ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಮಹಿಳೆಯರ ಗೆಲುವಿನ ಸರಪಳಿ ಮುರಿದ ಭಾರತದ ಮಹಿಳೆಯರ ತಂಡ

India women vs Australia Women ODI: Mithali Raj team beat australia by 2 wickets

ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳೆಯರ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತದ ವನಿಯೆತರ ತಂಡ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿ ಸೋಲಿನ ಅಂತರವನ್ನು ಭಾರತೀಯ ಮಹಿಳೆಯರ ತಂಡ 1-2ಕ್ಕೆ ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಈ ಸೋಲಿನ ಮೂಲಕ ಆಸ್ಟ್ರೇಲಿಯಾ ಮಹಿಳೆಯರ ತಂಡದ 26 ಪಂದ್ಯಗಳ ಗೆಲುವಿನ ಸರಪಳಿಯನ್ನು ಮುರಿಯುವಲ್ಲಿ ಭಾರತದ ಮಹಿಳಾ ತಂಡ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡ 265 ರನ್‌ಗಳನ್ನು ಗಳಿಸಿತ್ತು. ಈ ಮೂಲಕ ಭಾರತಕ್ಕೆ 265 ರನ್‌ಗಳ ಸವಾಲನ್ನು ಮುಂದಿಟ್ಟಿತ್ತು. ಆಸ್ಟ್ರೇಲಿಯಾ ಪರವಾಗಿ ಅಗ್ರ ಕ್ರಮಾಂಕದ ಆಟಗಾರ್ತಿಯರಿಂದ ದೊಡ್ಡ ಜೊತೆಯಾಟ ದಾಖಲಾಗಲಿಲ್ಲ. ಆದರೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರ ಪ್ರದರ್ಶನ ಆಸ್ಟ್ರೇಲಿಯಾ ತಂಡ ಸವಾಲಿನ ಗುರಿ ನೀಡಲು ಕಾರಣವಾಗಿತ್ತು.

ಐಪಿಎಲ್ 2021: ಚೆನ್ನೈ vs ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಬಲಿಷ್ಠರಾರು?!ಐಪಿಎಲ್ 2021: ಚೆನ್ನೈ vs ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಬಲಿಷ್ಠರಾರು?!

ಆಸ್ಟ್ರೇಲಿಯಾ ತಂಡದ ಪರವಾಗಿ ಮೂನಿ, ಗಾರ್ಡ್ನರ್ ಹಾಗೂ ತಾಹಿಲಾ ಮೆಕ್‌ಗ್ರಾಥ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ತಂಡ ಉತ್ತಮ ಮೊತ್ತವನ್ನು ಪೇರಿಸಿತ್ತು. ಐದನೇ ಕ್ರಮಾಂಕದ ಬ್ಯಾಟರ್ ಬೆತ್ ಮೂನಿ 52 ರನ್‌ಗಳ ಕೊಡುಗೆ ನೀಡಿದರೆ ಆಶ್ಲೇ ಗಾರ್ಡ್ನರ್ 62 ಎಸೆತಗಳಲ್ಲಿ 67 ರನ್‌ಗಳನ್ನು ಗಳಿಸಿದರು. ನಂರ ಬಂದ ಆಲ್‌ರೌಮಡರ್ ತಹ್ಲಿಲಾ ಮೆಕ್‌ಗ್ರಾಥ್ 32 ಎಸೆತಗಳಲ್ಲಿ 47 ರನ್‌ಗಳನ್ನು ಗಳಿಸಿ ಮಿಂಚಿದರು. ಈ ಮೂಲಕ ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್ ಕಳೆದುಕೊಂಡು 264 ರನ್‌ಗಳನ್ನು ಗಳಿಸಿತು.

ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತ ಮಹಿಳೆಯರ ತಂಡ ಉತ್ತಮ ಆರಂಭ ಪಡೆಯಿತು. ಶಫಾಲಿ ವರ್ಮಾ, ಸ್ಮೃತಿ ಮಂದಾನ ಜೋಡಿ ಮೊದಲ ವಿಕೆಟ್‌ಗೆ 59 ರನ್‌ಗಳ ಜೊತೆಯಾಟವನ್ನು ನೀಡಿದರು. ಮಂಧಾನ 22 ರನ್‌ಗಳಿಗೆ ಔಟಾದರೂ ಬಳಿಕ ಶಫಾಲಿಗೆ ಜೊತೆಯಾದ ಯಸ್ತಿಕಾ ಭಾಟಿಯಾ ಭಾರತ ಮಹಿಳೆಯರ ತಂಡಕ್ಕೆ ಅದ್ಭುತ ಜೊತೆಯಾಟವನ್ನು ನೀಡಿದರು. ಈ ಜೋಡಿ ನೀಡಿದ 101 ರನ್‌ಗಳ ಜೊತೆಯಾಟ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು. ಬಳಿಕ ಶಫಾಲಿ ವರ್ಮಾ 56 ರನ್‌ಗಳಿಸಿದ್ದ ವೇಳೆ ತಮ್ಮ ವಿಕೆಟ್ ಕಳೆದುಕೊಂಡರು.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

ಶಫಾಲಿ ವಿಕೆಟ್ ಕಳೆದುಕೊಮಡ ನಂತರ ನಂರ ಬಂದ ರಿಚಾ ಘೋಷ್ ಕೂಡ ಯಾವುದೇ ರನ್‌ಗಳಿಸದೆ ಫೆವಿಲಿಯನ್ ಸೇರಿಕೊಂಡರು. ನಂತರ ಕ್ರೀಸ್‌ಗಿಳಿದ ನಾಯಕಿ ಮಿಥಾಲಿ ರಾಜ್ ಹಾಗೂ ಪೂಜಾ ವಸ್ತ್ರಾಕರ್ ಕೂಡ ಹೆಚ್ಚಿನ ಕೊಡುಗೆ ನೀಡಲಿಲ್ಲ. ಆದರೆ ನಂತರ ಜೊತೆಯಾದ ದೀಪ್ತಿ ಶರ್ಮಾ ಹಾಗೂ ಸ್ನೇಹ್ ರಾಣಾ ಮತ್ತೊಂದು ನಿರ್ಣಾಯಕ ಜೊತೆಯಾಟ ನೀಡಿದ್ರು. ಈ ಮೂಲಕ ಭಾರತ ಗೆಲುವಿನ ಸನಿಹಕ್ಕೆ ಬಂದಿತ್ತು.

ಆದರೆ ಈ ಸಂದರ್ಭದಲ್ಲಿ ದೀಪ್ತಿ ಶರ್ಮಾ ಮೆಕ್‌ಗ್ರಾಥ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿದ್ದ ಸ್ನೇಹ್ ರಾಣಾ ಭರ್ಜರಿ ಪ್ರದರ್ಶನ ಮುಂದಿವರಿಸಿದರು. ಈ ಮೂಲಕ ಭಾರತ ಗೆಲುವಿನಗೆ ಮತ್ತಷ್ಟು ಹತ್ತಿರವಾಯಿತು. ಆದರೆ ಸ್ನೇಹ್ ರಾಣಾ ಕೂಡ ವಿಕೆಟ್ ಕಳೆದುಕೊಂಡಾಗ ಭಾರತದ ಪಾಳಯದಲ್ಲಿ ಆತಂಕವುಂಟಾಯಿತು. ಆದರೆ ಜೂಲನ್ ಗೋಸ್ವಾಮಿ ಹಾಗೂ ಮೇಘ್ನಾ ಸಿಂಗ್ ವಿಕೆಟ್ ಕಳೆದುಕೊಳ್ಳದೆ ಭಾರತದ ಗೆಲುವನ್ನು ಘೋಷಿಸಿದರು.

ಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿ

Harshal Patel RCB ತಂಡಕ್ಕೆ ಸಿಕ್ಕಿರುವ ಅಪರೂಪದ ಬೌಲರ್ | Oneindia Kannada

ಈ ಗೆಲುವಿನ ಮೂಲಕ ಭಾರತ ಈ ಏಕದಿನ ಸರಣಿಯಲ್ಲಿ ಪ್ರಥಮ ಗೆಲುವನ್ನು ದಾಖಲಿಸಿದರೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಆಟವನ್ನು ಪ್ರದರ್ಶಿಸಿದರೂ ಗೆಲುವು ಸಾಧ್ಯವಾಗಿರಲಿಲ್ಲ. ಆದರೆ ಅಂತಿಮ ಪಂದ್ಯದಲ್ಲಿ ಭಾರತದ ವನಿಯತೆಯರ ತಂಡ ಗೆಲುವನ್ನು ದಕ್ಕಿಸಿಕೊಳ್ಳಲು ಯಶಸ್ವಿಯಾಗಿದೆ.

Story first published: Sunday, September 26, 2021, 15:26 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X