ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ಎಡವಿದ್ದು ಅಲ್ಲಿಯೇ: ದ. ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಮೊಹಮ್ಮದ್ ಶಮಿ

Indian pacer Mohammed Shami explain the reason for India defeat against South Africa

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ತಂಡದ ಸೋಲಿಗೆ ಕಾರಣವೇನು ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ತಮಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ತಂಡದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅದ್ಭುತವಾಗಿ ಆರಂಭಿಸಿತ್ತು. ಆದರೆ ಈ ಆರಂಭವನ್ನು ಮುಂದುವರಿಸಲು ಭಾರತೀಯ ತಂಡಕ್ಕೆ ಸಾಧ್ಯವಾಗಲಿಲ್ಲ. ನಂತರ ಭಾರತ ಅನುಭವಿಸಿದ್ದು ಸಾಲು ಸಾಲು ಸೋಲು. ಟೆಸ್ಟ್ ಸರಣಿಯಲ್ಲಿ 1-2 ಅಂತರದ ಸೋಲು ಅನುಭವಿಸಿದ ಭಾರತ ಬಳಿಕ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗವನ್ನು ಅನುಭವಿಸಿತು.

ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!
ಈ ಸೋಲಿನ ಬಳಿಕ ಮಾತನಾಡಿದ ವೇಗಿ ಮೊಹಮ್ಮದ್ ಶಮಿ, ":ನಾವೀಗ ಸತತವಾಗಿ ಕ್ರಿಕೆಟ್‌ ಪಂದ್ಯಗಳನ್ನು ಆಡುತ್ತಿದ್ದೇವೆ. ಅದರಲ್ಲೂ ಬಯೋಬಬಲ್ ಲೈಫ್‌ನಲ್ಲಿ ಇಂತಾ ಸನ್ನಿವೇಶಗಳು ಉಂಟಾಗುತ್ತವೆ. ಈ ಸಂದರ್ಭದಲ್ಲಿ ನಾನು ಒಂದೇ ಮಾತನ್ನು ಹೇಳುವುದೆಂದರೆ ಏರಿಳಿತಗಳು ಸಂಭವಿಸುತ್ತದೆ. ಹಾಗಾಗಿ ನಾವು ತುಂಬಾ ಸಂಭ್ರಮಿಸುವುದು ಅಥವಾ ಬಹಳ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ" ಎಂದು ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಮಿ ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಶಮಿ ಭಾರತದ ಬೌಲಿಂಗ್ ವಿಭಾಗ ಈ ಸರಣಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ. "ನಮ್ಮ ಬೌಲಿಂಗ್ ವಿಭಾಗ ಅತ್ಯುತ್ತಮವಾದ ಪ್ರದರ್ಶನ ನಿಡಿತ್ತು ಎಂಬುದನ್ನು ನೀವು ಮರೆಯಬಾರದು. ಬಹುತೇಕ ಸಂದರ್ಭದಲ್ಲಿ ಭಾರತದ ಬೌಲಿಂಗ್ ಸ್ಥಿರವಾದ ಪ್ರದರ್ಶನ ನೀಡಿತ್ತು. ಇದರೀಮದಾಗಿಯೇ ನಾವು ಪಂದ್ಯದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ" ಎಂದಿದ್ದಾರೆ ಶಮಿ.

ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?

ಇನ್ನು ಮುಂದುವರಿದು ಮಾತನಾಡಿದ ಶಮಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಎಡವಿತು ಎಂಬುದನ್ನು ಒಪ್ಪಿಕೊಂಡಿದ್ದಾರೆ. "ಹೌದು, ನಮ್ಮ ಬ್ಯಾಟಿಂಗ್ ವಿಭಾಗ ಸ್ವಲ್ಪ ಮಟ್ಟಿಗೆ ಎಡವಿತು. ಇದು ಎಲ್ಲಾ ತಂಡಗಳಲ್ಲಿಯೂ ಸಂಭವಿಸುತ್ತದೆ. ಆದರೆ ನನಗೆ ಖಂಡಿತಾ ಭರವಸೆಯಿದೆ ಈ ಎಲ್ಲಾ ಸಮಸ್ಯೆಗಳು ಕುಡ ಪರಿಹಾರವಾಗುತ್ತದೆ" ಎಂದು ಶಮಿ ತಂಡದ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಶಮಿಗೆ ಟೆಸ್ಟ್ ತಂಡದ ನಾಯಕನಾಗುವ ಆಸೆ | Oneindia Kannada

ಇನ್ನು ಈ ಸಂದರ್ಭದಲ್ಲಿ ಶಮಿ ಮೈದಾನದ ಪರಿಸ್ಥಿತಿಗಳು ಏನಾದರೂ ಆಗಿರಲಿ, ಅದೆಲ್ಲವೂ ಆಟದ ಭಾಗವಾಗಿದೆ. ಅಂತಿಮವಾಗಿ ಫಲಿತಾಂಶ ಮಾತ್ರವೇ ಪ್ರಮುಖವಾಗುತ್ತದೆ. ಹಾಗಾಗಿ ನನಗೆ ಮೈದಾನದ ಪರಿಸ್ಥಿತಿಯ ಬಗ್ಗೆ ದೂಷಣೆ ಮಾಡುವುದು ಸರಿ ಎನಿಸುತ್ತಿಲ್ಲ. ನೀವು ಪ್ರಕೃತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈಗ ನಾವು ಮಾಡಿದ ತಪ್ಪುಗಳತ್ತ ಬಿಟ್ಟು ಮಾಡಬೇಕಿದೆ" ಎಂದು ಮೊಹಮ್ಮದ್ ಶಮಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Thursday, January 27, 2022, 21:22 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X