ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ವಿಶ್ವಕಪ್ ಗೆಲ್ಲಿಸಿ ಭಾರತಕ್ಕೆ ಕ್ರಿಕೆಟ್ ರುಚಿ ತೋರಿಸಿದ್ದ ಕಪಿಲ್‌ದೇವ್

Indias Proud Cricketer Kapil Dev

ಭಾರತದ ಇಂದು ವಿಶ್ವಕ್ರಿಕೆಟ್‌ನಲ್ಲಿ ಪರಾಕ್ರಮ ಮೆರೆಯುತ್ತಿದೆ. ಆದರೆ ಕ್ರಿಕೆಟ್ ಭಾರತದಲ್ಲಿ ಈಗಿನ ಹಂತಕ್ಕೆ ತಲುಪಲು ಮೊದಲ ಕಾರಣವೇ 1983ರರ ವಿಶ್ವಕಪ್ ಗೆಲುವು. ದೊಡ್ಡ ನಿರೀಕ್ಷೆಯಿಲ್ಲದೆ ಅಂದಿನ ವಿಶ್ವಕಪ್‌ನಲ್ಲಿ ಭಾಗಿಯಾಗಿದ್ದ ಭಾರತ ತಂಡ ದಿಗ್ಗಜ ತಂಡಗಳನ್ನು ಸೋಲಿಸಿ ಗೆದ್ದು ಬೀಗಿತ್ತು.

ಅಂದಿನ ಆ ಗೆಲುವಿಗೆ ಕಾರಣವೇ ಭಾರತ ತಂಡದ ಅಂದಿನ ನಾಯಕ ಕಪಿಲ್ ದೇವ್. 1983ರ ವಿಶ್ವಕಪ್‌ನಲ್ಲಿ ಕಪಿಲ್ ದೇವ್ ಬ್ಯಾಟ್ಸ್‌ಮನ್, ಬೌಲರ್ ಹಾಗೂ ನಾಯಕನಾಗಿ ಸರ್ವಾಂಗೀಣ ಪ್ರದರ್ಶನವನ್ನು ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದರು.

ಅಂದಿನ ವಿಶ್ವಕಪ್‌ನಲ್ಲಿ ನಿರ್ಣಾಯಕ ಗೆಲುವಿನ ಅಗತ್ಯವಿದ್ದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕಪಿಲ್ ದೇವ್ ಏಕಾಂಗಿಯಾಗಿ ಬ್ಯಾಟಿಂಗ್ ಮೂಲಕ ಹೋರಾಡಿ ಭರ್ಜರಿ 175 ರನ್‌ಗಳನ್ನು ಸಿಡಿಸಿದ್ದರು. ಈ ಮೂಲಕ ಭಾರತದ ಸೆಮಿ ಫೈನಲ್ ಪ್ರವೇಶಕ್ಕೆ ಕಾರಣರಾಗಿದ್ದರು. ಇದು ಭಾರತದ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದೆನಿಸಿದೆ.

1959ರಲ್ಲಿ ಜನವರಿ 6ರಂದು ಕಪಿಲ್ ದೇವ್ ಟಿಂಬಲ್ ವ್ಯಾಪಾರಿ ರಾಮ್‌ಲಾಲ್ ನಿಖಂಜಿ ಹಾಗೂ ರಾಜ ಕುಮಾರಿ ದಂಪತಿಯ ಪುತ್ರನಾಗಿ ಜನಿಸಿದರು. ಹರ್ಯಾಣ ಪರವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ ಕಪಿಲ್ ದೇವ್ ಬಳಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು.

ವೇಗದ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಭಾರತ ತಂಡಕ್ಕೆ ಸ್ಮರಣೀಯ ಕೊಡುಗೆಯನ್ನು ನೀಡಿ ವಿಶ್ವಕಪ್ ಗೆಲ್ಲಿಸಿದ್ದು ಮಾತ್ರವಲ್ಲ ಭಾರತದಲ್ಲಿ ಕ್ರಿಕೆಟ್‌ನ ಹೊಸ ಶಕೆಯನ್ನು ಆರಂಭಿಸಿದ್ದರು. ಸ್ವತಂತ್ರ್ಯೋತ್ಸವದ ಈ ಸಂಭ್ರಮದಲ್ಲಿ ಭಾರತೀಯ ಕ್ರೀಡೆಗೆ ಕಪಿಲ್ ನೀಡಿದ ಕೊಡುಗೆ ಸ್ಮರಣೀಯ.

Story first published: Friday, August 14, 2020, 21:31 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X