ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ವಿರುದ್ಧ ಪಂದ್ಯ ಸೋತ ನೋವಿನ ಮೇಲೆ ಭಾರತಕ್ಕೆ ದಂಡದ ಬರೆ

Indian players fined 20% of the match fee after maintaining a slow over-rate in the first ODI against Australia

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯವನ್ನು 66 ರನ್‌ಗಳಿಂದ ಸೋತು ಮುಖಭಂಗ ಅನುಭವಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಪಡೆಗೆ ದಂಡದ ಬರೆಯೂ ಬಿದ್ದಿದೆ. ಸ್ಲೋ ಓವರ್‌ ರೇಟ್‌ಗಾಗಿ ದಂಡ ಹಾಕಲಾಗಿದೆ.

ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಮುಂದಿಟ್ಟು ಕೆಎಲ್ ರಾಹುಲ್ ಟ್ರೋಲ್ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಮುಂದಿಟ್ಟು ಕೆಎಲ್ ರಾಹುಲ್ ಟ್ರೋಲ್

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ (ನವೆಂಬರ್ 27) ನಡೆದಿದ್ದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್‌ ವೇಳೆ ಸ್ಲೋ ಓವರ್‌ ರೇಟ್‌ಗಾಗಿ ಭಾರತದ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟು ದಂಡ ಹಾಕಲಾಗಿದೆ. ಬೇರೆ ಬೇರೆ ಕ್ರಿಕೆಟ್ ಮಾದರಿಗಳಲ್ಲಿ ಫೀಲ್ಡಿಂಗ್ ತಂಡ ಇಂತಿಷ್ಟು ಅವಧಿಗೆ ಇಷ್ಟು ಓವರ್‌ ಮುಗಿಸಬೇಕು ಎಂದಿರುತ್ತದೆ. ಆ ಅವಧಿ ಮೀರಿದರೆ ಅದು ಸ್ಲೋ ಓವರ್‌ ರೇಟ್ ಆಗುತ್ತದೆ.

ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಫೀಲ್ಡಿಂಗ್ ತಂಡ ಗಂಟೆಗೆ ಕನಿಷ್ಠ 15 ಓವರ್ ಮುಗಿಸಿರಬೇಕು. ಏಕದಿನ ಕ್ರಿಕೆಟ್‌ನಲ್ಲಾದರೆ 3.5 ಗಂಟೆಗಳಲ್ಲಿ 50 ಓವರ್‌ ಮುಗಿಸಿರಬೇಕು. ಗಂಟೆಗೆ ಕನಿಷ್ಠ 14.28 ಓವರ್‌ ಮುಗಿಸಬೇಕಿರುತ್ತದೆ. ಇನ್ನು ಟಿ20ನಲ್ಲೂ ಗಂಟೆಗೆ 14.28 ಓವರ್‌ನಂತೆ ಡ್ರಿಂಕ್ಸ್ ಬ್ರೇಕ್ ಸೇರಿ ಒಟ್ಟು 75 ನಿಮಿಷಗಳಲ್ಲಿ ಓವರ್‌ ಮುಗಿಸಲು ನಿಯಮವಿರುತ್ತದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ಸೋಲಿಗೆ ಕಾರಣ ಹೇಳಿದ ಭಜ್ಜಿಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ಸೋಲಿಗೆ ಕಾರಣ ಹೇಳಿದ ಭಜ್ಜಿ

ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 69, ಆ್ಯರನ್ ಫಿಂಚ್ 114, ಸ್ಟೀವ್ ಸ್ಮಿತ್ 105, ಗ್ಲೆನ್ ಮ್ಯಾಕ್ಸ್‌ವೆಲ್ 45 ರನ್ ಕೊಡುಗೆ ಗಣನೀಯವೆನಿಸಿತ್ತು. ಪರಿಣಾಮವಾಗಿ ಕಾಂಗರೂ ಪಡೆ ಪ್ರವಾಸಿ ಭಾರತದ ವಿರುದ್ಧ 66 ರನ್‌ಗಳ ಜಯ ಕಂಡಿತ್ತು. ದ್ವಿತೀಯ ಪಂದ್ಯ ನವೆಂಬರ್ 29ಕ್ಕೆ ನಡೆಯಲಿದೆ.

Story first published: Saturday, November 28, 2020, 15:12 [IST]
Other articles published on Nov 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X