ಇಂಡೋ-ಆಸಿಸ್ ಟೆಸ್ಟ್ : ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಕ್ವಾರಂಟೈನ್

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಈ ಸರಣಿಯ ಮೇಲೆ ಎಲ್ಲ ಕ್ರಿಕೆಟ್ ಪ್ರೇಮಿಗಳು ದೃಷ್ಟಿಯನ್ನಿಟ್ಟಿದ್ದಾರೆ. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಭಾರತ ಕ್ರಿಕೆಟ್ ತಂಡ ಸರಣಿ ಆರಂಭಕ್ಕೂ ಎರಡು ವಾರಗಳ ಮುನ್ನ ಕ್ವಾರಂಟೈನ್ ಪೂರೈಸಿಕೊಳ್ಳಬೇಕಾದ ಸಾಧ್ಯತೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಈ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೇ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟಿಗರು ಹಾಗೂ ಸಿಬ್ಬಂದಿಗಳು ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಎರಡು ವಾರಗಳ ಕಾಲ ಕ್ವಾರಂಟೈ್ ಅವಧಿಯನ್ನು ಪೂರೈಸುವ ಬಗ್ಗೆ ಕೇಳಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್: ಕೆರಿಬಿಯನ್ನರ ಮಣಿಸಿದ ಆಂಗ್ಲರು

ಈಎಸ್‌ಪಿಎನ್ ಕ್ರಿಕ್‌ಇನ್ಪೋ ಈ ಬಗ್ಗೆ ವರದಿಯನ್ನು ಮಾಡಿದ್ದು ಅಡಿಲೇಡ್ ಓವಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ಕ್ವಾರಂಟೈನ್‌ಗೆ ಒಳಗಾಗುವ ಸಾಧ್ಯತೆಯನ್ನು ತಿಳಿಸಿದೆ. ಡಿಸೆಂಬರ್‌ 4 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ.

ಅಡಿಲೇಡ್ ಸ್ಟೇಡಿಯಮ್‌ ಹೋಟೆಲ್ ವ್ಯವಸ್ಥೆಯನ್ನು ಕೂಡ ಹೊಂದಿದೆ. ಓಲ್ಡ್ ಟ್ರಾಫರ್ಡ್ ಹಾಗೂ ಏಜಸ್ ಬೌಲ್‌ನಂತೆಯೇ ಕ್ರಿಡಾಂಗಣಕ್ಕೆ ಈ ಹೋಟೆಲ್ ಹೊಂದಿಕೊಂಡಂತಿರುವುದರಿಂದ ಅನುಕೂಲವಾಗಿದೆ ಎಂದು ನಿಕ್ ಹಾಕ್ಲೆ ತಿಳಿಸಿದ್ದಾರೆ.

ಐಪಿಎಲ್‌ ದಾರಿಯಿನ್ನು ಸುಲಭ, ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ

ಎರಡು ವಾರಗಳ ಕ್ವಾರಂಟೈನ್ ಸಾಕಷ್ಟು ವ್ಯವಸ್ಥಿತವಾಗಿದೆ. ಈ ಅವಧಿಯಲ್ಲಿ ಕ್ರಿಕೆಟ್ ಆಟಗಾರರಿಗೆ ಅಭ್ಯಾಸಕ್ಕೆ ಪೂರಕವಾಗಿಯೇ ವ್ಯವಸ್ಥೆಗಳು ಇರಲಿದೆ. ಅದಕ್ಕೆ ಅನುವಾಗುವಂತೆ ವ್ಯವಸ್ಥೆ ಮಾಡಲು ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹ್ಯಾಕ್ಲೆ ಹೇಳಿಕೆಯನ್ನು ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, July 21, 2020, 11:43 [IST]
Other articles published on Jul 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X