರ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಎರಡು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.

ಈ ಬಾರಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮೊದಲ ಪಂದ್ಯದಲ್ಲಿ 110ಕ್ಕೆ ಆಲೌಟ್ ಮಾಡಿತ್ತು ಮತ್ತು ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿ 10 ವಿಕೆಟ್‌ಗಳಿಂದ ಗೆದ್ದಿತ್ತು.

ರಿಷಭ್ ಪಂತ್ ಚೊಚ್ಚಲ ಏಕದಿನ ಶತಕ

ರಿಷಭ್ ಪಂತ್ ಚೊಚ್ಚಲ ಏಕದಿನ ಶತಕ

ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡಿ 100 ರನ್‌ಗಳ ಜಯ ದಾಖಲಿಸಿತು. ಆಗ ಸರಣಿ 1-1 ರಿಂದ ಸಮಬಲಗೊಂಡಿತ್ತು. ಮೂರನೇ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕವಾಗಿತ್ತು. ಈ ವೇಳೆ ರಿಷಭ್ ಪಂತ್ ಅವರ ಚೊಚ್ಚಲ ಏಕದಿನ ಶತಕ ಮತ್ತು ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಕೊಡುಗೆಗಳು ಭಾರತ ತಂಡ ನಿರ್ಣಾಯಕ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ನೆರವಾದವು.

ಈ 2021-2022ರ ಇಂಗ್ಲೆಂಡ್ ಪ್ರವಾಸವು ಭಾರತಕ್ಕೆ ಅತ್ಯಂತ ಯಶಸ್ವಿಯಾಗಿದೆ. ಅವರು ಟೆಸ್ಟ್ ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡರು ಮತ್ತು ಟಿ20 ಮತ್ತು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದರು. ಭಾರತ ತಂಡ ಯಾವುದೇ ಮಾದರಿಯಲ್ಲಿ ಇಂಗ್ಲೆಂಡ್‌ಗೆ ಸರಣಿ ಗೆಲ್ಲಲು ಬಿಡಲಿಲ್ಲ ಮತ್ತು ಅದು ಕೂಡ ಇಂಗ್ಲೆಂಡ್‌ನ ಮೈದಾನಗಳಲ್ಲಿ ಎನ್ನುವುದು ಇನ್ನೂ ವಿಶೇಷವಾಗಿದೆ.

Story first published: Monday, July 18, 2022, 14:21 [IST]
Other articles published on Jul 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X