ಭಾರತಿಯ ಕ್ರಿಕೆಟಿಗರು ದಾಖಲೆಗಾಗಿ ಆಡುತ್ತಿದ್ದರು ತಂಡಕ್ಕಾಗಿ ಅಲ್ಲ: ಇನ್ಜಮಾಮ್ ಉಲ್ ಹಕ್

ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಭಾರತೀಯ ಕ್ರಿಕೆಟ್ ತಂಡದ ಸದಸ್ಯರ ವಿರುದ್ಧ ಆಪಾದನೆಯೊಂದನ್ನು ಮಾಡಿದ್ದಾರೆ. ತಮ್ಮ ಕಾಲದಲ್ಲಿ ಆಡುತ್ತಿದ್ದ ಟೀಮ್ ಇಂಡಿಯಾ ಆಟಗಾರರು ತಂಡಕ್ಕಾಗಿ ಆಡುತ್ತಲೇ ಇರಲಿಲ್ಲ ಎಂದು ಹಕ್ ಹೇಳಿಕೆಯನ್ನು ನೀಡಿದ್ದಾರೆ.

ಭಾರತದ ಕ್ರಿಕೆಟಿಗರ ವಿರುದ್ಧ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಆಟದ ವೈಖರಿಯ ಬಗ್ಗೆ ಆರೋಪವನ್ನು ಮಾಡಿದ್ದಾರೆ. ಮಾತ್ರವಲ್ಲ ಭಾರತೀಯ ಆಟಗಾರರು ಪೇಪರ್ ಹುಲಿಗಳಾಗಿ ಮಾತ್ರವೇ ಇದ್ದರು ಅವರು ಅಂಗಳದಲ್ಲಿ ಹುಲಿಗಳಾಗಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ ಇನ್ಜಮಾಮ್ ಉಲ್ ಹಕ್

ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಭಾರತೀಯ ಕ್ರಿಕೆಟಿಗರ ಬಗ್ಗೆ ಏನೆಲ್ಲಾ ಹೇಳಿಕೆಯನ್ನು ನೀಡಿದ್ದಾರೆ. ಅವರ ಹೇಳಿಕೆಗೆ ಏನೆಲ್ಲಾ ಕಾರಣಗಳನ್ನು ನೀಡಿದ್ದಾರೆ ಮುಂದೆ ಓದಿ..

ಯೂಟ್ಯೂಬ್ ಸಂವಾದದಲ್ಲಿ ಹಕ್

ಯೂಟ್ಯೂಬ್ ಸಂವಾದದಲ್ಲಿ ಹಕ್

ಪಾಕಿಸ್ತಾನ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಯುಟ್ಯೂಬ್ ಚಾನೆಲ್‌ನಲ್ಲಿ ರಮೀಜ್ ರಾಜಾ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನದ ಕ್ರಿಕೆಟ್‌ನ ಬೆಳವಣಿಕೆ, 1992ರ ವಿಶ್ವಕಪ್‌ ಸೇರಿದಂತೆ ಆನೇಕ ವಿಚಾರವಾಗಿ ಇನ್ಜಮಾಮ್ ಉಲ್ ಹಕ್ ಮಾತನಾಡಿದ್ದಾರೆ.

ಭಾರತೀಯ ಕ್ರಿಕೆಟಿಗರ ಬಗ್ಗೆ ಹಕ್ ಆಪಾದನೆ

ಭಾರತೀಯ ಕ್ರಿಕೆಟಿಗರ ಬಗ್ಗೆ ಹಕ್ ಆಪಾದನೆ

ಈ ಸಂವಾದದಲ್ಲಿ ಭಾರತೀಯ ಕ್ರಿಕೆಟಿಹಗರ ಬಗ್ಗೆ ಹಕ್ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಕ್ರಿಕೆಟಿಗರು ತಂಡಕ್ಕಾಗಿ ಆಡುತ್ತಿರಲಿಲ್ಲ, ಅವರ ವೈಯ್ಯಕ್ತಿಕ ದಾಖಲೆಗಳಿಗಾಗಿ ಮಾತ್ರವೇ ಅವರು ಆಡುತ್ತಿದ್ದರು ಎಂದು ಹಕ್ ಹೇಳಿದ್ದಾರೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.

ಭಾರತೀಯರ ಶತಕ ದಾಖಲೆಗಾಗಿ ಇರುತ್ತಿತ್ತು

ಭಾರತೀಯರ ಶತಕ ದಾಖಲೆಗಾಗಿ ಇರುತ್ತಿತ್ತು

ನಾನು ಆಡುತ್ತಿದ್ದ ಸಮಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ದಾಖಲೆ ಪೇಪರ್‌ನಲ್ಲಿ ಅತ್ಯಂತ ಬಲಿಷ್ಠವಾಗಿತ್ತು. ನಾವು 30-40 ರನ್‌ಗಳಿಸಿದರೂ ಅದು ತಂಡಕ್ಕಾಗಿ ಇತ್ತು. ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು 100 ರನ್‌ಗಳಿಸಿದರೂ ಅದು ಕೇವಲ ದಾಖಲೆಗಾಗಿಯೇ ಇತ್ತು, ಅದು ಬಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರ ನಡುವಿನ ವ್ಯತ್ಯಾಸ ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಏಕದಿನದಲ್ಲಿ ಪಾಕ್ ಉತ್ತಮ

ಏಕದಿನದಲ್ಲಿ ಪಾಕ್ ಉತ್ತಮ

ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಏಕದಿನ ಕ್ರಿಕೆಟ್‌ನ ದಾಖಲೆ ಭಾರತದ ವಿರುದ್ಧ ಉತ್ತಮವಾಗಿದೆ ಎಂದು ಹೇಳಿಕೊಂಡಿದ್ದಾರೆ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್.

ಯುವಕರ ಬೆನ್ನಿಗೆ ನಿಂತಿದ್ದರು ಇಮ್ರಾನ್ ಖಾನ್

ಯುವಕರ ಬೆನ್ನಿಗೆ ನಿಂತಿದ್ದರು ಇಮ್ರಾನ್ ಖಾನ್

ಇದೇ ಸಂದರ್ಭದಲ್ಲಿ ಇನ್ಜಮಾಮ್ ಉಲ್ ಹಕ್ ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಇಮ್ರಾನ್ ಖಾನ್ ಬಗ್ಗೆಯೂ ಮಾತಮಾಡಿದ್ದಾರೆ. ಅವರು ತಾಂತ್ರಕವಾಗಿ ಉತ್ತಮ ನಾಯಕನಾಗಿರಲಿಲ್ಲ ಆದರೆ ತನ್ನ ಆಟಗಾರರಿಂದ ಹೇಗೆ ಅತ್ಯುತ್ತಮ ಆಟವನ್ನು ಪಡೆಯಬೇಕು ಎಂಬುದು ಅವರಿಗೆ ಗೊತ್ತಿತ್ತು. ಅದೇ ಕಾರಣಕ್ಕೆ 1992 ವಿಶ್ವಕಪ್ ಪಾಕಿಸ್ತಾನ ಗೆಲ್ಲುವಂತಾಯಿತು ಎಂದು ಹೇಳಿದ್ದಾರೆ.

ಈಗಿನ ಆಟಗಾರರಿಂದ ನೈಜ ಆಟ ಪ್ರದರ್ಶನವಾಗುತ್ತಿಲ್ಲ

ಈಗಿನ ಆಟಗಾರರಿಂದ ನೈಜ ಆಟ ಪ್ರದರ್ಶನವಾಗುತ್ತಿಲ್ಲ

'ಈಗ ನಮ್ಮ ಆಟಗಾರರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ. ತಂಡದಲ್ಲಿ ತಮ್ಮ ಛಾಪು ಮೂಡಿಸಲು ಕೇವಲ ಒಂದು ಅಥವಾ ಎರಡು ಇನ್ನಿಂಗ್ಸ್ ಮಾತ್ರ ಇದೆ ಎಂದು ಅವರು ಭಾವಿಸುತ್ತಾರೆ, ಆದ್ದರಿಂದ ತಂಡಕ್ಕೆ ಏನು ಬೇಕು ಎಂದು ಅವರು ತಿಳಿದಿರುವುದಿಲ್ಲ, ಹೀಗಾಗಿ ಆವರ ನೈಜ ಆಟ ಪ್ರದರ್ಶನವಾಗುತ್ತಿಲ್ಲ' ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, April 23, 2020, 16:54 [IST]
Other articles published on Apr 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X