ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾನುವಾರ 9pmಗೆ ಪಟಾಕಿ ಸಿಡಿಸಿದವರ ವಿರುದ್ಧ ಕ್ರಿಕೆಟಿಗರು ಕಿಡಿ

Indian cricketers hit out at people who burst fire crackers on Sunday

ನವದೆಹಲಿ, ಏಪ್ರಿಲ್ 7: ಏಪ್ರಿಲ್ 5ರ ಭಾನುವಾರ 9 pmಗೆ 9 ನಿಮಷಗಳ ಕಾಲ ದೀಪ ಹಚ್ಚುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಕೋರಿಕೊಂಡಿದ್ದರು. ಕೊರೊನಾವೈರಸ್ ವಿರುದ್ಧ ದೇಶದ ಜನರೆಲ್ಲ ಒಗ್ಗಟ್ಟು ಪ್ರದರ್ಶಿಸುವುದಕ್ಕಾಗಿ ಮತ್ತು ಕೊರನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು, ಡಾಕ್ಟರ್‌ಗಳಿಗೆ ಬೆಂಬಲ ಸೂಚಿಸುವ ಅರ್ಥದಲ್ಲಿ ಮೋದಿ ದೀಪ ಹಚ್ಚಲು ಕರೆ ನೀಡಿದ್ದರು. ಆದರೆ ಇದೇ ವೇಳೆ ಕೆಲವು ಮಂದಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದರು.

ಗೆರೆ ದಾಟಬೇಡಿ: ಜಸ್‌ಪ್ರೀತ್‌ ಬೂಮ್ರಾ ಮುಂದಿಟ್ಟು ಪಾಕಿಸ್ತಾನ ಎಚ್ಚರಿಕೆ!ಗೆರೆ ದಾಟಬೇಡಿ: ಜಸ್‌ಪ್ರೀತ್‌ ಬೂಮ್ರಾ ಮುಂದಿಟ್ಟು ಪಾಕಿಸ್ತಾನ ಎಚ್ಚರಿಕೆ!

ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೇರಿದಂತೆ ದೇಶದ ಬಹುತೇಕ ಮಂದಿ ಪ್ರಧಾನಿಯ ಕರೆಗೆ ಓಗುಟ್ಟು, ದೀಪ ಹಚ್ಚಿ ಬೆಂಬಲ ಸೂಚಿಸಿದ್ದರು. ಆದರೆ ಇನ್ನೊಂದಿಷ್ಟು ಕಿಡಿಗೇಡಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದರಿಂದ ತೊಂದರೆ ಉಂಟಾಗಿತ್ತು.

ಕೊಹ್ಲಿ ಬ್ಯಾಟ್‌ನಿಂದ ಬಂದಿಲ್ಲ , ಸಚಿನ್‌ಗೆ 24 ವರ್ಷದಲ್ಲಿ ಸಾಧ್ಯವಾಗಿಲ್ಲ!ಕೊಹ್ಲಿ ಬ್ಯಾಟ್‌ನಿಂದ ಬಂದಿಲ್ಲ , ಸಚಿನ್‌ಗೆ 24 ವರ್ಷದಲ್ಲಿ ಸಾಧ್ಯವಾಗಿಲ್ಲ!

ಮೋದಿ ಕರೆಯ ದಿನ ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹತ್ತಿ, ಅನಾಹುತ ಸೃಷ್ಟಿಯಾಗಿದ್ದೂ ಹಲವೆಡೆ ವರದಿಯಾಗಿತ್ತು. ಪ್ರಧಾನಿ ದೀಪ ಹಚ್ಚಲು ಕೇಳಿಕೊಂಡಿದ್ದಾಗ ಪಟಾಕಿ ಸಿಡಿಸಿದವರ ವಿರುದ್ಧ ಕ್ರಿಕೆಟಿಗರು ಬೇಸರ ತೋರಿಕೊಂಡಿದ್ದಾರೆ.

ಸಿಟ್ಟಾದ ಬಿಜೆಪಿ ಎಂಪಿ

ಸಿಟ್ಟಾದ ಬಿಜೆಪಿ ಎಂಪಿ

ದೀಪ ಹಚ್ಚಿ ಅಂದರೆ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ ಅನಾಹುತ ಸೃಷ್ಟಿಸಿರುವ ಜನರ ವಿರುದ್ಧ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎಂಪಿಯಾಗಿರುವ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. 'ಭಾರತದವರೆ, ಮನೆಯಲ್ಲೇ ಇರಿ. ಕೊರೊನಾವೈರಸ್ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ನಾವು ಹೋರಾಟದ ಮಧ್ಯೆ ಇದ್ದೀವಿ. ಪಟಾಕಿ ಸಿಡಿಸಿ ಸಂಭ್ರಮಾಚರಿಸೋಕೆ ಇದು ಸರಿಯಾದ ಸಂದರ್ಭ ಅಲ್ಲ,' ಎಂದು ಟ್ವೀಟ್‌ನಲ್ಲಿ ಗಂಭೀರ್ ಬರೆದುಕೊಂಡಿದ್ದಾರೆ. ಗಂಭೀರ್, ಕೊರೊನಾ ವಿರುದ್ಧದ ಹೋರಾಟಕ್ಕಾಗಿ 50 ಲಕ್ಷ ರೂ. ದೇಣಿಗೆಯೂ ನೀಡಿದ್ದರು.

ಸ್ಪಿನ್ ಮಾಂತ್ರಿಕ ಭಜ್ಜಿ ಟ್ವೀಟ್

ಇನ್ನು ಹರ್ಭಜನ್ ಸಿಂಗ್, ಇರ್ಫಾನ್ ಫಠಾಣ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದಾರೆ. 'ನಾಳೆ ನಾವು ಕೊರೊನಾಗೆ ಔಷಧಿ ಕಂಡು ಹಿಡಿಯಬಹುದು. ಆದರೆ ಇಂಥ ಮೂರ್ಖತನಕ್ಕೆ ಮದ್ದು ಕಂಡುಹಿಡಿಯೋದು ಯಾವಾಗ?' ಎಂದು ಭಜ್ಜಿ ಟ್ವೀಟ್ ಮಾಡಿದ್ದರೆ.

ಇವರಿಗೆ ಪಟಾಕಿ ಎಲ್ಲಿ ಸಿಕ್ತು?

ಇವರಿಗೆ ಪಟಾಕಿ ಎಲ್ಲಿ ಸಿಕ್ತು?

'ಇವರಿಗೆಲ್ಲ ಪಟಾಕಿ ಎಲ್ಲಿ ಸಿಕ್ತು ಅನ್ನೋದು ನಂಗೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಇಂಥ ನಿಷೇಧದ ಸಮಯದಲ್ಲಿ ಇವರಿಗೆ ಪಟಾಕಿ ಎಲ್ಲಿಂದಾದರೂ ಸಿಗುತ್ತದೆಯೋ' ಎಂದು ಅಸಮಾಧಾನ ತೋರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬರೆದುಕೊಂಡಿದ್ದಾರೆ.

ಇರ್ಫಾನ್ ಪಠಾಣ್ ಅಸಮಾಧಾನ

ಇರ್ಫಾನ್ ಪಠಾಣ್ ಅಸಮಾಧಾನ

'ಜನ ಪಟಾಕಿ ಉರಿಸುವವರೆಗೂ ಎಲ್ಲವೂ ಚೆನ್ನಾಗೇ ಇತ್ತು' ಅಂತ ಇರ್ಫಾನ್ಪಠಾಣ್ ಟ್ವೀಟ್ ಮಾಡಿದ್ದಾರೆ. ಪಠಾಣ್ ಸಹೋದರರೂ ಲಾಕ್‌ಡೌನ್‌ ವೇಳೆ ತೊಂದರೆಯಲ್ಲಿದ್ದ ಅನೇಕ ಕುಟುಂಬಗಳಿಗೆ ನೆರವಿತ್ತಿದ್ದಾರೆ. ಹಲವರಿಗೆ ಮಾಸ್ಕ್, ಆಹಾರ ಧಾನ್ಯ, ಔಷಧಗಳನ್ನು ಪಠಾಣ್ ಸಹೋದರರು ವಿತರಿಸಿದ್ದರು.

Story first published: Tuesday, April 7, 2020, 12:47 [IST]
Other articles published on Apr 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X