ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಘೌಸ್ ನಿಧನ

Indian fast bowler Mohammed Sirajs father passes away

ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸದ್ಯ ಆಸ್ಟ್ರೇಲಿಯಾದಲ್ಲಿರುವ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ನಿಧನರಾಗಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಘೌಸ್ ಶುಕ್ರವಾರ (ನವೆಂಬರ್ 20) ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್

ಭಾರತ-ಆಸ್ಟ್ರೇಲಿಯಾ ನಡುವಿನ ಕುತೂಹಲಕಾರಿ ಸರಣಿಗಾಗಿ ಈಗ ಸಿಡ್ನಿಯಲ್ಲಿ ಅಭ್ಯಾಸ ನಡೆಸುತ್ತಿರುವ 26ರ ಹರೆಯದ ಮೊಹಮ್ಮದ್ ಸಿರಾಜ್‌ಗೆ ತಂದೆ ಅಗಲಿರುವ ಸುದ್ದಿ ಕೇಳಿ ಆಘಾತವಾಗಿದೆ. ಶುಕ್ರವಾರ ಅಭ್ಯಾಸ ಮುಗಿಸಿ ವಾಪಸ್ಸಾದಾಗ ಸಿರಾಜ್‌ಗೆ ವಿಚಾರ ತಿಳಿಸಲಾಗಿದೆ.

'ಮಗನೆ, ನನ್ನ ದೇಶ ಹೆಮ್ಮೆ ಪಡುವಂತೆ ನೀನು ಸಾಧನೆ ಮಾಡಬೇಕು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ನಾನದನ್ನು ಖಂಡಿತಾ ನೆರವೇರಿಸುತ್ತೇನೆ. ಆಟದ ಬಗ್ಗೆ ನನಗಿದ್ದ ಆಸಕ್ತಿಗೆ ಬೆಂಬಲಿಸುವುದಕ್ಕಾಗಿ ಅಪ್ಪ ಆಟೋ ಓಡಿಸುತ್ತ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ನನಗೆ ಗೊತ್ತು,' ಎಂದ ಸಿರಾಜ್ ಭಾವುಕರಾದರು.

ತಂಡಕ್ಕೆ ಸ್ಮಿತ್ ಮರಳಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ: ಮ್ಯಾಕ್ಸ್‌ವೆಲ್ತಂಡಕ್ಕೆ ಸ್ಮಿತ್ ಮರಳಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ: ಮ್ಯಾಕ್ಸ್‌ವೆಲ್

ಇತ್ತೀಚೆಗಷ್ಟೇ ಮುಕ್ತಾಯಗೊಂಡ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿರಾಜ್‌ ಅವರು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಉತ್ತಮ ಬೌಲಿಂಗ್ ಕೂಡ ಪ್ರದರ್ಶಿಸಿದ್ದರು. ಹೀಗಾಗಿಯೇ ಸಿರಾಜ್‌ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.

Story first published: Saturday, November 21, 2020, 9:50 [IST]
Other articles published on Nov 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X