ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಸೇರಿ ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಸ್ಟಾರ್ ಕ್ರಿಕೆಟಿಗ: ವಿದೇಶಿ ಲೀಗ್ ಜೊತೆ ಒಪ್ಪಂದ?

Indian star all-rounder Suresh Raina set announces Retires From IPL and will play foreign leagues

ಅತ್ತ ಭಾರತದ ಕ್ರಿಕೆಟ್ ಪ್ರೇಮಿಗಳು ಏಷ್ಯಾ ಕಪ್, ವಿಶ್ವಕಪ್ ಎನ್ನುತ್ತಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟವನ್ನು ಅನುಭವಿಸುತ್ತಾ ಬ್ಯುಸಿಯಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲ ಆಸ್ಟ್ರೇಲಿಯಾದ ಲೀಗ್ ಕ್ರಿಕೆಟ್ ಬಿಗ್‌ಬ್ಯಾಷ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲಕಾರಿ ವರದಿಗಳು ಬರುತ್ತಿದೆ.

ಈ ರೀತಿಯ ಸುದ್ದಿ ಹರಿದಾಡುತ್ತಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ. ಭಾರತದ ಮಾಜಿ ಕ್ರಿಕೆಟಿಗ ಆಲ್‌ರೌಂಡರ್ ಸುರೇಶ್ ರೈನಾ ವಿಚಾರವಾಗಿ. ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಘೋಷಿಸಿದ್ದರೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿರಲಿಲ್ಲ. ಆದರೆ ಇದೀಗ ಈ ವಿಚಾರವಾಗಿ ಸುರೇಶ್ ರೈನಾ ಅಧಿಕೃತವಾಗಿ ಘೋಷಣೆ ಮಾಡಿದ್ದು ವಿದೇಶಿ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೆಲೆಕ್ಷನ್‌ನಲ್ಲೇ ದೊಡ್ಡ ಎಡವಟ್ಟು: ಮೊಹಮ್ಮದ್ ಕೈಫ್ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೆಲೆಕ್ಷನ್‌ನಲ್ಲೇ ದೊಡ್ಡ ಎಡವಟ್ಟು: ಮೊಹಮ್ಮದ್ ಕೈಫ್

ರೈನಾ ನಿವೃತ್ತಿ ಬಗ್ಗೆ ವರದಿ

ರೈನಾ ನಿವೃತ್ತಿ ಬಗ್ಗೆ ವರದಿ

ಸ್ಟಾರ್ ಆಲ್‌ರೌಂಡರ್ ಸುರೇಶ್ ರೈನಾ ಐಪಿಎಲ್‌ನಲ್ಲಿ ಇನ್ನು ಉಂದೆ ಕಾಣಿಸಕೊಳ್ಳಲಾರರು ಎಂದು 'ದೈನಿಕ್ ಜಾಗರಣ್' ವರದಿ ಮಾಡಿದ್ದು ಶೀಘ್ರದಲ್ಲಿಯೇ ನಿವೃತ್ತಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆರಂಭಿಕ ಆವೃತ್ತಿಯಿಂದಲೂ ಪ್ರಮುಖ ಭಾಗವಾಗಿದ್ದ ಸುರೇಶ್ ರೈನಾ ಕಳೆದ ಆವೃತ್ತಿಗೆ ನಡೆದ ಹರಾಜು ಪ್ರಕ್ರಿಯೆಗೂ ಮುನ್ನ ರೈನಾ ಅವರನ್ನು ತಂಡದಿಂದ ಬಿಡುಗಡೆ ಮಾಡುವವರೆಗೂ ಪ್ರಮುಖ ಭಾಗವಾಗಿದ್ದರು. ಕಳೆದ ಹರಾಜಿನಲ್ಲಿ ರೈನಾ ಹರಾಜಾಗದೆ ಉಳಿದುಕೊಂಡ ಕಾರಣ ಐಪಿಎಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.

ಐಪಿಎಲ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ರೈನಾ

ಐಪಿಎಲ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ರೈನಾ

ಸುರೇಶ್ ರೈನಾ ಐಪಿಎಲ್‌ನಲ್ಲಿ ಸಾಖಷ್ಟು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಅವರಿಗೆ ಮಿಸ್ಟರ್ ಐಪಿಎಲ್ ಎಂದು ಕೂಡ ಕರೆಯಲಾಗುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ರೈನಾ ಪಾತ್ರಕೂಡ ಮಹತ್ವವಾಗಿತ್ತು ಎಂಬುದು ಗಮನಾರ್ಹ. ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸುರೇಶ್ ರೈನಾ ಕೂಡ ಇದ್ದಾರೆ. 205 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಸುರೇಶ್ ರೈನಾ 32.5 ಸರಾಸರಿಯಲ್ಲಿ 5528 ರನ್‌ಗಳನ್ನು ಗಳಿಸಿದ್ದಾರೆ. 136.7ರಷ್ಟು ಆರೋಗ್ಯಕರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ರೈನಾ.

ಕುತೂಹಲ ಕೆರಳಿಸಿದ ಬಿಬಿಎಲ್ ಫ್ರಾಂಚೈಸಿಯ ಟ್ವೀಟ್

ಕುತೂಹಲ ಕೆರಳಿಸಿದ ಬಿಬಿಎಲ್ ಫ್ರಾಂಚೈಸಿಯ ಟ್ವೀಟ್

ಇನ್ನು ಇದೇ ಸಂದರ್ಭದಲ್ಲಿ ಬಿಗ್‌ಬ್ಯಾಷ್ ಲೀಗ್‌ನ ಪ್ರಮುಖ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಮೆಲ್ಬೋರ್ನ್ ಸ್ಟಾರ್ಟ್ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲಕಾರಿಯಾಗಿದ್ದು ಸುರೇಶ್ ರೈನಾ ಅವರ ನಿವೃತ್ತಿ ಸುದ್ದಿಗೆ ತಳುಕು ಹಾಕುವಂತಿದೆ. ಸೆಪ್ಟೆಂಬರ್ 5ರಂದು ಮೆಲ್ಬೋರ್ನ್ ಸ್ಟಾರ್ಟ್ ಎಮೊಜಿಗಳನ್ನು ಒಳಗೊಂಡು "ನಾಳೆ" ಎಂದಿ ಬರೆದುಕೊಂಡಿದ್ದು ನಿಗೂಢಾರ್ಥದ ಟ್ವೀಟ್ ಮಾಡಿದೆ. ಇದು ಭಾರತೀಯ ಆಟಗಾರನೊಂದಿಗೆ ಸೆಪ್ಟೆಂಬರ್ 6ರಂದು ಒಪ್ಪಂದ ಮಾಡಿಕೊಳ್ಳುತ್ತಿರುವ ಅರ್ಥ ನೀಡುತ್ತಿದೆ. ಆದರೆ ಆ ಆಟಗಾರ ಯಾರು ಎಂಬ ಬಗ್ಗೆ ಯಾವ ಸುಳಿವೂ ಇಲ್ಲ. ಹೀಗಾಗಿ ಇದು ಸುರೇಶ್ ರೈನಾ ವಿಚಾರವಾಗಿಯೇ ಮೆಲ್ಬೋರ್ನ್ ಸ್ಟಾರ್ಟ್ ಉಲ್ಲೇಖಿಸುತ್ತಿದೆ ಎಂದು ಊಹಿಸಬಹುದು. ಆದರೆ ಈ ವಿಚಾರ ಅಧಿಕೃತವಾದ ಬಳಿಕವಷ್ಟೇ ಖಚಿತವಾಗಿ ಹೇಳಬಹುದು.

ವಿದೇಶಿ ಲೀಗ್‌ಗಳಲ್ಲಿ ಭಾಗಿಯಾಗುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈನಾ

ವಿದೇಶಿ ಲೀಗ್‌ಗಳಲ್ಲಿ ಭಾಗಿಯಾಗುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈನಾ

ಇನ್ನು ಈ ಸಂದರ್ಭದಲ್ಲಿ ದೈನಿಕ್ ಜಾಗರಣ್ ಸುರೇಶ್ ರೈನಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು ಅದರಲ್ಲಿ ಅವರು ವಿದೇಶಿ ಲೀಗ್‌ಗಳಲ್ಲಿ ಭಾಗಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. "ನಾನು ಇನ್ನು ಕೂಡ ಎರಡ್ಮೂರಯ ವರ್ಷಗಳ ಕಾಲ ಕ್ರಿಕೆಟ್ ಆಡುವುದಕ್ಕೆ ಬಯಸುತ್ತಿದ್ದೇನೆ. ಉತ್ತರ ಪ್ರದೇಶ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯುವ ಆಟಗಾರರು ಬರುತ್ತಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಯುಪಿಸಿಎ ಕಡೆಯಿಂದ ನಾನು ಈಗಾಗಲೇ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿದ್ದು ಬಿಸಿಸಿಐಗೂ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ನನಗೆ ಬೆಂಬಲ ನೀಡಿರುವುದಕ್ಕೆ ಬಿಸಿಸಿಐ ಹಾಗೂ ಯುಪಿಸಿಎಗೆ ಧನ್ಯವಾದ ಹೇಳುತ್ತಿದ್ದೇನೆ. ವಿಶ್ವದ ಇತರ ಬೇರೆ ಬೇರೆ ಲೀಗ್‌ಗಳಲ್ಲಿ ಆಡುವುದಕ್ಕೆ ನಾನು ಬಯಸುತ್ತಿದ್ದು ಸೆಪ್ಟೆಂಬರ್ 10ರಿಮದ ಆರಂಬವಾಗಲಿರುವ ರೋಡ್‌ ಸೇಫ್ಟಿ ವರ್ಲ್ಡ್ ಸಿಈಸ್‌ನಲ್ಲಿ ಭಾಗಿಯಾಗುತ್ತಿದ್ದೇನೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಯುಎಇನ ಫ್ರಾಂಚೈಸಿಗಳು ಈಗಾಗಲೇ ನನ್ನನ್ನು ಸಂಪರ್ಕಿಸಿದೆ. ಎಲ್ಲವೂ ಸ್ಪಷ್ಟವಾದ ಬಳಿಕ ಈ ಬಗ್ಗೆ ನಾನೇ ಅಧಿಕೃತವಾಗಿ ತಿಳಿಸುತ್ತೇನೆ" ಎಂದು ಸುರೇಶ್ ರೈನಾ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

Story first published: Tuesday, September 6, 2022, 14:16 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X