ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ಕೊಹ್ಲಿ ಅನುಪಸ್ಥಿತಿ ಆಟಗಾರರ ಒತ್ತಡ ಹೆಚ್ಚಿಸಲಿದೆ: ಪಾಂಟಿಂಗ್

Indian team will feel extra pressure without Virat Kohli in Tests: Ricky Ponting

ಸಿಡ್ನಿ: ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲವಾದ್ದರಿಂದ ಟೀಮ್ ಇಂಡಿಯಾ ಶುಭ್ರ ಮನಸ್ಸಿನಲ್ಲಿ ಇಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ರಿಕಿ ಪಾಂಟಿಂಗ್ ಹೇಳಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರಂಭಿಕ ಪಂದ್ಯದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಹೀಗಾಗಿ ಪಾಂಟಿಂಗ್ ಈ ಹೇಳಿಕೆ ನೀಡಿದ್ದಾರೆ.

ಆಶಿಶ್ ನೆಹ್ರಾ ಹೆಸರಿಸಿದ ಬೆಸ್ಟ್ ಐಪಿಎಲ್ 2020 ತಂಡದಲ್ಲಿ ರೋಹಿತ್, ಕೊಹ್ಲಿಗೆ ಸ್ಥಾನವಿಲ್ಲ!ಆಶಿಶ್ ನೆಹ್ರಾ ಹೆಸರಿಸಿದ ಬೆಸ್ಟ್ ಐಪಿಎಲ್ 2020 ತಂಡದಲ್ಲಿ ರೋಹಿತ್, ಕೊಹ್ಲಿಗೆ ಸ್ಥಾನವಿಲ್ಲ!

'ವಿರಾಟ್ ಕೊಹ್ಲಿ ಇನ್ನುಳಿದ 3 ಪಂದ್ಯಗಳಲ್ಲಿ ಆಡಿಲ್ಲ ಅನ್ನೋದು ಭಾರತಕ್ಕೆ ಅರಿವಾಗಲಿದೆ. ಕೊಹ್ಲಿಯ ನಾಯಕತ್ವ ಮತ್ತು ಬ್ಯಾಟಿಂಗ್ ಬೇರೆ ಬೇರೆ ಆಟಗಾರರ ಒತ್ತಡ ಕಡಿಮೆ ಮಾಡುತ್ತಿತ್ತು. ಆದರೆ ಕೊಹ್ಲಿ ಅನುಪಸ್ಥಿತಿ ಆಟಗಾರರಿಗೆ ಹೆಚ್ಚುವರಿ ಒತ್ತಡ ತರಲಿದೆ,' ಎಂದು ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡಿದ ಪಾಂಟಿಂಗ್ ಹೇಳಿದ್ದಾರೆ.

'ಕೊಹ್ಲಿ ಬದಲಿಗೆ ಅಜಿಂಕ್ಯ ರಹಾನೆ ನಾಯಕತ್ವ ತೆಗೆದುಕೊಳ್ಳಲಿದ್ದಾರೆ. ರಹಾನೆಗೆ ಹೆಚ್ಚಿನ ಒತ್ತಡ ಬೀಳಲಿದೆ,' ಎಂದು ಪಾಂಟಿಂಗ್ ಹೇಳಿದ್ದಾರೆ. ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಮೊದಲ ಪಂದ್ಯದ ಬಳಿಕ ಕೊಹ್ಲಿ ಭಾರತಕ್ಕೆ ಬರಲಿದ್ದಾರೆ.

ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟನೆಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟನೆ

ಭಾರತ-ಆಸ್ಟ್ರೇಲಿಯಾ ಸರಣಿ 3 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳು ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ನವೆಂಬರ್ 27ರಂದು ಏಕದಿನ ಸರಣಿಯೊಂದಿಗೆ ಪಂದ್ಯ ನಡೆಯಲಿದೆ. ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.

Story first published: Friday, November 20, 2020, 13:11 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X