ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ ವಿರುದ್ಧದ 2ನೇ ಟಿ20: ಪಂದ್ಯ ರದ್ದು, ಭಾರತಕ್ಕೆ ಗೆಲುವು

krunal pandya 2019 vs wi t20is

ಲೌಡರ್‌ಹಿಲ್‌ (ಫ್ಲೋರಿಡಾ), ಆಗಸ್ಟ್‌ 04: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್‌ ಜಯ ದಾಖಲಿಸಿ ಶುಭಾರಂಭ ಮಾಡಿದ ಟೀಮ್‌ ಇಂಡಿಯಾ, ಭಾನುವಾರ ಎರಡನೇ ಟಿ20 ಪಂದ್ಯದಲ್ಲೂ ಟಾಸ್‌ ಗೆದ್ದಿತಾದರೂ, ಈ ಬಾರಿ ಮೊದಲು ಬ್ಯಾಟ್‌ ಮಾಡಲು ಮುಂದಾಯಿತು. ಅಂತೆಯೇ ರೋಹಿತ್‌ ಶರ್ಮಾ (67) ಅವರ ಅರ್ಧಶತಕದ ನೆರವಿನಿಂದ ಸವಾಲಿನ ಮೊತ್ತ ದಾಖಲಿಸಿತು.

ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್‌ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್‌

ಇಲ್ಲಿನ ಲೌಡರ್‌ಹಿಲ್‌ ಕ್ರೀಡಾಂಗಣದಲ್ಲಿ ಸತತ ಎರಡನೇ ಬಾರಿ ಟಾಸ್‌ ಗೆಲ್ಲುವಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಯಶಸ್ವಿಯಾದರು. ಬ್ಯಾಟಿಂಗ್‌ಗೆ ನೆರವಾಗುವಂತಿದ್ದ ಪಿಚ್‌ನಲ್ಲಿ ಬೃಹತ್‌ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟ್‌ ಮಾಡುವ ನಿರ್ಧಾರ ಪ್ರಕಟಿಸಿದರು. ಅಂತೆಯೇ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್‌ಗಳನ್ನು ದಾಖಲಿಸಿತು.

1
46245

ಬಳಿಕ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ಮೊದಲ ಎರಡು ಓವರ್‌ಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಿಕೋಲಸ್‌ ಪೂರನ್‌ (19) ಮತ್ತು ರೋವ್ಮನ್‌ ಪೊವೆಲ್‌ (54) ಕೊಂಚ ಚೇತರಿಕೆ ಒದಗಿಸಿದರು. ಇದರೊಂದಿಗೆ ವಿಂಡೀಸ್‌ 15.3 ಓವರ್‌ಗಳಲ್ಲಿ 4 ವಿಕೆಟ್‌ಗೆ 94 ರನ್‌ ಗಳಿಸಿತ್ತು. ಪೂರನ್‌ ಮತ್ತು ಪೊವೆಲ್‌ ಇಬ್ಬರನ್ನೂ ಕೃಣಾಲ್‌ ಪಾಂಡ್ಯ ಬಲಿ ಪಡೆದು ಭಾರತಕ್ಕೆ ಮೇಲುಗೈ ತಂದುಕೊಟ್ಟರು.

ಈ ಸಂದರ್ಭದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಶುರುವಾಗುವ ಸೂಚನೆ ಇದ್ದ ಕಾರಣ ಪಂದ್ಯವನ್ನು ಸ್ಥಗಿತ ಗೊಳಿಸಲಾಯಿತು. ಬಳಿಕ ಮಳೆ ನಿಲ್ಲದ ಸೂಚನೆ ಇಲ್ಲದ ಕಾರಣಕ್ಕೆ ಪಂದ್ಯವನ್ನು ರದ್ದು ಪಡಿಸಲಾಯಿತು. ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ಭಾರತ ತಂಡಕ್ಕೆ 22 ರನ್‌ಗಳ ಗೆಲುವು ಪ್ರಾಪ್ತಿಯಾಯಿತು. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ತನ್ನದಾಗಿಸಿಕೊಂಡಿತು.

ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!

ಭಾರತ ತಂಡದ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಎರಡನೇ ಪಂದ್ಯದಲ್ಲೂ ಕಣಕ್ಕಿಳಿಸಿದೆ.

"ಇಂದು ಪಿಚ್‌ ಉತ್ತಮ ಸ್ಥಿತಿಯಲ್ಲಿದೆ. ನಿನ್ನೆ ಇದ್ದಂತಹ ತೇವಾಂಶ ಈಗ ಇಲ್ಲವಾಗಿದೆ. ಆದರೂ ದಿನ ಕಳೆದಂತೇ ಪಿಚ್‌ ಕೊಂಚ ಮಂದಗತಿಯಾಗಲಿದೆ. ಮೊದಲ 5-6 ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಉತ್ತಮವಾಗಲಿದ್ದು, ಚೆಂಡು ಹಳೆಯದಾದಮೇಲೆ ಸ್ಥಿತಿಗತಿಗಳಿಗೆ ತಕ್ಕಂತೆ ಬ್ಯಾಟ್‌ ಮಾಡುವಂತಾಗುತ್ತದೆ," ಎಂದು ಪಿಚ್‌ ಕುರಿತಾಗಿ ಕೊಹ್ಲಿ ಮಾತನಾಡಿದ್ದಾರೆ.

ಕಿಂಗ್‌ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌!

ಇದೇ ವೇಳೆ ಮಾಂತ್ರಿಕ ಸ್ಪಿನ್ನ ಬೌಲರ್‌ ಸುನಿಲ್‌ ನರೈನ್‌ ಅವರನ್ನು ಜಾನ್‌ ಕ್ಯಾಂಬೆಲ್‌ ಅವರ ಬದಲಾಗಿ ಇನಿಂಗ್ಸ್‌ ಆರಂಭಿಸುವಂತೆ ಮಾಡಲಾಗುತ್ತದೆ ಎಂದು ವೆಸ್ಟ್‌ ಇಂಡೀಸ್‌ ತಂಡದ ನಾಯಕ ಕಾರ್ಲೋಸ್‌ ಬ್ರಾತ್‌ವೇಟ್‌ ಹೇಳಿದ್ದಾರೆ.

ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'

"ಉತ್ತಮ ಪಿಚ್‌ ಇದಾಗಿದೆ. ಆದರೂ ತೇವಾಂಶ ಇದೆ ಎಂದು ನಂಬಿದ್ದೇನೆ. 20 ಓವರ್‌ಗಳ ಕ್ರಿಕೆಟ್‌ ಆದ್ದರಿಂದ ಹೆಚ್ಚೇನು ಬದಲಾವಣೆಯಾಗುವುದಿಲ್ಲ. ಆಟಗಾರರು ಪುಟಿದೇಳುತ್ತಾಎಂಬ ವಿಶ್ವಾಸವಿದೆ," ಎಂದಿದ್ದಾರೆ.

ತಂಡಗಳ ವಿವರ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌(ವಿಕೆಟ್‌ಕೀಪರ್‌), ಮನೀಶ್‌ ಪಾಂಡೆ, ಕೃಣಾಲ್‌ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ನವದೀಪ್‌ ಸೈನಿ, ಖಲೀಲ್‌ ಅಹ್ಮದ್‌.

ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!

ವೆಸ್ಟ್‌ ಇಂಡೀಸ್‌: ಎವಿನ್‌ ಲೂಯಿಸ್‌, ಸುನಿಲ್‌ ನರೈನ್‌, ನಿಕೊಲಾಸ್‌ ಪೂರನ್‌ (ವಿಕೆಟ್‌ಕೀಪರ್‌), ಕೈರೊನ್‌ ಪೊಲಾರ್ಡ್‌, ಶಿಮ್ರಾನ್‌ ಹೆಟ್ಮಾಯೆರ್‌, ರೋವ್ಮನ್‌ ಪೊವೆಲ್‌, ಜಾರ್ಲೋಸ್‌ ಬ್ರಾತ್‌ವೇಟ್‌ (ನಾಯಕ), ಕೀಮೊ ಪೌಲ್‌, ಖಾರಿ ಪಿಯರ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

Story first published: Monday, August 5, 2019, 0:00 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X