ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಳು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಭಾರತೀಯ ಮಹಿಳಾ ತಂಡ ಸಜ್ಜು

India womens team return to Test cricket after seven-year with match against England

ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ ಕ್ವಾರಂಟೈನ್ ಪೂರೈಸಿದ ನಂತರ ವಾರಗಳ ಕಾಲ ಅಭ್ಯಾಸ ನಡೆಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ ಮಹತ್ವದ ಪಂದ್ಯವನ್ನಾಡಲು ಸಜ್ಜಾಗಿದೆ. ಒಂದೆಡೆ ವಿರಾಟ್ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಿದ್ಧತೆಯನ್ನು ನಡೆಸುತ್ತಿದ್ದರೆ ಮಿಥಾಲಿ ರಾಜ್ ನೇತೃತ್ವದ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ ಬುಧವಾರದಿಂದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.

ಸುಮಾರು ಏಳು ವರ್ಷಗಳ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಈ ಮೂಲಕ ಹೊಸತೊಂದು ಅಧ್ಯಾಯಕ್ಕೆ ಮಿಥಾಲಿ ರಾಜ್ ಪಡೆ ಸಿದ್ಧವಾಗಿದೆ. ಈ ಮೂಲಕ 2014ರ ನವೆಂಬರ್ ಬಳಿಕ ಟೀಮ್ ಇಂಡಿಯಾ ಮಹಿಳಾ ತಂಡ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೈಸೂರಿನಲ್ಲಿ ಭಾರತೀಯ ಮಹಿಳಾ ತಂಡ ಟೆಸ್ಟ್ ಪಂದ್ಯವನ್ನಾಡಿತ್ತು. ಅಂದಿನ ತಂಡದಲ್ಲಿದ್ದ 7 ಆಟಗಾರ್ತಿಯರು ಇಂಗ್ಲೆಂಡ್ ವಿರುದ್ಧದ ಸರಣಿಗೆ ಪ್ರವಾಸ ಕೈಗೊಂಡಿರುವ ತಂಡದಲ್ಲಿದ್ದಾರೆ ಎಂಬುದು ಗಮನಾರ್ಹ.

WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!

ಆದರೆ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪಾಳ್ಗೊಳ್ಳದೆ ಇರುವುದು ಹಾಗೂ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿಯೂ ಹೆಚ್ಚಿನ ಅವಕಾಶಗಳು ದೊರೆಯದೆ ಇರುವುದು ಟೀಮ್ ಇಂಡಿಯಾ ಮಹಿಳಾ ತಂಡಕ್ಕೆ ಸವಾಲಾಗುವ ಸಾಧ್ಯತೆಯಿದೆ. ಜೊತೆಗೆ ಪುರುಷರ ತಂಡದಂತೆ ಇಂಟ್ರಾ ಸ್ಕ್ವಾಡ್ ಪಂದ್ಯಗಳು ಕೂಡ ನಡೆಯದಿರುವುದು ಈ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಕಠಿಣ ಸವಾಲಾಗುವ ಸಾಧ್ಯತೆಯಿದೆ.

ಭಾರತ ತಂಡ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪುನಮ್ ರಾವತ್, ಪ್ರಿಯಾ ಪುನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ಗೋಸ್ ಜಮ್, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್

ಇಂಗ್ಲೆಂಡ್: ಹೀದರ್ ನೈಟ್ (ನಾಯಕಿ), ಎಮಿಲಿ ಅರ್ಲಾಟ್, ಟಮ್ಮಿ ಬ್ಯೂಮಾಂಟ್, ಕ್ಯಾಥರೀನ್ ಬ್ರಂಟ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಜಾರ್ಜಿಯಾ ಎಲ್ವಿಸ್, ಟ್ಯಾಶ್ ಫಾರಂಟ್, ಸಾರಾ ಗ್ಲೆನ್, ಆಮಿ ಜೋನ್ಸ್, ನ್ಯಾಟ್ ಸ್ಕಿವರ್ (ಉಪನಾಯಕಿ), ಅನ್ಯಾ ಶ್ರಬ್ಸೋಲ್, ಮ್ಯಾಡಿ ವಿಲಿಯರ್ಸ್, ಫ್ರಾನ್ ವಿಲ್ಸನ್, ಲಾರೆನ್ ವಿನ್ಫೀಲ್ಡ್-ಹಿಲ್.

Story first published: Wednesday, June 16, 2021, 9:06 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X