ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ

Indian team announced for 3-match ODI series against South Africa
IND vs SA: Hardik Pandya, Bhuvneshwar Kumar, Shikhar Dhawan return for 3-match ODI series

ನವದೆಹಲಿ, ಮಾರ್ಚ್ 8: ದಕ್ಷಿಣ ಆಪ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐಯು ಭಾನುವಾರ (ಮಾರ್ಚ್ 8) 15 ಜನರ ತಂಡವನ್ನು ಪ್ರಕಟಿಸಿದೆ. ಗಾಯಾಳಾಗಿ ತಂಡದಿಂದ ಹೊರಗುಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಿಳಾ ಟಿ20 ವಿಶ್ವಕಪ್: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ ಸುಲಭ ಜಯಮಹಿಳಾ ಟಿ20 ವಿಶ್ವಕಪ್: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ ಸುಲಭ ಜಯ

ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ತಂಡ, ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮಾರ್ಚ್ 12ರಿಂದ ಈ ಪ್ರವಾಸ ಸರಣಿ ಆರಂಭಗೊಳ್ಳಲಿದೆ. ಧರ್ಮಶಾಲಾದ ಹಿಮಾಚಲಪ್ರದೇಶ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತಂಡಗಳ ಮೊದಲ ಪಂದ್ಯ ನಡೆಯಲಿದೆ.

ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್

ಇತ್ತೀಚೆಗೆ ನಡೆದ ಡಿವೈ ಪಾಟಿಲ್ ಟಿ20 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇಬ್ಬರೂ ದಕ್ಷಿಣ ಆಫ್ರಿಕಾ ವಿರುದ್ಧದ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಎರಡು ಸ್ಫೋಟಕ ಶತಕಗಳು

ಎರಡು ಸ್ಫೋಟಕ ಶತಕಗಳು

ಡಿವೈ ಪಾಟಿಲ್ ಟಿ20 ಟೂರ್ನಿಯ ಎರಡು ಪಂದ್ಯಗಳಲ್ಲಿ ಆಡಿದ್ದ ಹಾರ್ದಿಕ್ ಪಾಂಡ್ಯ ಎರಡು ಸ್ಫೋಟಕ ಶತಕಗಳನ್ನು ಬಾರಿಸಿದ್ದರು. ಮೊದಲ ಪಂದ್ಯದಲ್ಲಿ 39 ಎಸೆತಗಳಿಗೆ 105 ರನ್ ಬಾರಿಸಿದ್ದ ಪಾಂಡ್ಯ, ಎರಡನೇ ಪಂದ್ಯದಲ್ಲಿ 55 ಎಸೆತಗಳಿಗೆ 158 ರನ್ ಸಿಡಿಸಿ ಗಮನ ಸೆಳೆದಿದ್ದರು.

ಪಾಂಡ್ಯ ಫಿಟ್ ಆಗಿದ್ದಾರೆ

ಪಾಂಡ್ಯ ಫಿಟ್ ಆಗಿದ್ದಾರೆ

'ಪಾಂಡ್ಯ ಈಗ ಫಿಟ್‌ ಆಗಿದ್ದಾರೆ. ಭಾರತ ರಾಷ್ಟ್ರೀಯ ತಂಡಕ್ಕೆ ಮರಳು ಸಜ್ಜಾಗಿದ್ದಾರೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ತರಬೇತಿಗೆ ಒಳಗಾದ ಬಳಿಕ ಟಿ20 ಟೂರ್ನಿಯಲ್ಲಿ ಪಾಂಡ್ಯ ಯಾವ ಪ್ರದರ್ಶನ ನಿಡಿದ್ದಾರೆ ಎನ್ನೋದು ನಿಮಗೆ ಗೊತ್ತು. ಹಾರ್ದಿಕ್ ಶೀಘ್ರ ತಂಡ ಸೇರಿಕೊಳ್ಳುತ್ತಿದ್ದಾರೆ,' ಎಂದು ತಂಡ ಪ್ರಕಟಗೊಳ್ಳುವುದಕ್ಕೂ ಮುನ್ನ ಮೂಲವೊಂದು ತಿಳಿಸಿತ್ತು.

ಐಪಿಎಲ್‌ನಲ್ಲಿ ಧವನ್-ಹಾರ್ದಿಕ್

ಐಪಿಎಲ್‌ನಲ್ಲಿ ಧವನ್-ಹಾರ್ದಿಕ್

ಧವನ್, ಹಾರ್ದಿಕ್ ಚೇತರಿಕೆ ಐಪಿಎಲ್ ವಿಚಾರಕ್ಕೂ ಸಂತಸದ ಸಂಗತಿ. ಮಾರ್ಚ್‌ 29ರಿಂದ ಆರಂಭವಾಗುವ ಐಪಿಎಲ್ ನಲ್ಲಿ ಹಾರ್ದಿಕ್ ಮತ್ತು ಶಿಖರ್ ಧವನ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ.

ದ.ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ

ದ.ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ

ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ಸಿ), ಕೆ.ಎಲ್. ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್‌ಮಾನ್ ಗಿಲ್.

Story first published: Sunday, March 8, 2020, 16:12 [IST]
Other articles published on Mar 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X