ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಥಾಲಿ ಹೋರಾಟ ವ್ಯರ್ಥ, ದಕ್ಷಿಣ ಆಫ್ರಿಕಾ ವಿರುದ್ಧ ಶರಣಾದ ಭಾರತ

India Women suffer 3rd straight defeat against South Africa Women despite Mithali Rajs 79 not out

ಲಕ್ನೋ: ನಾಯಕಿ ಮಿಥಾಲಿ ರಾಜ್ ಅವರ ಅರ್ಧ ಶತಕದ ಹೋರಾಟದ ಹೊರತಾಗಿಯೂ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ ಸೋಲಿನೊಂದಿಗೆ ಭಾರತದ ವನಿತೆಯರು ಸತತ 3ನೇ ಸೋಲು ಕಂಡಿದ್ದಾರೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 4-1 ಹಿನ್ನಡೆ ಅನುಭವಿಸಿದೆ.

4ನೇ ಟಿ20ಐಗೆ ಟೀಮ್ ಇಂಡಿಯಾದಲ್ಲಿ ಇಬ್ಬರನ್ನು ಆಡಿಸಲು ವಾನ್ ಸಲಹೆ4ನೇ ಟಿ20ಐಗೆ ಟೀಮ್ ಇಂಡಿಯಾದಲ್ಲಿ ಇಬ್ಬರನ್ನು ಆಡಿಸಲು ವಾನ್ ಸಲಹೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ವನಿತಾ ತಂಡ, ಪ್ರಿಯಾ ಪೂನಿಯಾ 18, ಸ್ಮೃತಿ ಮಂಧಾನ 18, ಪೂನಂ ರಾವತ್ 10, ಹರ್ಮನ್‌ಪ್ರೀತ್ ಕೌರ್ (ಗಾಯಾಳಾಗಿ ಹೊರಗೆ) 30, ಮಿಥಾಲಿ ರಾಜ್ ಅಜೇಯ 79, ಜೂಲನ್ ಗೋಸ್ವಾಮಿ 5, ಮೋನಿಕಾ ಪಾಟೆಲ್ 9 ರನ್‌ನೊಂದಿಗೆ 49.3 ಓವರ್‌ಗೆ 9 ವಿಕೆಟ್ ಕಳೆದು 188 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ವನಿತಾ ತಂಡ, ನಾಯಕಿ ಸೂನೆ ಲೂಸ್ 10, ಮಿಗ್ನಾನ್ ಡು ಪ್ರೀಜ್ 57, ಆನ್ ಬಾಷ್ 58, ಮಾರಿಜನ್ನೆ ಕಾಪ್ 36, ನಾಡಿನ್ ಡಿ ಕ್ಲರ್ಕ್ 19 ರನ್‌ ಕೊಡುಗೆಯೊಂದಿಗೆ 48.2 ಓವರ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 189 ರನ್ ಗಳಿಸಿ ಗೆಲುವನ್ನಾಚರಿಸಿತು.

ಭಾರತ vs ಇಂಗ್ಲೆಂಡ್: ಮೈಲಿಗಲ್ಲು ದಾಟುವ ಸನಿಹದಲ್ಲಿ ರೋಹಿತ್ ಶರ್ಮಾಭಾರತ vs ಇಂಗ್ಲೆಂಡ್: ಮೈಲಿಗಲ್ಲು ದಾಟುವ ಸನಿಹದಲ್ಲಿ ರೋಹಿತ್ ಶರ್ಮಾ

ಭಾರತದ ಮಹಿಳಾ ತಂಡದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವನಿತಾ ತಂಡದ ನಾಡಿನ್ ಡಿ ಕ್ಲಾರ್ಕ್ 3, ಮಾರಿಜನ್ನೆ ಕಾಪ್ 1, ನೊಂಡುಮಿಸೊ ಶಾಂಗೇಸ್ 2, ತುಮಿ ಸೆಖುಖುನೆ 2 ವಿಕೆಟ್‌ನೊಂದಿಗೆ ಗಮನ ಸೆಳೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್ 3 ವಿಕೆಟ್‌ ಪಡೆದರು.

Story first published: Thursday, March 18, 2021, 9:53 [IST]
Other articles published on Mar 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X