ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಭಾರತದ ವನಿತೆಯರಿಗೆ ಸುಲಭ ತುತ್ತಾದ ದ.ಆಫ್ರಿಕಾ

By Manjunatha
Indian women cricket team beats South Africa by 88 runs

ಕಿಂಬರ್ಲಿ, ಫೆಬ್ರವರಿ 06: ದಕ್ಷಿಣ ಆಫ್ರಿಕಾ ಮಹಿಳೆಯರ ಕ್ರಿಕೆಟ್ ತಂಡದ ವಿರುದ್ಧ ಮೂರು ಪಂದ್ಯದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು 88 ರನ್‌ಗಳ ಭರ್ಜರಿ ವಿಜಯ ದಾಖಲಿಸಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದ.ಆಫ್ರಿಕಾಕ್ಕೆ ಆಗಮಿಸಿರುವ ಭಾರತದ ವನಿತೆಯರು ಆಲ್‌ರೌಂಡ್ ಆಟದ ಮೂಲದ ದ.ಆಫ್ರಿಕಾವನ್ನು ಬಗ್ಗು ಬಡಿದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು.

ಕ್ರಿಕೆಟ್: ದ.ಆಫ್ರಿಕಾಕ್ಕೆ 214 ರನ್ ಗುರಿ ನೀಡಿದ ಭಾರತದ ವನಿತೆಯರು ಕ್ರಿಕೆಟ್: ದ.ಆಫ್ರಿಕಾಕ್ಕೆ 214 ರನ್ ಗುರಿ ನೀಡಿದ ಭಾರತದ ವನಿತೆಯರು

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ನಾಯಕಿ ಮಿಥಾಲಿ ರಾಜ್ ಪಡೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರ ಜವಾಬ್ದಾರಿಯುತ ಅರ್ಧಶತಕದಿಂದ (84) 213 ರನ್ ಪೇರಿಸಿತು. ಅವರಿಗೆ ಮಿಥಾಲಿ ರಾಜ್ 45 ರನ್ ಗಳಿಸಿದರು.

ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದ ಭಾರತದ ಆಟಗಾರ್ತಿಯರು ದ.ಆಫ್ರಿಕಾ ತಂಡವನ್ನು ಕೇವಲ 125 ರನ್‌ಗಳಿಗೆ ಆಲ್ ಔಟ್ ಮಾಡಿದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಜೂಲನ್ ಗೋಸ್ವಾಮಿ ಅವರು 9.2 ಓವರ್ ಎಸೆದು ಕೇವಲ 24 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಶಿಖಾ ಪಾಂಡೆ 8 ಓವರ್ ಎಸೆದು 23 ರನ್ ನೀಡಿ 3 ವಿಕೆಟ್ ಪಡೆದರು. ಪೂನಮ್ ಯಾದವ್ 2 ವಿಕೆಟ್ ಮತ್ತು ರಾಜೇಶ್ವರಿ ಗಾಯಕ್‌ವಾಡ್ ಅವರು 1 ವಿಕೆಟ್ ಪಡೆದರು. ದ.ಆಪ್ರಿಕಾ ತಂಡದ ಪರ ನಾಯಕಿ ವ್ಯಾನ್ ನಿಕರ್ಕ್ (41) ಹೊರತು ಪಡಿಸಿ ಇನ್ನಾವ ಆಟಗಾರ್ತಿಯಿಂದಲೂ ಉತ್ತಮ ಆಟ ಕಂಡು ಬರಲಿಲ್ಲ.

84 ರನ್ ಭಾರಿಸಿ ಮುಂಚಿದ ಸ್ಮೃತಿ ಮಂದಾನ ಅವರಿಗೆ ಪಂದ್ಯದ ಅತ್ಯುತ್ತಮ ಆಟಗಾರ್ತಿ ಗೌರವ ಪ್ರಾಪ್ತಿಯಾಯಿತು.

Story first published: Tuesday, February 6, 2018, 10:58 [IST]
Other articles published on Feb 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X