ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಭಾರತದ ಮಹಿಳಾ ತಂಡ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಿಯಮಿತ ಓವರ್ಗಳ ಸರಣಿ ನಡೆಯಲಿದೆ. ಸರಣಿಯು ಐದು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಭಾರತಕ್ಕೆ ಪ್ರವಾಸ ಬರಲಿರುವ ದಕ್ಷಿಣ ಆಫ್ರಿಕಾ ತಂಡ ಲಕ್ನೋದಲ್ಲಿ ಸರಣಿಗಳನ್ನಾಡಲಿದೆ.
ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಮಾರ್ಟಿನ್ ಗಪ್ಟಿಲ್!
2020 ಮರ್ಚ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಬಳಿಕ ನಡೆಯುತ್ತಿರುವ ಭಾರತೀಯ ಮಹಿಳಾ ತಂಡಕ್ಕೆ ನಡೆಯುತ್ತಿರುವ ಚೊಚ್ಚಲ ಮಹಿಳಾ ಟೂರ್ನಿಯಿದು. 5 ಏಕದಿನ ಪಂದ್ಯಗಳು ಕ್ರಮವಾಗಿ ಮಾರ್ಚ್ 7, 9, 12, 14, 17ರಂದು ನಡೆದರೆ, 3 ಟಿ20ಐ ಪಂದ್ಯಗಳು ಮಾರ್ಚ್ 20, 21, 23ರಂದು ನಡೆಯಲಿವೆ.
ಏಕದಿನ ಸರಣಿಗೆ ಭಾರತ ಮಹಿಳಾ ತಂಡ
ಮಿಥಾಲಿ ರಾಜ್ (ಕ್ಯಾಪ್ಟನ್), ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್, ಪುನಮ್ ರಾವತ್, ಪ್ರಿಯಾ ಪುನಿಯಾ, ಯಸ್ತಿಕಾ ಭಾಟಿಯಾ, ಹರ್ಮನ್ಪ್ರೀತ್ ಕೌರ್ (ಉಪನಾಯಕಿ), ಡಿ.ಹೇಮಲತಾ, ದೀಪ್ತಿ ಶರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್) ), ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಪೂನಮ್ ಯಾದವ್, ಸಿ.ಪ್ರತ್ಯುಷಾ, ಮೋನಿಕಾ ಪಟೇಲ್.
'ನರೇಂದ್ರ ಮೋದಿ ಸ್ಟೇಡಿಯಂ'ಗೆ ಅಪಸ್ವರ: ಜೋ ರೂಟ್ ಹೇಳಿದ್ದೇನು ಗೊತ್ತಾ?!
ಟಿ20ಐ ಸರಣಿಗೆ ಭಾರತ ಮಹಿಳಾ ತಂಡ
ಹರ್ಮನ್ಪ್ರೀತ್ ಕೌರ್ (ಕ್ಯಾಪ್ಟನ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ನುಝ್ರತ್ ಪರ್ವೀನ್ (ವಿಕೆಟ್ ಕೀಪರ್), ಆಯುಶಿ ರೆಡ್ಡಿ , ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಸಿ. ಪ್ರತ್ಯುಷಾ, ಸಿಮ್ರಾನ್ ದಿಲ್ ಬಹದ್ದೂರ್.