ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ ಕ್ರಿಕೆಟ್ 2019 : ಓದುಗರ ಆಯ್ಕೆ ತಂಡಗಳು

India World Cup squad: Heres readers choice 15 man squad

ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಕ್ಕಾಗಿ 15 ಮಂದಿ ತಂಡವನ್ನು ಸೋಮವಾರದಂದು ಮುಂಬೈಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಯ್ಕೆ ಸಮಿತಿ ಪ್ರಕಟಿಸಿದೆ. ಬಹುತೇಕ ನಿರೀಕ್ಷಿತ ತಂಡವನ್ನೇ ಆಯ್ಕೆ ಮಾಡಲಾಗಿದ್ದು, ಅಂಬಟಿ ರಾಯುಡು, ರಿಷಬ್ ಪಂತ್ ಆಯ್ಕೆಯಾಗಿಲ್ಲ.

ಈ ನಡುವೆ ಮೈಖೇಲ್ ಕನ್ನಡ ತಂಡವು ವಿಶ್ವಕಪ್ ಆಡಬಲ್ಲ 15 ಮಂದಿ ತಂಡವನ್ನು ಆಯ್ಕೆ ಮಾಡಿ ಹಂಚಿಕೊಳ್ಳುವ ಅವಕಾಶವನ್ನು ಓದುಗರಿಗೆ ನೀಡುತ್ತಿದೆ. ಕೆಲ ಓದುಗರ ಆಯ್ಕೆಯ 15 ಮಂದಿಯ ತಂಡ ಇಲ್ಲಿದೆ, ನಿಮ್ಮ ತಂಡವನ್ನು ನಮಗೆ ಕಳಿಸಿ.

ICC World Cup 2019: ಭಾರತ ಅಂತಿಮ ತಂಡ ಪ್ರಕಟಿಸಿದ ಬಿಸಿಸಿಐICC World Cup 2019: ಭಾರತ ಅಂತಿಮ ತಂಡ ಪ್ರಕಟಿಸಿದ ಬಿಸಿಸಿಐ

ನಾಲ್ಕನೇ ಕ್ರಮಾಂಕ, ಮತ್ತೊಬ್ಬ ಆಲ್ ರೌಂಡರ್, ವಿಕೆಟ್ ಕೀಪರ್ ಯಾರು ಎಂಬ ಒಂದೆರಡು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರು ಆಯ್ಕೆ ಬಹುತೇಕ ಖಚಿತವಾಗಿದೆ.

1
43644


ಇನ್ನು ಎಂಎಸ್ ಧೋನಿ ಜತೆಗೆ ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಯಾರು ತಂಡ ಸೇರಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಯುವ ಆಟಗಾರ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ನಡುವೆ ಪೈಪೋಟಿ ಇದ್ದರೂ ವಿಕೆಟ್ ಕೀಪಿಂಗ್ ಸಾಮರ್ಥ್ಯದ ಆಧಾರದ ಮೇಲೆ ದಿನೇಶ್ ಕಾರ್ತಿಕ್ ಗೆ ಅವಕಾಶ ಸಿಕ್ಕಿದೆ. ಓದುಗರ ಆಯ್ಕೆ ಇಲ್ಲಿದೆ ನೋಡಿ...
ಬಿಸಿಸಿಐ ಆಯ್ಕೆಯ 15 ಮಂದಿ ತಂಡ

ಬಿಸಿಸಿಐ ಆಯ್ಕೆಯ 15 ಮಂದಿ ತಂಡ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ(ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ.

ಭರತ್ ಕುಮಾರ್ ಆಯ್ಕೆಯ ತಂಡ

ಭರತ್ ಕುಮಾರ್ ಆಯ್ಕೆಯ ತಂಡ

ಫಿಲ್ಮಿಬೀಟ್ ಕನ್ನಡ ತಂಡ ಭರತ್ ಕುಮಾರ್ ಅವರ ಆಯ್ಕೆಯ ತಂಡ ಹೀಗಿದೆ:
ನಾಲ್ಕನೇ ಕ್ರಮಾಂಕ ಕರ್ನಾಟಕದ ಮನೀಶ್ ಪಾಂಡೆ ಹಾಗೂ ವೇಗಿ ಪ್ರಸಿಧ್ ಕೃಷ್ಣ ಆಯ್ಕೆ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಎಲ್ ರಾಹುಲ್ ಹಾಗೂ ಸುರೇಶ್ ರೈನಾ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು ಎಂದಿದ್ದಾರೆ.

1. ರೋಹಿತ್ ಶರ್ಮಾ

2. ಶಿಖರ್ ಧವನ್

3. ವಿರಾಟ್ ಕೊಹ್ಲಿ

4. ಮನಿಶ್ ಪಾಂಡೆ

5. ಸುರೇಶ್ ರೈನಾ

6. ಎಂಎಸ್ ಧೋನಿ

7. ಹಾರ್ದಿಕ್ ಪಾಂಡ್ಯ

8. ಕುಲ್ದಿಪ್ ಯಾದವ್

9. ಯಜುವೇಂದ್ರ ಚಹಲ್

10. ಮೊಹಮ್ಮದ್ ಶಮಿ

11. ಜಸ್ಪ್ರಿತ್ ಬುಮ್ರಾ

12. ಭುವನೇಶ್ವರ್ ಕುಮಾರ್

13. ರಿಷಭ್ ಪಂತ್

14. ಕೆ ಎಲ್ ರಾಹುಲ್

15. ಪ್ರಸಿದ್ಧ ಕೃಷ್ಣ

ಆದರ್ಶ್ ಯುಎಂ ಅವರ ಆಯ್ಕೆಯ ತಂಡ

ಆದರ್ಶ್ ಯುಎಂ ಅವರ ಆಯ್ಕೆಯ ತಂಡ

ಚಿಕ್ಕಮಗಳೂರಿನ ಕೊಪ್ಪ ಮೂಲದ ಕರ್ನಾಟಕ ಬ್ಯಾಂಕ್ ಉದ್ಯೋಗಿ, ಕ್ರಿಕೆಟ್ ಪ್ರೇಮಿ ಆದರ್ಶ್ ಯುಎಂ ಅವರು ತಮ್ಮ ಆಯ್ಕೆಯ ತಂಡವನ್ನು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ(ನಾಯಕ)
ರೋಹಿತ್ ಶರ್ಮಾ(ಉಪ ನಾಯಕ)
ಎಂ.ಎಸ್.ಧೋನಿ(ವಿಕೆಟ್ ಕೀಪರ್)
ಕೆ.ಎಲ್.ರಾಹುಲ್
ಮಯಾಂಕ್ ಅಗರ್ವಾಲ್
ಕೇದಾರ್ ಜಾಧವ್
ದಿನೇಶ್ ಕಾರ್ತಿಕ್(ನಾಲ್ಕನೇ ಸ್ಥಾನ ಹಾಗೂ backup keeper)
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ಯಜುವೇಂದ್ರ ಚಾಹಲ್
ಕುಲದೀಪ್ ಯಾದವ್
ಜಸ್ಪ್ರೀತ್ ಬುಮ್ರಾ
ಭುವನೇಶ್ವರ್ ಕುಮಾರ್
ಮೊಹಮ್ಮದ್ ಶಮಿ
ಖಲೀಲ್ ಅಹ್ಮದ್(ಒಬ್ಬ ಎಡಗೈ ವೇಗಿಯ ಅವಶ್ಯಕತೆಗಾಗಿ)

ಆದರೆ, ಇಲ್ಲಿ ಮಯಾಂಕ್ ಬದಲು ಆಯ್ಕೆಯಾಗೋದು ಕಷ್ಟ ಶಿಖರ್ ಧವನ್ ಅನ್ನೋದು ಗೊತ್ತು, ಆದರೆ, ಮಯಾಂಕ್ ಇದ್ದಿದ್ದರೆ ಚೆನ್ನಾಗಿತ್ತು, ಉತ್ತಮ ಲಯದಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪವನ್ ಪ್ರಸಾದ್ ಎಂಪಿ ಆಯ್ಕೆಯ ತಂಡ

ಪವನ್ ಪ್ರಸಾದ್ ಎಂಪಿ ಆಯ್ಕೆಯ ತಂಡ

ಮರವಂತೆ ಮೂಲದ ಬೆಂಗಳೂರಿನ ಖಾಸಗಿ ಐಟಿ ಕಂಪನಿ ಉದ್ಯೋಗಿ ಪವನ್ ಪ್ರಸಾದ್ ಎಂಪಿ ಅವರ ಆಯ್ಕೆಯ ತಂಡ ಇಲ್ಲಿದೆ.

1. ರೋಹಿತ್ ಶರ್ಮ
2. ಶಿಖರ್ ಧವನ್
3. ವಿರಾಟ್ ಕೊಹ್ಲಿ
4. ಅಂಬಟಿ ರಾಯುಡು
5. ಕೇದಾರ್ ಜಾಧವ್
6. ಎಂಎಸ್ ಧೋನಿ
7. ಹಾರ್ದಿಕ್ ಪಾಂಡ್ಯ
8. ಕುಲದೀಪ್ ಯಾದವ್
9. ಯಜುವೇಂದ್ರ ಚಾಹಲ್
10. ಜಸ್ ಪ್ರೀತ್ ಬೂಮ್ರಾ
11. ಮೊಹಮ್ಮದ್ ಶಮಿ
12. ಕೆಎಲ್ ರಾಹುಲ್
13. ದಿನೇಶ್ ಕಾರ್ತಿಕ್
14. ಭುವನೇಶ್ವರ್ ಕುಮಾರ್
15. ವಿಜಯ್ ಶಂಕರ್

ರಾಯುಡು ಬದಲಿಗೆ ಕೆಎಲ್ ರಾಹುಲ್ ಅಥವಾ ಕೇದಾರ್ ಜಾಧವ್ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ. ಜಡೇಜ ಹಾಗೂ ವಿಜಯ್ ಶಂಕರ್ ಇಬ್ಬರಿಗೆ ಒಬ್ಬರನ್ನು ಆಯ್ಕೆ ಮಾಡಿದರೆ ಸಾಕು. ಇಂಗ್ಲೆಂಡ್ ಪಿಚ್ ಗಳ ದೃಷ್ಟಿಯಿಂದ ವಿಜಯ್ ಶಂಕರ್ ಆಯ್ಕೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

Story first published: Monday, April 15, 2019, 17:05 [IST]
Other articles published on Apr 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X