ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ವೇಗದ ಬೌಲಿಂಗ್ ವಿಭಾಗವನ್ನು ಕೊಂಡಾಡಿದ ಆಸಿಸ್ ಮಾಜಿ ವೇಗಿ

Indian Cricket Teams Fast Bowling Stocks Are Very Healthy: Jason Gillespie

ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವೇಗದ ಬೌಲಿಂಗ್ ವಿಭಾಗ ಸಾಕಷ್ಟು ಪಂದ್ಯಗಳ ಮೇಲೆ ಹಿಡಿತ ಸಾಧಿಸಲು ಕಾರಣವಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗಿ ಕೂಡ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜಾಸನ್ ಗಿಲೆಸ್ಪಿ ಟೀಮ್ ಇಂಡಿಯಾ ವೇಗದ ಬೌಲಿಂಗ್ ಪಡೆಯನ್ನು ಪ್ರಶಂಸಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಪ್ರದರ್ಶನದಿಂದ ನಾನು ಸಂತಸಗೊಂಡಿದ್ದೇನೆ. ಕಳೆದ ದಶಕದಲ್ಲಿ ನಾವು ಡೇಲ್ ಸ್ಟೈನ್ ಅವರನ್ನು ಕಂಡಿದ್ದೇವೆ. ಈಗ ಭಾರತದಿಂದ ಅದ್ಭುತ ಬೌಲರ್‌ಗಳು ಬೆಳಕಿಗೆ ಬರುತ್ತಿದ್ದಾರೆ ಎಂದು ಜಾಸನ್ ಗಿಲೆಸ್ಪಿ ಹೇಳಿದ್ದಾರೆ. 'ಸ್ಟೋರ್ಟ್ಸ್ ಕೀಡಾ'ಗೆ ನೀಡಿದ ವಿಶೇಷ ಸಂದರ್ಶನದ ಸಂದರ್ಭದಲ್ಲಿ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸ್ಕೀಯಿಂಗ್ ಸಾಧನೆಯ ಕನವರಿಕೆಯಲ್ಲಿ ಕೊಡಗಿನ ಹುಡುಗಿ ಭವಾನಿಸ್ಕೀಯಿಂಗ್ ಸಾಧನೆಯ ಕನವರಿಕೆಯಲ್ಲಿ ಕೊಡಗಿನ ಹುಡುಗಿ ಭವಾನಿ

ಭಾರತದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ ಜಸ್ಪ್ರೀತ್ ಬೂಮ್ರಾ, ಮೊಹಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಜೊತೆಗೆ ಉಮೇಶ್ ಯಾದವ್‌ರಂತಾ ಬೌಲರ್‌ಗಳು ಇದ್ದಾರೆ. ಭಾರತದ ಬೌಲಿಂಗ್ ಪಡೆಯ ಬಲ ಅದ್ಭುತವಾಗಿದೆ ಎಂದು ಜಾಸನ್ ಗಿಲೆಸ್ಪಿ ಹೇಳಿದ್ದಾರೆ. ತಂಡವಾಗಿ ಭಾರತೀಯ ವೇಗಿಗಳು ಅಮೋಘ ಪ್ರದರ್ಶನ ನಿಡುತ್ತಿದ್ದಾರೆ ಎಂದಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಬೌಲಿಂಗ್ ದಾಳಿ ಆರೋಗ್ಯಕರವಾಗಿದೆ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಜನರು ಹಿಂದಿನ ಕಾಲದ ಆಟದ ಜೊತೆಗೆ ಈಗಿನ ಕ್ರಿಕೆಟನ್ನು ಹೋಲಿಸಲು ಬಯಸುತ್ತಾರೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ ಆಟ ಕಾಲದಿಂದ ಕಾಲಕ್ಕೆ ಸುಧಾರಿಸುತ್ತಲೇ ಹೋಗುತ್ತಿದೆ ಮತ್ತಷ್ಟು ಉತ್ತಮವಾಗುತ್ತಿದೆ. ಜನರು ಹಿಂದಿನ ಕ್ರಿಕೆಟನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಾರೆ ಮತ್ತು ಗೌರವಿಸುತ್ತಾರೆ. ಆದರೆ ಇದರ ಜೊತೆಗೆ ಪ್ರಸಕ್ತ ಕಾಲದ ಆಟಕ್ಕೆ ಕೃತಜ್ಞರಾಗಿರುವುದನ್ನು ನಾನು ನೊಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳುಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಆಸ್ಟ್ರೇಲಿಯಾ ಕ್ರಿಕೆಟ್ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಜಾಸನ್ ಗಿಲೆಸ್ಪಿ ಆಸ್ಟ್ರೇಲಿಯಾ ಕ್ರಿಕೆಟ್‌ನ ಪ್ರಮುಖ ಭಾಗವಾಗಿದ್ದರು. ಆಸ್ಟ್ರೇಲಿಯಾ ಪರವಾಗಿ 2006 ಕೊನೆಯ ಬಾರಿಗೆ ಜಾಸನ್ ಗಿಲೆಸ್ಪಿ ಕಣಕ್ಕೆ ಇಳಿದಿದ್ದರು. ಈಗ ಕೋಚಿಂಗ್ ವಿಭಾಗದತ್ತ ಗಿಲೆಸ್ಪಿ ಗಮನ ನೀಡಿದ್ದು ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ತುಂಬುತ್ತಿದ್ದಾರೆ.

Story first published: Tuesday, June 2, 2020, 18:03 [IST]
Other articles published on Jun 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X