ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿದ ಭಾರತದ ವನಿತೆಯರು

Indian women qualify for 2021 World Cup after ODI Championship round against Pakistan cancelled

ನವದೆಹಲಿ, ಏಪ್ರಿಲ್ 15: ಭಾರತದ ಮಹಿಳಾ ತಂಡ 2021ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಬುಧವಾರ (ಏಪ್ರಿಲ್ 15) ಭಾರತಕ್ಕೆ ಪ್ರವೇಶ ಲಭಿಸಿರುವುದು ಘೋಷಿಸಲ್ಪಟ್ಟಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಕದಿನ ಚಾಂಪಿಯನ್‌ಶಿಪ್ ರೌಂಡ್ ರದ್ದಾದ ಬಳಿಕ ಭಾರತಕ್ಕೆ ವಿಶ್ವಕಪ್‌ಗೆ ಪ್ರವೇಶ ಲಭಿಸಿದೆ.

ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಭಾರತ ಸರ್ಕಾರ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಕ್ಕೆ (ಬಿಸಿಸಿಐ) ಅನುಮೋದನೆ ನೀಡಿಲ್ಲ. ರಾಜಕೀಯ ಕಾರಣದಿಂದ ಇತ್ತಂಡಗಳ ಪಂದ್ಯಕ್ಕೆ ಅಡಚಣೆಯಾಗಿದೆ. ಹೀಗಾಗಿ ಭಾರತ-ಪಾಕ್ ಒಡಿಐ ಚಾಂಪಿಯನ್‌ಶಿಪ್ ಸುತ್ತು ರದ್ದುಗೊಂಡಿದೆ.

ಕೆ.ಎಲ್ ರಾಹುಲ್‌ ಕಮೆಂಟ್‌ಗೆ ವೈರಲ್ ಆಯ್ತು ಗೆಳತಿ ಅಥಿಯಾಳ ಪೋಸ್ಟ್!ಕೆ.ಎಲ್ ರಾಹುಲ್‌ ಕಮೆಂಟ್‌ಗೆ ವೈರಲ್ ಆಯ್ತು ಗೆಳತಿ ಅಥಿಯಾಳ ಪೋಸ್ಟ್!

ಕಳೆದ ವರ್ಷ ಜುಲೈ ಮತ್ತು ನವೆಂಬರ್‌ನಲ್ಲಿ ಭಾರತ-ಪಾಕಿಸ್ತಾನ ರೌಂಡ್ ನಡೆಸಲು ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಇತ್ತಂಡಗಳ ಪಂದ್ಯಕ್ಕೆ ಸರ್ಕಾರ ಅನುಮೋದನೆ ಬೇಕಾಗಿದ್ದರಿಂದ ಪಂದ್ಯ ನಡೆದಿರಲಿಲ್ಲ. ಇತ್ತಂಡಗಳ ಮೂರು ಪಂದ್ಯಗಳ ಸರಣಿ ರದ್ದಾಗಿರುವುದರಿಂದ ಎರಡೂ ತಂಡಗಳು ಪಾಯಿಂಟ್ ಹಂಚಿಕೊಳ್ಳಲಿವೆ.

ಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆ

'ಭಾರತ-ಪಾಕಿಸ್ತಾನ ಸರಣಿಗೆ ಭಾರತ ಸರ್ಕಾರದಿಂದ ಅನುಮತಿ ದೊರೆಯುತ್ತಿಲ್ಲ. ಒಡಿಐ ಚಾಂಪಿಯನ್‌ಶಿಪ್‌ನ 6ನೇ ಸುತ್ತಿಗೆ ನಿಜವಾಗಿ 2019ರ ಜುಲೈ ಮತ್ತು ನವೆಂಬರ್‌ನಲ್ಲಿ ದಿನಾಂಕ ನಿಗದಿಯಾಗಿತ್ತು. ಆದರೆ ಎರಡೂ ದೇಶಗಳ ಕ್ರಿಕೆಟ್ ಬೋರ್ಡ್‌ಗಳ ಪ್ರಯತ್ನದ ಹೊರತಾಗಿಯೂ ಸರಣಿ ರದ್ದಾಗಿದೆ,' ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Story first published: Thursday, April 16, 2020, 0:03 [IST]
Other articles published on Apr 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X