ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಐಸಿಸಿ ವರ್ಷದ ಮಹಿಳಾ ಆಟಗಾರ್ತಿ 2021' ಗೆದ್ದ ಸ್ಮೃತಿ ಮಂಧಾನ: ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದ ಬಾಬರ್

Indian star cricketer Smriti Mandhana wins ICC Womens Cricketer of the Year Award

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನ 'ಐಸಿಸಿ ವಾರ್ಷಿಕ ಮಹಿಳಾ ಕ್ರಿಕೆಟ್ ಆಟಗಾರ್ತಿ 2021' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ ಈ ಪ್ರಶಸ್ತಿಯನ್ನು ಐಸಿಸಿ ಘೋಷಿಸಿದೆ. 2021ರಲ್ಲಿ ಮಂಧಾನ 22 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 38.86ರ ಸರಾಸರಿಯಲ್ಲಿ 885 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಐದು ಅರ್ಧ ಶತಕ ಸೇರಿಕೊಂಡಿದೆ.

25ರ ಹರೆಯದ ಮಂಧಾನ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತದ ಪರ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಸರಣಿಯಲ್ಲಿ ಭಾರತ ತಂಡ 8 ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಆದರೆ ಈ ಎರಡು ಗೆಲುವುಗಳಲ್ಲಿಯೂ ಮಂಧಾನ ನಿರ್ಣಾಯಕ ಪಾತ್ರ ವಹಿಸಿದರು. ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ 80 ರನ್ ಗಳಿಸಿ ಭಾರತವು ಸರಣಿಯನ್ನು ಸಮಬಲಗೊಳಿಸಲು ಕಾರಣವಾದರು. ಸರಣಿಯ ಅಂತಿಮ ಪಂದ್ಯದಲ್ಲಿ 48 ರನ್ ಗಳಿಸಿದರು ಮಂಧಾನ.

4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

ಟೀಮ್ ಇಂಡಿಯಾ ಇತ್ತೀಚೆಗೆ ಅನುಭವಿಸಿದ ಹಿನ್ನಡೆಯ ಹೊರತಾಗಿಯೂ ಮಂಧಾನಾ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಸ್ಮೃತಿ ಮಂಧಾನ ಅವರ ಈ ಪ್ರದರ್ಶನದ ಕಾರಣದಿಂದಾಗಿ ಐಸಿಸಿ ವಾರ್ಷಿಕ ಆಟಗಾರ್ತಿಯಾಗಿ ಭಾರತದ ಸ್ಟಾರ್ ಆಟಗಾರ್ತಿಯನ್ನು ಆಯ್ಕೆ ಮಾಡಿದೆ.

ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿಯೂ ಸ್ಮೃತಿ ಮಂಧಾನ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ ಈ ಪಂದ್ಯದಲ್ಲಿ ಮಂಧಾನ 78 ರನ್‌ಗಳ ಕೊಡುಗೆಯನ್ನು ನೀಡಿದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಇನ್ನು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿಯೂ ಸ್ಮೃತಿ ಮಂಧಾನ ಅದ್ಭುತ ಪ್ರದರ್ಶನ ನೀಡಿದ್ದಾರೆ.

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

ಇನ್ನು ಇದಕ್ಕೂ ಮುನ್ನ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ ಗೆದ್ದು ಕೊಂಡಿದ್ದಾರೆ. ಇನ್ನು ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಾಕಿಸ್ತಾನ ಕ್ರಿಕೆಟ್ ತಮಡದ ನಾಯಕ ಬಾಬರ್ ಅಜಂ ಪಾಲಾಗಿದೆ. ಇನ್ನು ಮಹಿಳಾ ವಿಭಾಗದಲ್ಲಿ ಐಸಿಸಿ ವರ್ಷದ ಏಕದಿನ ಮಹಿಳಾ ಆಟಗಾರ್ತಿ ಪ್ರಶಸ್ತಿ ದಕ್ಷಿಣ ಆಪ್ರಿಕಾದ ಲಿಜೆಲ್ಲೆ ಲೀ ಮುಡಿಗೇರಿದೆ. 50 ಓವರ್‌ಗಳ ಮಾದರಿಯಲ್ಲಿ ಹರಿಣಗಳ ನಾಡಿನ ಈ ಅನುಭವಿ ಆಟಗಾರ್ತಿ ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ಗಳಿಸಿದ್ದಾರೆ.

Virat ವಿಕೆಟ್ ತೆಗೆದ ಸೌತ್ ಆಫ್ರಿಕಾ ಬೌಲರ್ ಬಾಯಲ್ಲಿ ಜೈ ಶ್ರೀರಾಮ್ ಜಪ | Oneindia Kannada

Story first published: Monday, January 24, 2022, 17:19 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X