ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐತಿಹಾಸಿಕ ಗೆಲುವಿನೊಂದಿಗೆ ಭಾರತ ಮತ್ತೊಂದು ದಾಖಲೆ

Pink Ball Test : India register 12th on the trot series win at home, winning the pink ball test.
Indian pacers bag historic first after dominant win against Bangladesh

ಕೋಲ್ಕತ್ತಾದ ಈಡನ್‌ ಗಾರ್ಡನ್ ನಲ್ಲಿ ನಡೆದ ಮೊದಲ ಅಹರ್ನಿಶಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಇನ್ನಿಂಗ್ಸ್‌ ಮತ್ತು 46ರನ್‌ಗಳಿಂದ ಭಾರತ ಸೋಲಿಸಿದೆ. ಈ ಮೂಲಕ ಭಾರತ ತನ್ನ ಜೈತಯಾತ್ರೆಯನ್ನು ಮುಂದುವರೆಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ 5ವಿಕೆಟ್ ಕೀಳುವ ಮೂಲಕ ಬಾಂಗ್ಲಾ 195ರನ್‌ಗಳಿಗೆ ಆಲ್‌ಔಟ್ ಆಗ ಶರಣಾಯಿತು. ಈ ಮೂಲಕ ಭಾರತ ಹೊಸ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಇನ್ನಿಂಗ್ಸ್‌ ಅಂತರದಲ್ಲಿ ಗೆಲುವು ಸಾಧಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಪಿಂಕ್ ಬಾಲ್ ಟೆಸ್ಟ್ ಗೆದ್ದ ನಾಯಕನಾಗಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿಪಿಂಕ್ ಬಾಲ್ ಟೆಸ್ಟ್ ಗೆದ್ದ ನಾಯಕನಾಗಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳನ್ನು ಇನ್ನಿಂಗ್ಸ್ ಅಂತರದಿಂದ ಭಾರತ ಗೆದ್ದುಕೊಂಡಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡೂ ಪಂದ್ಯಗಳನ್ನು ಇನ್ನಿಂಗ್ಸ್‌ ಅಂತರದಲ್ಲಿಯೇ ಗೆದ್ದುಕೊಂಡಿದೆ. ಇದು ಯಾವುದೇ ತಂಡ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗ ಮಾಡದ ದಾಖಲೆಯಾಗಿದೆ.

-ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ಇನ್ನಿಂಗ್ಸ್‌ ಮತ್ತು 137 ರನ್‌ಗಳ ಗೆಲುವು

- ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ಇನ್ನಿಂಗ್ಸ್ ಮತ್ತು 202 ರನ್‌ಗಳಿಂದ ಗೆಲುವು

- ಬಾಂಗ್ಲಾದೇಶದ ವಿರುದ್ಧ ಇಂದೋರ್‌ನಲ್ಲಿ ಇನ್ನಿಂಗ್ಸ್ ಮತ್ತು 130 ರನ್‌ಗಳಿಂದ ಗೆಲುವು

- ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ಇನ್ನಿಂಗ್ಸ್ ಮತ್ತು 46 ರನ್‌ಗಳಿಂದ ಗೆಲುವು

ಭಾರತದ ಈ ಎಲ್ಲಾ ಗೆಲುವುಗಳಲ್ಲಿ ಭಾರತೀಯ ವೇಗಿಗಳು ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದು ಮತ್ತೊಂದು ವಿಶೇಷತೆ. ಅದರಲ್ಲೂ ಕೊಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ 20 ವಿಕೆಟ್‌ಗಳಲ್ಲಿ 19 ವಿಕೆಟ್‌ಗಳು ವೇಗಿಗಳ ಪಾಲಾದ್ರೆ ಉಳಿದ ಓರ್ವ ಬ್ಯಾಟ್ಸ್‌ಮನ್‌ ಗಾಯಗೊಂಡು ಪಂದ್ಯದಿಂದ ಹೊರಗುಳಿದ್ದರು. ಎಲ್ಲಾ ವಿಕೆಟ್‌ಗಳನ್ನು ವೇಗಿಗಳೇ ಪಡೆದುಕೊಂಡಿದ್ದು ಒಂದೂ ವಿಕೆಟ್ ಸ್ಪಿನ್ನರ್‌ಗಳ ಪಾಲಾಗದೇ ಇರುವುದು ಭಾರತೀಯ ನೆಲದಲ್ಲಿ ಕೇವಲ ಎರಡನೇ ನಿದರ್ಶನ ಇದಾಗಿದೆ. ಭಾರತೀಯ ಇದು ವೇಗಿಗಳು ಪಂದ್ಯವೊಂದರಲ್ಲಿ ಪಡೆದ ಎರಡನೇ ಅತಿ ಹೆಚ್ಚಿನ ವಿಕೆಟ್‌ಗಳು

ಟೆಸ್ಟ್‌ನಲ್ಲಿ ಭಾರತೀಯ ವೇಗಿಗಳ ಹೆಚ್ಚಿನ ವಿಕೆಟ್‌ಗಳು ಪಡೆದ ಪಂದ್ಯ:

2017/18 ರಲ್ಲಿ ಜೋಹನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 20 ವಿಕೆಟ್

2018ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ 19 ವಿಕೆಟ್

2019/20 ರಲ್ಲಿ ಕೊಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 19 ವಿಕೆಟ್

ಐತಿಹಾಸಿಕ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲುಐತಿಹಾಸಿಕ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು

ಭಾರತದ ವೇಗಿಗಳ ಈ ಸಾಹಸಕ್ಕೆ ತಂಡದ ಕೋಚ್ ರವಿ ಶಾಸ್ತ್ರಿ ಕೂಡ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ತಂಡದ ಬೌಲರ್‌ಗಳು ಒಗ್ಗಟ್ಟಾಗಿ ಶ್ರಮವಹಿಸಿದ್ದಾರೆ. ಎಲ್ಲರೂ ವೃತ್ತಿಪರತೆಯಿಂದ ಆಡಿದ್ದಾರೆ. ಕಳೆದ 15ತಿಂಗಳಿನಿಂದ ವಿದೇಶೀ ಪಿಚ್‌ಗಳಲ್ಲೂ ಸಾಕಷ್ಟು ಪಂದ್ಯಗಳನ್ನು ಆಡಿ ಕಲಿತುಕೊಂಡಿದ್ದಾರೆ. ಶಿಸ್ತುಬದ್ಧದಾಳಿಯನ್ನು ಮಾಡಿ ಗೆಲುವನ್ನು ಪಡೆಯುವುದನ್ನೂ ಕಲಿತುಕೊಂಡಿದ್ದಾರೆ ಎಂದು ಕೋಚ್‌ ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ.

Story first published: Sunday, November 24, 2019, 18:28 [IST]
Other articles published on Nov 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X