ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಪುರುಷ ತಂಡಕ್ಕಿರುವ ಬೆಲೆ ಮಹಿಳಾ ತಂಡಕ್ಕಿಲ್ಲ; ಕಿಡಿಕಾರಿದ ಇಂಗ್ಲೆಂಡ್ ಮಾಜಿ ಕ್ರಿಕೆಟರ್

Indian Women Cricketers Need A Players Association Says Isa Guha

ಪುರುಷ ಕ್ರಿಕೆಟ್ ತಂಡಗಳಿಗಿರುವ ಬೆಲೆ ಮತ್ತು ಆದ್ಯತೆ ಮಹಿಳಾ ಕ್ರಿಕೆಟ್ ತಂಡಗಳಿಗಿಲ್ಲ ಎಂಬ ವಾದ ಈ ಹಿಂದಿನಿಂದಲೂ ಸಾಕಷ್ಟು ಕೇಳಿಬರುತ್ತಿದೆ. ಅದರಲ್ಲಿಯೂ ಬಿಸಿಸಿಐ ಭಾರತೀಯ ಪುರುಷರ ತಂಡಕ್ಕೆ ನೀಡುವಂಥ ಆದ್ಯತೆಯನ್ನು ಭಾರತೀಯ ಮಹಿಳಾ ತಂಡಕ್ಕೆ ನೀಡುವುದೇ ಇಲ್ಲ ಎಂಬ ಆರೋಪಗಳು ದೊಡ್ಡಮಟ್ಟದಲ್ಲಿಯೇ ಕೇಳಿಬಂದಿವೆ.

ವರ್ಷವಾದ್ರೂ ಆಟಗಾರ್ತಿಯರಿಗೆ ವಿಶ್ವಕಪ್‌ನ ಹಣ ಕೊಟ್ಟಿಲ್ಲ ಬಿಸಿಸಿಐ!ವರ್ಷವಾದ್ರೂ ಆಟಗಾರ್ತಿಯರಿಗೆ ವಿಶ್ವಕಪ್‌ನ ಹಣ ಕೊಟ್ಟಿಲ್ಲ ಬಿಸಿಸಿಐ!

ಈ ಆರೋಪ ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದ್ದು, ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೊತ್ತವನ್ನು ಟೀಮ್ ಇಂಡಿಯಾ ಆಟಗಾರ್ತಿಯರಿಗೆ ನೀಡದೆ ಇರುವುದೇ ಈ ಆರೋಪಕ್ಕೆ ಕಾರಣವಾಗಿದೆ. ಹೌದು ಕಳೆದ ವರ್ಷ ಮಾರ್ಚ್ 8ರಂದು ನಡೆದ ಮಹಿಳೆಯರ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಸೋತು ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.

ಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿ

ಹೀಗೆ ರನ್ನರ್ ಅಪ್ ಆಗಿ ಹೊರಹೊಮ್ಮಿದ ಭಾರತೀಯ ಮಹಿಳಾ ತಂಡಕ್ಕೆ 3.5 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು. ಆದರೆ ಟೂರ್ನಿ ಮುಗಿದು ಒಂದು ವರ್ಷ ಕಳೆದರೂ ಸಹ ಇನ್ನೂ ಈ ಬಹುಮಾನ ಧನ ಮಹಿಳಾ ಆಟಗಾರ್ತಿಯರ ಕೈಸೇರಿಲ್ಲ. ಕಳೆದೆರಡು ದಿನಗಳಿಂದ ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಈ ವಾರಾಂತ್ಯದೊಳಗೆ ಎಲ್ಲಾ ಆಟಗಾರ್ತಿಯರಿಗೂ ಸಹ ಬಹುಮಾನ ಧನ ವಿತರಿಸಲಾಗುವುದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಬಿಸಿಸಿಐ ಸ್ಪಷ್ಟನೆ ನೀಡಿದರೂ ಕೂಡ ಇಷ್ಟು ದಿನಗಳವರೆಗೆ ವಿಶ್ವಕಪ್ ಟೂರ್ನಿಯ ಮೊತ್ತವನ್ನು ಆಟಗಾರ್ತಿಯರಿಗೆ ನೀಡದೆ ಸುದ್ದಿಯಾದ ಬಳಿಕ ಬಿಸಿಸಿಐ ಈ ಹಣವನ್ನು ಹಂಚಲು ಮುಂದಾಗಿರುವುದರ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ.

ಈ ವಿವಾದದ ಕುರಿತು ಇಂಗ್ಲೆಂಡ್ ತಂಡದ ಮಾಜಿ ಆಟಗಾರ್ತಿ ಇಶಾ ಗುಹಾ ಕೂಡ ಪ್ರತಿಕ್ರಿಯೆ ನೀಡಿದ್ದು ಈ ಕೆಳಕಂಡ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಮಾನತೆ ಇನ್ನೂ ಇದೆ

ಅಸಮಾನತೆ ಇನ್ನೂ ಇದೆ

ವಿಶ್ವಕಪ್ ಟೂರ್ನಿಯ ಹಣದ ಹಂಚಿಕೆ ವಿವಾದದ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿರುವ ಇಶಾ ಗುಹಾ ಪುರುಷ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್ ನಡುವೆ ಅಸಮಾನತೆ ಇನ್ನೂ ಇದೆ. ಆದರೆ ಮೇಲ್ನೋಟಕ್ಕೆ ಎರಡೂ ತಂಡಗಳಲ್ಲೂ ಸಮಾನತೆಯಿದೆ ಎಂಬಂತೆ ಕಾಣುತ್ತಿದೆ ಅಷ್ಟೇ ಎಂದಿದ್ದಾರೆ.

ಭಾರತ ಮಹಿಳಾ ತಂಡ ಕಡಿಮೆಯೇನಲ್ಲ

ಭಾರತ ಮಹಿಳಾ ತಂಡ ಕಡಿಮೆಯೇನಲ್ಲ

ಬಿಸಿಸಿಐ ಭಾರತ ಪುರುಷ ತಂಡಕ್ಕೆ ನೀಡುವಂತಹ ಪ್ರಾಶಸ್ತ್ಯವನ್ನು ಮಹಿಳಾ ತಂಡಕ್ಕೂ ನೀಡಿದರೆ ಆಟಗಾರ್ತಿಯರು ಖಂಡಿತವಾಗಿಯೂ ಉತ್ತಮ ಪ್ರದರ್ಶನವನ್ನು ನೀಡುತ್ತಾರೆ. ಟೀಮ್ ಇಂಡಿಯಾ ಆಟಗಾರ್ತಿಯರು ಕಡಿಮೆಯೇನಲ್ಲ ಎಂದು ಇಶಾ ಗುಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿವಿಧ ಅಭಿವೃದ್ಧಿಗಳಾಗಬೇಕು

ವಿವಿಧ ಅಭಿವೃದ್ಧಿಗಳಾಗಬೇಕು

ಪುರುಷ ಕ್ರಿಕೆಟಿಗರು ವಿವಿಧ ಹಂತಗಳಲ್ಲಿದ್ದಾರೆ ಅದೇ ರೀತಿ ಮಹಿಳಾ ಕ್ರಿಕೆಟಿಗರಿಗೂ ಸಹ ಬಿಸಿಸಿಐನ ವಿವಿಧ ಹಂತಗಳಲ್ಲಿ ಸ್ಥಾನವನ್ನು ನೀಡಬೇಕು. ಉತ್ತಮ ಸಂಬಳದ ಯೋಜನೆ, ಸರಿಯಾದ ನಿವೃತ್ತಿ ಯೋಜನೆ ಮತ್ತು ಹೆರಿಗೆಗೆ ಅವಕಾಶ ಇನ್ನೂ ಮುಂತಾದ ಅಗತ್ಯವಿರುವ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಇಶಾ ಗುಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮಹಿಳಾ ತಂಡಕ್ಕೆ ಅಸೋಶಿಯೇಶನ್ ಅಗತ್ಯವಿದೆ

ಭಾರತೀಯ ಮಹಿಳಾ ತಂಡಕ್ಕೆ ಅಸೋಶಿಯೇಶನ್ ಅಗತ್ಯವಿದೆ

ಭಾರತೀಯ ಕ್ರಿಕೆಟ್ ಆಟಗಾರ್ತಿಯರ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಮಹಿಳಾ ಕ್ರಿಕೆಟ್ ತಂಡದ ಅಸೋಸಿಯೇಷನ್ ಅಗತ್ಯವಿದೆ ಎಂದು ಇಶಾ ಗುಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Tuesday, May 25, 2021, 10:22 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X