ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೊಫ್ರಾ ಬಿಹು ನೃತ್ಯ: ಆರ್ಚರ್ ತಾಯ್ನಾಡು ಯಾವುದು? ಗೂಗಲ್‌ನಲ್ಲಿ ಅಭಿಮಾನಿಗಳ ಹುಡುಕಾಟ!

Indian Fans Google Jofra Archers Native Place And Home Country After Bihu Dance

ಐಪಿಎಲ್ 13ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಜೋಫ್ರಾ ಆರ್ಚರ್ ಸಖತ್ ಡ್ಯಾನ್ಸ್ ಮೂಲಕವೂ ಎಲ್ಲರ ಗಮನ ಸೆಳೆದರು. ಎಲ್ಲಿಂದ ಈ ನೃತ್ಯವನ್ನ ಕಲಿತುಕೊಂಡ್ರು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿರುವುದು ಸಹಜ.

ಜೊಫ್ರಾ ಆರ್ಚರ್ ಈ ಡ್ಯಾನ್ಸ್ ಮಾಡಿದ ಬಳಿಕ ಜೊಫ್ರಾ ಆರ್ಚರ್ ಊರು ಯಾವುದು, ಎಲ್ಲಿಂದ ಬಂದವರು ಎಂದು ಅಭಿಮಾನಿಗಳು ಕೌತುಕದಿಂದ ಗೂಗಲ್‌ನಲ್ಲಿ ತುಂಬಾನೇ ಹುಡುಕಾಟ ನಡೆಸಿದ್ದಾರೆ. ಅಷ್ಟಕ್ಕೂ ಜೊಫ್ರಾ ಈ ಡ್ಯಾನ್ಸ್ ಕಲಿತಿದ್ದು ಎಲ್ಲಿ?

ಜೊಫ್ರಾ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಸಂಭ್ರಮಾಚರಣೆ

ಜೊಫ್ರಾ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಸಂಭ್ರಮಾಚರಣೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡಿದ ಆರ್ಚರ್ ಆರಂಭಿಕ ಎಸೆತದಲ್ಲಿ ಪೃಥ್ವಿ ಶಾ ಅವರನ್ನು ಔಟ್ ಮಾಡಿದ ವೇಳೆ ಜೊಫ್ರಾ ತಂಡದ ಸದಸ್ಯರೊಂದಿಗೆ ಈ ಕ್ಷಣವನ್ನು ಆಚರಿಸುವಾಗ, ಅವರು ಬಿಹು ನೃತ್ಯವನ್ನು ಪ್ರದರ್ಶಿಸಿದರು.

ತೈಮೂರ್‌ಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬಹುದೇ ಎಂದ ಕರೀನಾ ಕಪೂರ್: ಪ್ರತಿಕ್ರಿಯಿಸಿದೆ ಡೆಲ್ಲಿ ಕ್ಯಾಪಿಟಲ್ಸ್

ಜೊಫ್ರಾ ಡ್ಯಾನ್ಸ್ ನೋಡಿ ಗೂಗಲ್‌ನಲ್ಲಿ ಅಭಿಮಾನಿಗಳ ಹುಡುಕಾಟ

ಜೊಫ್ರಾ ಆರ್ಚರ್ ಬಿಹು ನೃತ್ಯವನ್ನು ಪ್ರದರ್ಶಿಸಿದ್ದೇ ತಡ "ಜೋಫ್ರಾ ಆರ್ಚರ್ ಎಲ್ಲಿಂದ ಬಂದವರು?" ಆರ್ಚರ್ ತಾಯ್ನಾಡು ಯಾವುದು? ಜೊಫ್ರಾ ಸ್ವಂತ ಊರು ಯಾವುದು? ಹೀಗೆ ನಾನಾ ರೀತಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ವೇಗಿಯ ವೃತ್ತಿಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.

ಜೊಫ್ರಾ ಆರ್ಚರ್ ಕಳೆದ ವರ್ಷದಿಂದ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

Video: ಪೃಥ್ವಿ ಶಾ ವಿಕೆಟ್ ಕಿತ್ತ ಖುಷಿಯಲ್ಲಿ ಜೋಫ್ರಾ ಆರ್ಚರ್ ಡ್ಯಾನ್ಸ್

ಐಪಿಎಲ್‌ನಲ್ಲಿ ಬಿಹು ನೃತ್ಯ ಮೊದಲು ಪ್ರದರ್ಶಿಸಿದ್ದು ಪರಾಗ್!

ಐಪಿಎಲ್‌ನಲ್ಲಿ ಬಿಹು ನೃತ್ಯ ಮೊದಲು ಪ್ರದರ್ಶಿಸಿದ್ದು ಪರಾಗ್!

ಹೌದು, ಐಪಿಎಲ್ 13ನೇ ಆವೃತ್ತಿಯಲ್ಲಿ ಬಿಹು ನೃತವನ್ನ ಪ್ರದರ್ಶನ ಮಾಡಿದ್ದು ಮೊದಲಿಗೆ ರಿಯಾನ್ ಪರಾಗ್. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ ಜಯ ಸಾಧಿಸಿದ ನಂತರ ರಾಜಸ್ಥಾನ್ ರಾಯಲ್ಸ್‌ನ ರಿಯಾನ್ ಪರಾಗ್ ಅವರು ಬಿಹು ನೃತ್ಯ ಶೈಲಿಯನ್ನು ಮೊದಲು ಪ್ರದರ್ಶಿಸಿದ್ರು.

ನಿದಾಹಸ್ ಟ್ರೋಫಿಯಲ್ಲಿ ನಾಯಕನ ನಿರ್ಧಾರಕ್ಕೆ ಸಿಟ್ಟಾಗಿದ್ದರಂತೆ ದಿನೇಶ್ ಕಾರ್ತಿಕ್!

 ಬಿಹು ನೃತ್ಯ ಪರಾಗ್‌ಗೆ ಹೇಗೆ ಗೊತ್ತು?

ಬಿಹು ನೃತ್ಯ ಪರಾಗ್‌ಗೆ ಹೇಗೆ ಗೊತ್ತು?

ಇದು ಅಸ್ಸಾಂನ ಜಾನಪದ ನೃತ್ಯ ಮತ್ತು ಪರಾಗ್ ಅವರು ಅಸ್ಸಾಂ ಮೂಲದವರಾಗಿದ್ದರಿಂದ ಅವರಿಗೆ ಬಿಹು ನೃತ್ಯ ಶೈಲಿ ಗೊತ್ತಿರುವುದು ಸಹಜ. ಆದರೆ, ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದ ವೇಳೆ ಜೋಫ್ರಾ ಆರ್ಚರ್ ವಿಕೆಟ್ ಪಡೆದ ನಂತರ ಬಿಹು ನೃತ್ಯಕ್ಕೆ ಯತ್ನಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಆಶ್ಚರ್ಯಚಕಿತರಾದರು. ಭಾರತದ ಜಾನಪದ ನೃತ್ಯವನ್ನು ಇಂಗ್ಲೀಷ್ ಕ್ರಿಕೆಟಿಗನೊಬ್ಬ ಮೈದಾನದಲ್ಲಿ ಪ್ರದರ್ಶಿಸಿದ್ದು ಅತ್ಯಂತ ವಿಶೇಷವಾಗಿತ್ತು.

Story first published: Friday, October 16, 2020, 10:13 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X