ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ಇಂಡೀಸ್‌ ವಿರುದ್ಧ ಕ್ಲೀನ್‌ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

India women complete T20I series sweep over West Indies

ಭಾರತ ಹಾಗೂ ವೆಸ್ಟ್ಇಂಡೀಸ್ ಮಧ್ಯೆ ನಡೆದ ವನಿತೆಯರ ಟಿ-ಟ್ವೆಂಟಿ ಸರಣಿಯನ್ನು ಭಾರತ ಗೆದ್ದುಕೊಂಡಿದೆ. 5 ಪಂದ್ಯಗಳ ಸರಣಿಯಲ್ಲಿ ಎಲ್ಲಾ ಪಂದ್ಯವನ್ನು ಗೆದ್ದ ಭಾರತ ತಂಡ ಅಧಿಕಾರಯುತವಾಗಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಗಯಾನದ ಪ್ರೊವಿನ್ಸ್ ಸ್ಟೇಡಿಯಮ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 61 ರನ್ ಗಳಿಂದ ಗೆದ್ದುಬೀಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವೆಸ್ಟ್‌ಇಂಡೀಸ್‌ಗೆ 135ರನ್‌ಗಳ ಸಾಧಾರಣ ಮೊತ್ತವನ್ನು ಟಾರ್ಗೆಟ್‌ ನೀಡಿತು. ಇದನ್ನು ಬೆನ್ನತ್ತಿದ ವೆಸ್ಟ್‌ಇಂಡೀಸ್‌ನ ವನಿತೆಯರು ಭಾರತೀಯ ಸ್ಪಿನ್‌ ವಿಭಾಗದ ದಾಳಿಯನ್ನು ಎದುರಿಸಲು ಸಾಧ್ಯವಾಗದೆ ನಿಗದಿತ 20ಓವರ್‌ಗಳಲ್ಲಿ 7ವಿಕೆಟ್ ಕಳೆದುಕೊಂಡು ಕೇವಲ 73ಗಳಿಸಲಷ್ಟೇ ಶಕ್ತವಾಯಿತು.

ಭಾರತ vs ವೆಸ್ಟ್ ಇಂಡೀಸ್ ಟಿ20ಐ ಪಂದ್ಯವೊಂದರ ದಿನಾಂಕ ಬದಲು?!ಭಾರತ vs ವೆಸ್ಟ್ ಇಂಡೀಸ್ ಟಿ20ಐ ಪಂದ್ಯವೊಂದರ ದಿನಾಂಕ ಬದಲು?!

ಭಾರತದ ಆಫ್ ಸ್ಪಿನ್ನರ್ ಅನುಜಾ ಪಾಟಿಲ್ ಅಮೋಘ ದಾಳಿಗೆ ವಿಂಡಿಸ್ ಅಕ್ಷರಶಃ ತತ್ತರಿಸಿಹೋಯಿತು. 3ಓವರ್‌ಗಳಲ್ಲಿ ಅನುಜಾ ಕೇಚವಲ ಮೂರು ತನ್ನಿತ್ತು ಎರಡು ವಿಕೆಟ್‌ ಕಿತ್ತರು. ಇನ್ನಿಬ್ಬರು ಸ್ಪಿನ್ನರ್ಗಳಾದ ರಾಧಾ ಮತ್ತು ಪೂನಮ್ ಯಾದವ್ ಕೂಡ ತಲಾ ಒಂದು ವಿಕೆಟ್‌ ಕಿತ್ತು, ವಿಂಡಿಸ್‌ಗೆ ಯಾವುದೇ ಕ್ಷಣದಲ್ಲೂ ಚೇತರಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಿದರು.

ಮೊದಲಿಗೆ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತವುಂಟಾಯಿತು. ಆರಂಭಿಕರಾದ ಶಫಾಲಿ ವೆರ್ಮಾಅ ಮತ್ಉ ಸ್ಮೃತಿ ಮಂದನ್ನಾ ಕ್ರಮವಾಗಿ 9 ರನ್ ಮತ್ತು7 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

ಚರ್ಚೆಗೆ ಕಾರಣವಾದ ಸ್ಮೃತಿ ಮಂಧಾನ ಮೇಕಪ್ ಫೋಟೋಚರ್ಚೆಗೆ ಕಾರಣವಾದ ಸ್ಮೃತಿ ಮಂಧಾನ ಮೇಕಪ್ ಫೋಟೋ

ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾದ ಜೆಮಿಮಾ ರೋಡ್ರಿಗ್ರಸ್ ಮತ್ತು ವೇದಾ ಕೃಷ್ಣಮೂರ್ತಿ 117 ರನ್ ಸೇರಿಸಿ ಉತ್ತಮ ಮೊತ್ತದತ್ತ ಕೊಂಡೊಯ್ದರು. ವೇದಾ ಕೃಷ್ಣಮೂರ್ತಿ ಅಜೇಯ 57 ರನ್ ಸಿಡಿಸಿದರೆ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ ಜೆಮಿಮಾ ರೋಡ್ರಿಗ್ರಸ್ 50ರನ್ ಸಿಡಿಸಿದರು.

ಇನ್ನು ಭಾರತದಂತೆಯೇ ವಿಂಡಿಸ್‌ ಕೂಡ ಕಳಪೆ ಆರಂಬವನ್ನು ಪಡೆಯಿತು. ಅನುಜಾ ಪಾಟಿಲ್ ಒಂದೇ ಓವರ್‌ನಲ್ಲಿ ನತಶಾ ಮೆಕ್ಲೀನ್ ಮತ್ತು ಶೆಡಿಯನ್ ನೇಶನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತದ ಬೌಲಿಂಗ್ ಎಷ್ಟು ಕರಾರುವಾಕ್ ಆಗಿತ್ತು ಅಂದರೆ 10ಓವರ್‌ಗಳಲ್ಲಿ ಕೇವಲ 28/3ಗಳಿಸಲಷ್ಟೇ ವಿಂಡಿಸ್‌ ವನಿತೆಯರಿಗೆ ಸಾಧ್ಯವಾಯಿತು.

ಅಂತಿಮವಾಗಿ ಕಿಶೋನಾ ಮತ್ತು ಶೇಮೈನ್ ಅವರ ಹೋರಾಟದಿಂದ 73 ಗಳಿಸಿ ಭಾರತಕ್ಕೆ ಶರಣಾಯಿತು. ಹೀಗೆ ವಿಂಡಿಸ್ ತವರಿನಲ್ಲಿ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಐದೂ ಪಂದ್ಯಗಳನ್ನು ಕಳೆದು ಕೊಂಡ ಸರಣಿಯನ್ನು ಭಾರತಕ್ಕೆ ಒಪ್ಪಿಸಿದೆ.

Story first published: Thursday, November 21, 2019, 13:52 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X