ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರು

Indian Players Who Stand To Lose The Most If Ipl Is Cancelled

ಕ್ರೀಡಾಲೋಕಕ್ಕೆ ಕೊರೊನಾ ಅತಿದೊಡ್ಡ ಏಟು ನೀಡಿದೆ ಎಂದರೂ ತಪ್ಪಿಲ್ಲ. ಕೊರೊನಾ ವೈರಸ್‌ ಭೀತಿಗೆ ವಿಶ್ವದ ಎಲ್ಲಾ ಟೂರ್ನಿಗಳು ಮುಂದೂಡಿಕೆಯಾಗಿದೆ. ಬಿಸಿಸಿಐನ ಮಹತ್ವಾಕಾಂಕ್ಷಿಯ ಐಪಿಎಲ್ ಕೂಡ ಮುಂದೂಡಿಕೆಯಾಗಿದೆ. ಇದು ಕೆಲ ಆಟಗಾರರ ಪಾಲಿಗೆ ಆತಂಕಕ್ಕೂ ಕಾರಣವಾಗಿದೆ.

ಕೆ.ಎಲ್ ರಾಹುಲ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಕುತೂಹಲಕರ ಸಂಗತಿಗಳುಕೆ.ಎಲ್ ರಾಹುಲ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಕುತೂಹಲಕರ ಸಂಗತಿಗಳು

ಸದ್ಯ ಐಪಿಎಲ್ ಅನ್ನು ಮುಂದೂಡುವ ತೀರ್ಮಾನವನ್ನಷ್ಟೇ ಮಾಡಲಾಗಿದೆ. ಆದರೆ ಸದ್ಯ ಕೊರೊನಾ ವೈರಸ್ ಭಾರತದಲ್ಲೂ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ಅನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದರೂ ಅಚ್ಚರಿಯಿಲ್ಲ.

ವಿಶ್ವದ ಜನರಿಗೆ ಸ್ಫೂರ್ತಿದಾಯಕ ಸಂದೇಶ ಸಾರಿದ ಶೋಯೆಬ್ ಅಖ್ತರ್ವಿಶ್ವದ ಜನರಿಗೆ ಸ್ಫೂರ್ತಿದಾಯಕ ಸಂದೇಶ ಸಾರಿದ ಶೋಯೆಬ್ ಅಖ್ತರ್

ಹೀಗಾಗಿ ಉತ್ತಮ ಪ್ರದರ್ಶನವನ್ನು ನೀಡಿ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯಲು ಹಾತೊರೆಯುತ್ತಿರುವ ಕೆಲ ಆಟಗಾರರ ಪಾಲಿಗೆ ಇದು ಬಹುದೊಡ್ಡ ಹಿನ್ನೆಡೆಯಾಗುವುದರಲ್ಲಿ ಅನುಮಾನವಿಲ್ಲ. ಅಂತಾ ಆಟಗಾರರು ಯಾರು ಎಂಬುದನ್ನು ಮುಂದೆ ಓದಿ.

ಟೀಮ್ ಇಂಡಿಯಾ ಮಾಜಿ ನಾಯಕ

ಟೀಮ್ ಇಂಡಿಯಾ ಮಾಜಿ ನಾಯಕ

ಈ ಬಾರಿಯ ಐಪಿಎಲ್‌ನಲ್ಲಿ ಬಹಳಷ್ಟು ನಿರೀಕ್ಷೆಯಿದ್ದ ಆಟಗಾರನೆಂದರೆ ಅದು ಮಹೇಂದ್ರ ಸಿಂಗ್ ಧೋನಿ. ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಸೆಮಿಫೈನಲ್‌ನಿಂದ ಹೊರಬಿದ್ದ ಬಳಿಕ ಧೋನಿ ಟೀಮ್ ಇಂಡಿಯಾದಿಂದ ಸಂಪೂರ್ಣವಾಗಿ ದೂರವುಳಿದುಬಿಟ್ಟಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ಅಂಗಳಕ್ಕಿಳಿಯಲು ಸಜ್ಜಾಗುದ್ದರೂ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಟೂರ್ನಿ ತೂಗುಯ್ಯಾಲೆಯಲ್ಲಿದೆ.

ಧೋನಿ ಫಾರ್ಮ್ ಫಿಟ್‌ನೆಸ್ ಸಾಬೀತಾಗಬೇಕು

ಧೋನಿ ಫಾರ್ಮ್ ಫಿಟ್‌ನೆಸ್ ಸಾಬೀತಾಗಬೇಕು

ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿಗೆ ಈ ಐಪಿಎಲ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಲು ಒಂದು ಉತ್ತಮ ವೇದಿಕೆಯಾಗಿತ್ತು. ಏಳೆಂಟು ತಿಂಗಳು ಕ್ರಿಕೆಟ್‌ನಿಂದಲೇ ದೂರವಾಗಿರುವ ಧೋನಿ ಫಿಟ್‌ನೆಸ್ ಹೇಗಿದೆ, ಅವರ ಫಾರ್ಮ್ ಯಾವ ರೀತಿಯಿದೆ ಎಂದು ಈ ಐಪಿಎಲ್‌ನಿಂದ ತಿಳಿಯುತ್ತಿತ್ತು. ಆಯ್ಕೆಗಾರರಿಗೂ ಈ ಪ್ರದರ್ಶನ ಸಹಕಾರಿಯಾಗುತ್ತಿತ್ತು. ಆದರೆ ರದ್ದಾದರೆ ಧೋನಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಕಾರಣಗಳೇ ಇಲ್ಲದಂತಾಗುತ್ತದೆ.

ಮಿಸ್ಟರ್ ಐಪಿಎಲ್

ಮಿಸ್ಟರ್ ಐಪಿಎಲ್

ಸುರೇಶ್ ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದು ಕರೆಯಲಾಗುತ್ತದೆ. ಐಪಿಎಲ್‌ನ ಹಲವು ದಾಖಲೆಗಳು ಸುರೇಶ್ ರೈನಾ ಹೆಸರಿನಲ್ಲಿವೆ. ಆದರೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಂಡಿರುವ ಸುರೇಶ್ ರೈನಾ ಐಪಿಎಲ್‌ಗೂ ಮುನ್ನ ಹೇಳಿಕೆಯೊಂದನ್ನು ನೀಡಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಸಾಧನೆಯನ್ನು ಮಾಡಿ ಮುಂದಿನ ವಿಶ್ವಕಪ್‌ಗೆ ಸ್ಥಾನವನ್ನು ಸಂಪಾದಿಸುವುದು ತನ್ನ ಗುರಿ ಎಂದಿದ್ದರು. ಆದರೆ ಐಪಿಎಲ್ ರದ್ದಾದರೆ ಇದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ. ರೈನಾ ಮತ್ತೆ ಟೀಮ್ ಇಂಡಿಯಾಗೆ ಮರಳುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

ಟೀಮ್ ಇಂಡಿಯಾ ಸ್ಕಾಡ್‌ನಲ್ಲಿ ಸ್ಥಾನವನ್ನು ನಿರಂತರವಾಗಿ ಪಡೆದುಕೊಂಡು ಬರುತ್ತಿದ್ದರೂ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗಿ ನಿರಾಸೆಗೊಳಗಾದ ಆಟಗಾರ. ಆದರೆ ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ದೊರೆತರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಸ್ಯಾಮ್ಸನ್‌ಗೆ ಸಾಧ್ಯವಾಗಲಿಲ್ಲ. ಸದ್ಯ ಐಪಿಎಲ್ ಸಂಜುಗೆ ಒಂದು ಉತ್ತಮ ವೇದಿಕೆಯಾಗಿತ್ತು. ಆದರೆ ಐಪಿಎಲ್ ರದ್ದಾದರೆ ಸಂಜು ಪಾಲಿಗೆ ಮುಂದಿನ ದಿನಗಳು ಬಹಳ ಕಠಿಣವಾಗಿರುವುದರಲ್ಲಿ ಅನುಮಾನವಿಲ್ಲ.

ಕೃಣಾಲ್ ಪಾಂಡ್ಯಾ

ಕೃಣಾಲ್ ಪಾಂಡ್ಯಾ

ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ ಕೃಣಾಲ್ ಪಾಂಡ್ಯಾಗೂ ಮುಂದಿನ ವಿಶ್ವಕಪ್ ತಂಡದಲ್ಲಿ ಪಾಲ್ಗೊಳ್ಳಲು ಅತ್ಯುತ್ತಮ ಅವಕಾಶವೊಂದು ಸಿಕ್ಕಂತಾಗುತ್ತಿತ್ತು. ಟೀಮ್ ಇಂಡಿಯಾದಲ್ಲಿ ಬಹಳ ಸಮಯಗಳಿಂದ ಕೃಣಾಲ್ ಅವಕಾಶವನ್ನು ಪಡೆಯಲು ವಿಫಲರಾಗಿದ್ದಾರೆ. ಐಪಿಎಲ್ ರದ್ದಾದರೆ ಕೃಣಾಲ್ ಮುಂದಿನ ವಿಶ್ವಕಪ್‌ನಲ್ಲಿ ಸ್ಥಾನವನ್ನು ಪಡೆಯುವ ಸಾಧ್ಯತೆ ಕಂಡಿತಾ ಇಲ್ಲ.

Story first published: Tuesday, March 24, 2020, 12:00 [IST]
Other articles published on Mar 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X