ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಬಳಿಕ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

Indian T20 World Cup squad to be picked next week after completion of India-England 4th Test

ನವದೆಹಲಿ: ಮುಂಬರಲಿರುವ ಟಿ20ಐ ವಿಶ್ವಕಪ್‌ಗಾಗಿ ಮೂಂದಿನ ವಾರ ಭಾರತೀಯ ತಂಡ ಪ್ರಕಟವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಬಳಿಕ ರಾಷ್ಟ್ರೀಯ ಆಯ್ಕೆದಾರರು ಸಭೆ ನಡೆಸಿ ನಂತರ ಪ್ರತಿಷ್ಠಿತ ಟಿ20 ವಿಶ್ವಕಪ್‌ ಟೂರ್ನಿಗೆ ತಂಡ ಪ್ರಕಟಿಸಲಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿದೆ.

ICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ

ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಿದೆ. ನಾಲ್ಕನೇ ಪಂದ್ಯ ಸೆಪ್ಟೆಂಬರ್‌ 2ರಂದು ಲಂಡನ್‌ನ ಕೆನ್ನಿಂಗ್ಟನ್ ಒವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಡೆದ ಮೂರು ಪಂದ್ಯಗಳಲ್ಲಿ ಮೊದಲನೇ ಟೆಸ್ಟ್‌ ಪಂದ್ಯ ಡ್ರಾ ಆಗಿತ್ತು, ಎರಡನೇ ಪಂದ್ಯದಲ್ಲಿ ಭಾರತ ಗೆದ್ದಿತ್ತು, ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್‌ ಸಹಿತ 76 ರನ್ ಗಳಿಸಿತ್ತು.

ತಂಡ ಪ್ರಕಟಿಸಲು ಸೆಪ್ಟೆಂಬರ್‌ 10 ಕೊನೇ ದಿನಾಂಕ

ತಂಡ ಪ್ರಕಟಿಸಲು ಸೆಪ್ಟೆಂಬರ್‌ 10 ಕೊನೇ ದಿನಾಂಕ

ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಯ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಮೂಲವೊಂದು ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಬಳಿಕ ತಂಡ ಆರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. "ಮುಂದಿನ ಸೋಮವಾರ ಅಥವಾ ಮಂಗಳವಾರ ಟಿ20 ವಿಶ್ವಕಪ್‌ ಭಾರತ ತಂಡ ಪ್ರಕಟಿಸಲು ನಾವು ಎದುರು ನೋಡುತ್ತಿದ್ದೇವೆ. ಆದರೆ ದಿನಾಂಕ ಇನ್ನೂ ಖಾತರಿಯಾಗಿಲ್ಲ. ಆದರೆ ಮುಂದಿನ ಶುಕ್ರವಾರದೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ಸೆಪ್ಟೆಂಬರ್‌ 10 ತಂಡಗಳನ್ನು ಪ್ರಕಟಿಸಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂತಿಮ ದಿನವೆಂದು ಘೋಷಿಸಿದೆ," ಎಂದು ಮೂಲ ತಿಳಿಸಿದೆ. ಜಾಗತಿಕ ಮಟ್ಟದ ಕುತೂಹಲಕಾರಿ ಟೂರ್ನಿ ಟಿ20 ವಿಶ್ವಕಪ್‌ಗಾಗಿ ಸದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾತ್ರ ತಮ್ಮ ತಂಡ ಪ್ರಕಟಿಸಿವೆ.

ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

ಅಕ್ಟೋಬರ್‌ 17ರಂದು ಗ್ರೂಪ್‌ 'ಬಿ'ಯ ರೌಂಡ್‌ 1ರಲ್ಲಿ ಆತಿಥೇಯ ಓಮನ್ ಮತ್ತು ಪಪುವಾ ನ್ಯೂಗಿನಿಯಾ ದೇಶಗಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ಗ್ರೂಪ್‌ ಬಿಯಲ್ಲಿರುವ ಇನ್ನುಳಿದ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ಸಂಜೆ ಕಾದಾಡಲಿವೆ. ಗ್ರೂಪ್‌ 'ಎ'ಯಲ್ಲಿರುವ ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಂದಿನ ದಿನ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿವೆ. ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ. ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಎರಡು ಕ್ವಾಲಿಫೈಯರ್ (A1, B2) ತಂಡಗಳಿದ್ದರೆ, ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಎರಡು ಕ್ವಾಲಿಫೈಯರ್ ತಂಡಗಳು (A2, B1) ತಂಡಗಳು ಇವೆ. ಫೈನಲ್‌ ಪಂದ್ಯ ನವೆಂಬರ್‌ 14ರಂದು ದುಬೈನಲ್ಲಿ ನಡೆಯಲಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ BCCI ಬೇಜವಬ್ದಾರಿಯಿಂದ ನತದೃಷ್ಟರಾದ್ರು ಈ ಆಟಗಾರರು | Oneindia Kannada
15 ಜನರ ಸಂಭಾವ್ಯ ಭಾರತೀಯ ತಂಡ

15 ಜನರ ಸಂಭಾವ್ಯ ಭಾರತೀಯ ತಂಡ

"ಕೋವಿಡ್-19 ಭೀತಿಯ ಕಾರಣ ಮತ್ತು ಬಯೋ ಬಬಲ್ ಸುರಕ್ಷತೆಯ ದೃಷ್ಟಿಯಿಂದ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳು ತಮ್ಮ ತಂಡಗಳ ಜೊತೆ ಹೆಚ್ಚುವರಿ ಆಟಗಾರನ್ನು ಕರೆತರಲು ಅನುಮತಿ ನೀಡಿದೆ. ಬರುವ ಹೆಚ್ಚುವರಿ ಆಟಗಾರರ ಖರ್ಚುವೆಚ್ಚಗಳನ್ನು ನೀವೇ ಭರಿಸಬೇಕಾಗುತ್ತದೆ ಅನ್ನೋದನ್ನು ಐಸಿಸಿ ಹೇಳಿದೆ. ಐಸಿಸಿ ಕೇವಲ 15 ಆಟಗಾರರು ಮತ್ತು 8 ಮಂದಿ ಅಧಿಕಾರಿಗಳ ವೆಚ್ಚ ಮಾತ್ರ ಐಸಿಸಿ ಭರಿಸಲಿದೆ," ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ. ಹೀಗಾಗಿ ದೇಶವೊಂದರಿಂದ 15 ಆಟಗಾರರು ಮತ್ತು 8 ಮಂದಿ ಅಧಿಕಾರಿಗಳ ವೆಚ್ಚ ಮಾತ್ರ ಐಸಿಸಿ ಭರಿಸಲಿದೆ.
(ಟಿ20 ವಿಶ್ವಕಪ್‌ಗೆ ಇನ್ನು ಕಡಿಮೆ ದಿನಗಳು ಬಾಕಿಯಿದ್ದು, ಟೀಂ ಇಂಡಿಯಾ ಸೇರಬಲ್ಲ ಸಂಭಾವ್ಯ 15 ಆಟಗಾರರ ಪಟ್ಟಿ ಇಲ್ಲಿದೆ)
1. ರೋಹಿತ್ ಶರ್ಮ 2. ಶಿಖರ್ ಧವನ್ 3. ಕೆಎಲ್ ರಾಹುಲ್ 4. ವಿರಾಟ್ ಕೊಹ್ಲಿ (ನಾಯಕ) 5. ಶ್ರೇಯಸ್ ಅಯ್ಯರ್ 6. ಸಂಜು ಸಾಮ್ಸನ್ (ವಿಕೆಟ್ ಕೀಪರ್) 7. ರಿಷಬ್ ಪಂತ್ (ವಿಕೆಟ್ ಕೀಪರ್) 8. ಹಾರ್ದಿಕ್ ಪಾಂಡ್ಯ 9. ರವೀಂದ್ರ ಜಡೇಜ 10. ಯುಜುವೇಂದ್ರ ಚಾಹಲ್ 11. ಮೊಹಮ್ಮದ್ ಶಮಿ 12. ಜಸ್ ಪ್ರೀತ್ ಬೂಮ್ರಾ 13. ವಾಷಿಂಗ್ಟನ್ ಸುಂದರ್ 14. ದೀಪಕ್ ಚಾಹರ್ 15. ನವದೀಪ್ ಸೈನಿ.

Story first published: Thursday, September 2, 2021, 9:51 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X