ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2020ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಎಲ್ಲಾ ಸರಣಿಗಳ ವೇಳಾಪಟ್ಟಿ

Indian Cricket Team: Full schedule for 2020 calendar year

ಬೆಂಗಳೂರು, ಜನವರಿ 2: ಟೀಮ್ ಇಂಡಿಯಾ ಪಾಲಿಗೆ 2019 ಯಶಸ್ವಿ ವರ್ಷವಾಗಿತ್ತು. ಮುಖ್ಯವಾಗಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿಯ ಜೊತೆಗೆ ಇನ್ನೊಂದಿಷ್ಟು ಪ್ರತಿಭಾನ್ವಿತ ಯುವ ಆಟಗಾರರೂ ವಿಶ್ವಮಟ್ಟದಲ್ಲಿ ಮಿನುಗಿದ್ದರು.

ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!

ಭಾರತ ಕ್ರಿಕೆಟ್‌ ತಂಡವೀಗ 2020ನ್ನು ಯಶಸ್ವಿಯಾಗಿಸಲು ಮುಂದಡಿಯಿಡುತ್ತಿದೆ. ಹೊಸ ವರ್ಷದ ಮೊದಲ ವಾರದಲ್ಲೇ ಭಾರತ ತಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಒಟ್ಟಿನಲ್ಲಿ ಮುಂದಿನ ಡಿಸೆಂಬರ್ ವರೆಗೂ ಟೀಮ್ ಇಂಡಿಯಾ ಕ್ರಿಕೆಟ್‌ ಸರಣಿಗಳಲ್ಲಿ ಬ್ಯುಸಿಯಾಗಿರಲಿದೆ.

2019ರಲ್ಲಿ 'ಹಿಟ್‌ಮ್ಯಾನ್' ರೋಹಿತ್‌ ಶರ್ಮಾ ಮಾಡಿದ ವಿಶೇಷ ದಾಖಲೆಗಳು!2019ರಲ್ಲಿ 'ಹಿಟ್‌ಮ್ಯಾನ್' ರೋಹಿತ್‌ ಶರ್ಮಾ ಮಾಡಿದ ವಿಶೇಷ ದಾಖಲೆಗಳು!

2020ರಲ್ಲಿ ಭಾರತದ ಪುರುಷರ ತಂಡ ಪಾಲ್ಗೊಳ್ಳುವ ಎಲ್ಲಾ ಸರಣಿಗಳ ವೇಳಾಪಟ್ಟಿ, ಚಿತ್ರಣ ಇಲ್ಲಿದೆ (ಐಪಿಎಲ್ ಆರಂಭ, ಅಂತ್ಯದ ದಿನಾಂಕವೂ ಇದರಲ್ಲಿ ಸೇರಿದೆ).

1. ಭಾರತಕ್ಕೆ ಶ್ರೀಲಂಕಾ ಪ್ರವಾಸ (3 ಟಿ20 ಪಂದ್ಯಗಳು)

1. ಭಾರತಕ್ಕೆ ಶ್ರೀಲಂಕಾ ಪ್ರವಾಸ (3 ಟಿ20 ಪಂದ್ಯಗಳು)

ಜನವರಿ 5, ಸ್ಥಳ: ಬರಾಸ್ಪರಾ ಕ್ರೀಡಾಂಗಣ, ಗುವಾಹಟಿ
ಜನವರಿ 7, ಸ್ಥಳ: ಹೋಲ್ಕರ್ ಕ್ರೀಡಾಂಗಣ, ಇಂದೋರ್
ಜನವರಿ 10, ಸ್ಥಳ: ಎಂಸಿಎ ಕ್ರೀಡಾಂಗಣ, ಪುಣೆ

2. ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ (3 ಏಕದಿನ ಪಂದ್ಯಗಳು)

2. ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ (3 ಏಕದಿನ ಪಂದ್ಯಗಳು)

ಜನವರಿ 14, ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ
ಜನವರಿ 17, ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣ, ರಾಜ್‌ಕೋಟ್
ಜನವರಿ 19, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

3. ನ್ಯೂಜಿಲೆಂಡ್‌ಗೆ ಭಾರತದ ಪ್ರವಾಸ (5 ಟಿ20, 3 ಏಕದಿನ, 2 ಟೆಸ್ಟ್)

3. ನ್ಯೂಜಿಲೆಂಡ್‌ಗೆ ಭಾರತದ ಪ್ರವಾಸ (5 ಟಿ20, 3 ಏಕದಿನ, 2 ಟೆಸ್ಟ್)

ಜನವರಿ 24, 1ನೇ ಟಿ20ಐ; ಸ್ಥಳ: ಈಡನ್ ಪಾರ್ಕ್, ಆಕ್ಲೆಂಡ್
ಜನವರಿ 26, 2ನೇ ಟಿ20ಐ; ಸ್ಥಳ: ಈಡನ್ ಪಾರ್ಕ್, ಆಕ್ಲೆಂಡ್
ಜನವರಿ 29, 3ನೇ ಟಿ20ಐ; ಸ್ಥಳ: ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
ಜನವರಿ 31, 4ನೇ ಟಿ20ಐ; ಸ್ಥಳ: ವೆಸ್ಟ್‌ಪ್ಯಾಕ್ ಕ್ರೀಡಾಂಗಣ, ವೆಲ್ಲಿಂಗ್ಟನ್
ಫೆಬ್ರವರಿ 2, 5ನೇ ಟಿ20ಐ; ಸ್ಥಳ: ಬೇ ಓವಲ್, ಮೌಂಟ್ ಮೌಂಗನುಯಿ
ಫೆಬ್ರವರಿ 5, 1ನೇ ಏಕದಿನ; ಸ್ಥಳ: ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
ಫೆಬ್ರವರಿ 8, 2ನೇ ಏಕದಿನ; ಸ್ಥಳ: ಈಡನ್ ಪಾರ್ಕ್, ಆಕ್ಲೆಂಡ್
ಫೆಬ್ರವರಿ 11, 3ನೇ ಏಕದಿನ; ಸ್ಥಳ: ಬೇ ಓವಲ್, ಮೌಂಟ್ ಮೌಂಗನುಯಿ
ಫೆಬ್ರವರಿ 21, 1ನೇ ಟೆಸ್ಟ್; ಸ್ಥಳ: ವೆಸ್ಟ್‌ಪ್ಯಾಕ್ ಕ್ರೀಡಾಂಗಣ, ವೆಲ್ಲಿಂಗ್ಟನ್
ಫೆಬ್ರವರಿ 29, 2ನೇ ಟೆಸ್ಟ್; ಸ್ಥಳ: ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್

4. ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ (3 ಏಕದಿನ ಪಂದ್ಯಗಳು)

4. ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ (3 ಏಕದಿನ ಪಂದ್ಯಗಳು)

ಮಾರ್ಚ್ 12, 1ನೇ ಏಕದಿನ; ಸ್ಥಳ: ಎಚ್‌ಪಿಸಿಎ ಕ್ರೀಡಾಂಗಣ, ಧರ್ಮಶಾಲಾ
ಮಾರ್ಚ್ 15, 2ನೇ ಏಕದಿನ; ಸ್ಥಳ: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ
ಮಾರ್ಚ್ 18, 3ನೇ ಏಕದಿನ; ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ

5. ಐಪಿಎಲ್, ಶ್ರೀಲಂಕಾಕ್ಕೆ ಭಾರತ ಪ್ರವಾಸ

5. ಐಪಿಎಲ್, ಶ್ರೀಲಂಕಾಕ್ಕೆ ಭಾರತ ಪ್ರವಾಸ

* ವರದಿಗಳ ಪ್ರಕಾರ ಭಾರತದ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ ಕೊನೇ ವಾರದಲ್ಲಿ ಆರಂಭಗೊಳ್ಳಲಿದೆ. ಅಂದರೆ ಮಾರ್ಚ್ 28ಕ್ಕೆ ಆರಂಭಗೊಳ್ಳುವ ಟೂರ್ನಿ ಮೇ 24ಕ್ಕೆ ಕೊನೆಗೊಳ್ಳಲಿದೆ ಎನ್ನಲಾಗುತ್ತಿದೆ.
* ಶ್ರೀಲಂಕಾಕ್ಕೆ ಭಾರತದ ಪ್ರವಾಸ (ಶ್ರೀಲಂಕಾಕ್ಕೆ ಭಾರತದ ಪ್ರವಾಸ ಸರಣಿಯು 3 ಏಕದಿನ ಪಂದ್ಯಗಳು ಮತ್ತು ಟಿ20 ಸರಣಿಯನ್ನು ಒಳಗೊಂಡಿರಲಿದೆ. ಆದರೆ ಇದರ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಜುಲೈನಲ್ಲಿ ಈ ಸರಣಿ ಆರಂಭವಾಗುವ ನಿರೀಕ್ಷೆಯಿದೆ).

6. ಏಷ್ಯಾಕಪ್, ಟಿ20 ವಿಶ್ವಕಪ್ ಇನ್ನಿತರ ಸರಣಿಗಳು

6. ಏಷ್ಯಾಕಪ್, ಟಿ20 ವಿಶ್ವಕಪ್ ಇನ್ನಿತರ ಸರಣಿಗಳು

* ಏಷ್ಯಾಕಪ್ (ಈ ಟೂರ್ನಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ)
* ಭಾರತಕ್ಕೆ ಇಂಗ್ಲೆಂಡ್ ಪ್ರವಾಸ (ಸೆಪ್ಟೆಂಬರ್-ಅಕ್ಟೋಬರ್)
* ಐಸಿಸಿ ಟಿ20 ವಿಶ್ವಕಪ್ (ಅಕ್ಟೋಬರ್-ನವೆಂಬರ್, ಆಸ್ಟ್ರೇಲಿಯಾದಲ್ಲಿ)
* ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ (ಟಿ20 ವಿಶ್ವಕಪ್‌ ಬಳಿಕ ಆಸ್ಟ್ರೇಲಿಯಾದಲ್ಲೇ ಉಳಿಯಲಿರುವ ಭಾರತ ಕ್ರಿಕೆಟ್‌ ತಂಡ, ಆತಿಥೇಯರ ವಿರುದ್ಧ 4 ಟೆಸ್ಟ್, 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿ ನವೆಂಬರ್‌ನಿಂದ ಡಿಸೆಂಬರ್ ವರೆಗೆ ನಡೆಯಲಿದೆ).

Story first published: Tuesday, May 5, 2020, 17:27 [IST]
Other articles published on May 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X