ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉಮ್ರಾನ್ ಮಲಿಕ್ ತರ ಬೌಲಿಂಗ್ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದ ಹರ್ಷಲ್ ಪಟೇಲ್

Indian pacer Harshal Patel said I cant bowl as fast as Umran Malik, have to develop skills

ಕಳೆದ ಕೆಲ ವರ್ಷಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗ ಕೂಡ ಬಲುಷ್ಠವಾಗುತ್ತಾ ಬಂದಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಬೌಲಿಂಗ್ ವಿಭಾಗ ಈಗಾಗಲೇ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದೆ. ಪ್ರತಿಭಾವಂತ ವೇಗಿಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನಿಡುತ್ತಿದ್ದಾರೆ. ಇದೀಗ ವೈಟ್‌ಬಾಲ್ ಕ್ರಿಕೆಟ್‌ನಲ್ಲಿಯೂ ಕೆಲ ವೇಗಿಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಈ ಮೂಲಕ ಭಾರತ ವೇಗದ ಬೌಲಿಂಗ್ ವಿಭಾಗ ಭವಿಷ್ಯದಲ್ಲಿ ವೈಟ್‌ಬಾಲ್ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ತೋರುವ ವಿಶ್ವಾಸ ಮೂಡುತ್ತಿದೆ.

ಟಿ20 ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿ ವೇಗದ ಬೌಲಿಂಗ್ ದಾಳಿ ನಡೆಸುತ್ತಿರುವ ಆಟಗಾರರ ಪೈಕಿ ಹರ್ಷಲ್ ಪಟೇಲ್ ಕೂಡ ಒಬ್ಬರು. ಹರ್ಯಾಣ ಮೂಲದ ಈ ವೇಗದ ಬೌಲರ್ ವೇಗದ ಬೌಲಿಂಗ್‌ನಲ್ಲಿನ ನಿಯಂತ್ರಣಕ್ಕೆ ಹೆಸರಾಗದ್ದಾರೆ. ಫಿಲ್ಡಿಂಗ್‌ಅನ್ನು ಅದ್ಭುತವಾಗಿ ಬಳಸಿಕೊಂಡ ಹರ್ಷಲ್ ಪಟೇಲ್ ಎದುರಾಳಿ ಬ್ಯಾಟರ್‌ಗಳಿಗೆ ಕಂಟಕವಾಗುತ್ತಿದ್ದಾರೆ. ಹೆಚ್ಚಿನ ವೇಗವಿಲ್ಲದಿದ್ದರೂ ವೇಗದ ಏರಿಳಿತಗಳು ಎದುರಾಳಿ ದಾಂಡಿಗರಿಗೆ ಆಘಾತ ನೀಡುತ್ತಿದೆ. ತನ್ನ ಬೌಲಿಂಗ್‌ನ ವೇಗದ ಬಗ್ಗೆ ಹರ್ಷಲ್ ಪಟೇಲ್ ಕೂಡ ಮಾತನಾಡಿದ್ದಾರೆ.

ಲಂಕಾ ಬೌಲರ್‌ಗಳ ಅಬ್ಬರಕ್ಕೆ ಮಣಿದ ಆಸ್ಟ್ರೇಲಿಯಾ: ಲೋ ಸ್ಕೋರಿಂಗ್ ಪಂದ್ಯದಲ್ಲಿ ಶ್ರೀಲಂಕಾಗೆ ರೋಚಕ ಗೆಲುವುಲಂಕಾ ಬೌಲರ್‌ಗಳ ಅಬ್ಬರಕ್ಕೆ ಮಣಿದ ಆಸ್ಟ್ರೇಲಿಯಾ: ಲೋ ಸ್ಕೋರಿಂಗ್ ಪಂದ್ಯದಲ್ಲಿ ಶ್ರೀಲಂಕಾಗೆ ರೋಚಕ ಗೆಲುವು

ಈ ಸಂದರ್ಭದಲ್ಲಿ ಹರ್ಷಲ್ ಪಟೇಲ್ ಯುವ ವೇಗಿ ಉಮ್ರಾನ್ ಮಲಿಕ್ ರೀತಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುವುದು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಇತರ ಕೌಶಲ್ಯಗಳನ್ನು ನಾನು ಖಂಡಿತವಾಗಿಯೂ ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇನೆ ಎಂಬ ಉಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕಳೆದ ಎರಡು ವರ್ಷಗಳ ಐಪಿಎಲ್‌ನಲ್ಲಿ ನಾನು ಯಾವ ರೀತಿಯ ಪ್ರದರ್ಶನ ನಿಡುತ್ತಿದ್ದೇನೆ ಅದರಿಂದಾಗಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಹೆಚ್ಚು ಕಾಲ ಕ್ರಿಕೆಟ್ ಆಡಿದಂತೆ ಎದುರಾಳಿ ತಂಡ ಬೌಲರ್‌ನ ಸಾಮರ್ಥ್ಯ ಬಲಾಬಲಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಕೌಶಲ್ಯಗಳನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಿರಬೇಕು" ಎಂದಿದ್ದಾರೆ ಹರ್ಷಲ್ ಪಟೇಲ್.

ಜನಾಂಗೀಯ ನಿಂದನೆ: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿ 4 ಆಟಗಾರರ ಮೇಲೆ ಆರೋಪಜನಾಂಗೀಯ ನಿಂದನೆ: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿ 4 ಆಟಗಾರರ ಮೇಲೆ ಆರೋಪ

ಹರ್ಷಲ್ ಪಟೇಲ್ 2021ರ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಹರ್ಷಲ್ ಆ ಆವೃತ್ತಿಯಲ್ಲಿ 32 ವಿಕೆಟ್ ಸಂಪಾದಿಸಿದ್ದರು. ಮತ್ತೊಂದೆಡೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿರುವ ಉಮ್ರಾನ್ ಮಲಿಕ್ ಕೂಡ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಉಮ್ರಾನ್ ಮಲಿಕ್ ಈ ಬಾರಿಯ ಆವೃತ್ತಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಕೂಡ ಕೌಶಲ್ಯದ ದೃಷ್ಟಿಯಿಂದ ಅತ್ಯಂತ ಭಿನ್ನವಾದ ಬೌಲರ್‌ಗಳಾಗಿದ್ದಾರೆ. ಆದರೆ ಈ ಇಬ್ಬರು ಬೌಲರ್‌ಗಳು ಕೂಡ ಎದುರಾಳಿಗಳಿಗೆ ಆಘಾತ ನೀಡುವ ಬೌಲರ್‌ಗಳು ಎಂಬುದರಲ್ಲಿ ಅನುಮಾನವಿಲ್ಲ.

ಇನ್ನು ಉಮ್ರಾನ್ ಮಲಿಕ್ ತಮ್ಮ ವೇಗದಿಂದಾಗಿ ಹೆಚ್ಚು ಸುದ್ದಿ ಮಾಡಿದ್ದಾರೆ. ದಜ್ಷಿಣ ಆಪ್ರಿಕಾ ವಿರುದ್ಧದ ಸರಣಿಗೆ ಉಮ್ರಾನ್ ಮಲಿಕ್ ಆಯ್ಕೆಯಾಗಿದ್ದು ಮೊದಲ ಮೂರು ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಅಂತಿಮ ಎರಡು ಪಂದ್ಯಗಳಲ್ಲಿ ಉಮ್ರಾನ್ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Story first published: Friday, June 17, 2022, 12:13 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X