ಆಸ್ಟ್ರೇಲಿಯಾ ಮಹಿಳೆಯರ ವಿರುದ್ಧ ಡ್ರಾ ಸಾಧಿಸಿದ ಭಾರತದ ಮಹಿಳೆಯರು

ಕ್ವೀನ್ಸ್‌ಲ್ಯಾಂಡ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಕ್ಯಾರಾರಾ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ಮಹಿಳೆಯರು ಮತ್ತು ಆಸ್ಟ್ರೇಲಿಯಾ ಮಹಿಳೆಯರ ನಡುವಿನ ಏಕಮಾತ್ರ ಚೊಚ್ಚಲ ಟೆಸ್ಟ್‌ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದೆ. ಸ್ಮೃತಿ ಮಂಧಾನ ಶತಕ ಮತ್ತು ಶೆಫಾಲಿ ವರ್ಮಾ ಅರ್ಧ ಶತಕದ ಕೊಡುಗೆಯೊಂದಿಗೆ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದೆ.

ಔಟಾ, ನಾಟ್‌ ಔಟಾ?: ಪಂಜಾಬ್ vs ಬೆಂಗಳೂರು ಪಂದ್ಯದಲ್ಲಿ ವಿವಾದ-ವಿಡಿಯೋಔಟಾ, ನಾಟ್‌ ಔಟಾ?: ಪಂಜಾಬ್ vs ಬೆಂಗಳೂರು ಪಂದ್ಯದಲ್ಲಿ ವಿವಾದ-ವಿಡಿಯೋ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಮಹಿಳಾ ತಂಡ, ಸ್ಮೃತಿ ಮಂಧಾನ 127, ಶೆಫಾಲಿ ವರ್ಮಾ 31, ಪೂನಮ್ ರಾವತ್ 36, ಮಿಥಾಲಿ ರಾಜ್ 30, ಯಸ್ತಿಕಾ ಭಾಟಿಯಾ 19, ದೀಪ್ತಿ ಶರ್ಮಾ 66, ತಾನಿಯಾ ಭಾಟಿಯಾ 22, ಪೂಜಾ ವಸ್ತ್ರಕರ್ 13, ಜೂಲನ್ ಗೋಸ್ವಾಮಿ 7, ಮೇಘನಾ ಸಿಂಗ್ 2 ರನ್‌ನೊಂದಿಗೆ 145 ಓವರ್‌ಗೆ 8 ವಿಕೆಟ್‌ ಕಳೆದು 377 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.

ಮೊದಲ ಇನ್ನಿಂಗ್ಸ್‌ಗೆ ಇಳಿದ ಆಸ್ಟ್ರೇಲಿಯಾ ಮಹಿಳೆಯರು ಮೊದಲ ಇನ್ನಿಂಗ್ಸ್‌ನಲ್ಲಿ ಅಲಿಸಾ ಹೀಲಿ 29, ಬೆತ್ ಮೂನಿ 4, ಮೆಗ್ ಲ್ಯಾನಿಂಗ್ 38, ಎಲ್ಲಿಸ್ ಪೆರ್ರಿ 68, ತಹ್ಲಿಯಾ ಮೆಕ್‌ಗ್ರಾತ್ 28, ಆಶ್ಲೇ ಗಾರ್ಡ್ನರ್ 51, ಅನ್ನಾಬೆಲ್ ಸದರ್‌ಲ್ಯಾಂಡ್ 3, ಸೋಫಿ ಮೊಲಿನಕ್ಸ್ 2 ರನ್‌ನೊಂದಿಗೆ 96.4 ಓವರ್‌ಗೆ 9 ವಿಕೆಟ್ ಕಳೆದು 241 ರನ್ ಗಳಿಸಿತು.

ಐಪಿಎಲ್ 2021: ಋತುರಾಜ್ ಗಾಯಕ್ವಾಡ್ ಆಟಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಂದಲೂ ಬಂತು ಮೆಚ್ಚುಗೆಐಪಿಎಲ್ 2021: ಋತುರಾಜ್ ಗಾಯಕ್ವಾಡ್ ಆಟಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಂದಲೂ ಬಂತು ಮೆಚ್ಚುಗೆ

Yuzvendra chahal ಹಾಕಿದ ಈ ಬಾಲಿಗೆ Sarfraz out | Oneindia Kannada

ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶೆಫಾಲಿ ವರ್ಮಾ 52, ಪೂನಮ್ ರಾವತ್ 41, ಯಸ್ತಿಕಾ ಭಾಟಿಯಾ 3, ದೀಪ್ತಿ ಶರ್ಮಾ 3 ರನ್‌ನೊಂದಿಗೆ 37 ಓವರ್‌ಗೆ 3 ವಿಕೆಟ್ ಕಳೆದು 135 ರನ್‌ ಗಳಿಸಿ ಎದುರಾಳಿಗೆ ಅವಕಾಶ ನೀಡಲಾಯ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಅಲಿಸಾ ಹೀಲಿ 6, ಬೆತ್ ಮೂನಿ 11, ಮೆಗ್ ಲ್ಯಾನಿಂಗ್ 17, ಎಲ್ಲಿಸ್ ಪೆರ್ರಿ 1 ರನ್‌ನೊಂದಿಗೆ 15 ಓವರ್‌ಗೆ 2 ವಿಕೆಟ್ ಕಳೆದು 36 ರನ್ ಗಳಿಸಿತು. ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, October 3, 2021, 18:35 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X