ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಮಹಿಳಾ ಟಿ20: ಮೊದಲ ಪಂದ್ಯ, ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ, ಪ್ಲೇಯಿಂಗ್ XI

India women vs Australia Women, 1st t20I at Carrara Oval, Toss reports and Playing XI

ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳೆಯರ ತಂಡಗಳು ಇಂದು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದಿದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮೊದಲಿಗೆ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾಗೆ ಗುರಿಯನ್ನು ನಿಗದಿಪಡಿಸಲಿದೆ.

ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ವನಿತೆಯರ ತಂಡದ ಅತ್ಯುತ್ತಮವಾದ ಪ್ರದರ್ಶನ ನೀಡಲು ಯಶಸ್ವಿಯಾಗಿದೆ. ಈಗಾಗಲೇ ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿ ಅಂತ್ಯವಾಗಿದ್ದು ಏಕದಿನ ಸರಣಿಯಲ್ಲಲಿ ಭಾರತೀಯ ಮಹಿಳೆಯರು 2-1 ಅಂತರದಿಂದ ಸೋಲು ಕಂಡಿದ್ದರೂ ನೀಡಿದ್ದ ಅಮೋಘ ಪ್ರದರ್ಶನ ಗಮನ ಸೆಳೆದಿತ್ತು. ಇನ್ನು ಟೆಸ್ಟ್ ಸರಣಿಯಲ್ಲಿ ಪಂದ್ಯದುದ್ದಕ್ಕೂ ಭಾರತ ಮೇಲುಗೈ ಸಾಧಿಸಿತಾದರೂ ಪಂದ್ಯ ಡ್ರಾ ಫಲಿತಾಂಶ ಕಾಣುವಂತಾಗಿತ್ತು.

ಈ ಪ್ರದರ್ಶನವನ್ನು ಭಾರತದ ಮಹಿಳಾ ತಂಡ ಟಿ20 ಸರಣಿಯಲ್ಲಿಯೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ತಂಡದಿಂದ ಕಠಿಣ ಪ್ರತಿಸ್ಪರ್ಧೆಯನ್ನು ಎದುರಿಸಲಿದೆ. ಆರಂಭಿಕ ಜೋಡಿಯಾದ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಸೇರಿದಂತೆ ಬಹುತೇಕ ಆಟಗಾರರು ಉತ್ತಮ ಲಯದಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಈ ಪ್ರದರ್ಶನವನ್ನು ಭಾರತದ ಮಹಿಳಾ ತಂಡ ಟಿ20 ಸರಣಿಯಲ್ಲಿಯೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ತಂಡದಿಂದ ಕಠಿಣ ಪ್ರತಿಸ್ಪರ್ಧೆಯನ್ನು ಎದುರಿಸಲಿದೆ. ಆರಂಭಿಕ ಜೋಡಿಯಾದ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಸೇರಿದಂತೆ ಬಹುತೇಕ ಆಟಗಾರರು ಉತ್ತಮ ಲಯದಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಪಂದ್ಯ ನಡೆಯಲು ಅವಕಾಶವನ್ನೇ ನೀಡಿಲ್ಲ. 15.2 ಓವರ್‌ಗಳಾಗುವಷ್ಟರಲ್ಲಿ ಮಳೆ ಸುರಿಯಲಾರಂಭಿಸಿದ್ದು ನಂತರ ಪಂದ್ಯ ಮುಂದುವರಿಯಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಈ ಅವಧಿಯಲ್ಲಿ ಭಾರತ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಸ್ಥಿತಿಯಲ್ಲಿತ್ತು. 15.2 ಓವರ್‌ಗಳಲ್ಲಿ ಭಾರತ ಮಹಿಳೆಯರ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 131 ರನ್‌ಗಳಿಸಿತ್ತು. 165ಕ್ಕೂ ಅಧಿಕ ಮೊತ್ತದ ಗುರಿಯನ್ನು ಎದುರಾಳಿಗೆ ನೀಡುವ ಸಾಧ್ಯತೆಯಿತ್ತು. ಆದರೆ ಮಳೆ ಇದಕ್ಕೆ ಅಡ್ಡಿಯಾದ ಪರಿಣಾಮವಾಗಿ ನಿರಾಸೆಯಾಗಿದೆ.

ಭಾರತ ತಂಡದ ಬ್ಯಾಟರ್ ಜಮಿಮಾ ರೋಡ್ರಿಗಸ್ 36 ಎಸೆತಗಳಲ್ಲಿ 49 ರನ್‌ಗಳಿಸಿ ಅಜೇಯವಾಗುಳಿದಿದ್ದರು. ಈ ಮೂಲಕ ಭಾರತ ತಂಡ ಉತ್ತಮ ಮೊತ್ತ ಗಳಿಸುವತ್ತ ಹೆಜ್ಜೆಯಿಡಲು ಕಾರಣವಾಗಿದ್ದರು. ಆದರೆ ಮಳೆ ಅಡ್ಡಿಯಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಭಾರತ ವುಮೆನ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಸ್ಮೃತಿ ಮಂಧನ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್

ಬೆಂಚ್: ಸ್ನೇಹ್ ರಾಣಾ, ಹರ್ಲೀನ್ ಡಿಯೋಲ್, ಅರುಂಧತಿ ರೆಡ್ಡಿ, ಪೂನಂ ಯಾದವ್, ರಾಧಾ ಯಾದವ್, ಮೇಘನಾ ಸಿಂಗ್

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಆಸ್ಟ್ರೇಲಿಯಾ ವುಮೆನ್ ಪ್ಲೇಯಿಂಗ್ XI: ಅಲಿಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೇ ಗಾರ್ಡ್ನರ್, ಎಲ್ಲೀಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ನಿಕೊಲಾ ಕ್ಯಾರಿ, ಸೋಫಿ ಮೊಲಿನಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಹನ್ನಾ ಡಾರ್ಲಿಂಗ್ಟನ್, ಟೇಲಾ ವಲೇಮಿಂಕ್
ಬೆಂಚ್: ಜಾರ್ಜಿಯಾ ರೆಡ್‌ಮೇನ್, ಡಾರ್ಸಿ ಬ್ರೌನ್, ಸ್ಟೆಲ್ಲಾ ಕ್ಯಾಂಪ್‌ಬೆಲ್, ಅನ್ನಾಬೆಲ್ ಸದರ್‌ಲ್ಯಾಂಡ್, ಮೊಲ್ಲಿ ಸ್ಟ್ರಾನೊ, ಮೈಟ್ಲಾನ್ ಬ್ರೌನ್

Story first published: Thursday, October 7, 2021, 19:47 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X