ತವರು ನೆಲದಲ್ಲಿ ಹೆಚ್ಚು ವಿಕೆಟ್ ಗಳಿಕೆ
ತವರು ನೆಲದಲ್ಲಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು. ಸ್ಪಿನ್ ದಿಗ್ಗಜ ಕುಂಬ್ಳೆ ಅವರು 350 ವಿಕೆಟ್ ಗಳನ್ನು ಭಾರತದ ನೆಲದಲ್ಲಿ ಗಳಿಸಿದ್ದಾರೆ. ಈಗ ಜೇಮ್ಸ್ ಆಂಡರ್ಸನ್ ಅವರು ಇಂಗ್ಲೆಂಡಿನಲ್ಲಿ 353 ವಿಕೆಟ್ ಗಳಿಸಿ ಈ ದಾಖಲೆ ಮುರಿದಿದ್ದಾರೆ.
ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಶ್ರೀಲಂಕಾದ ನೆಲದಲ್ಲಿ ಒಟ್ಟಾರೆ 493 ವಿಕೆಟ್ಗಳನ್ನು ಉರುಳಿಸಿದ್ದಾರೆ.
ಅತಿ ಹೆಚ್ಚು 5 ವಿಕೆಟ್ ಗಳಿಕೆ
ಇದು ಜೇಮ್ಸ್ ಆಂಡರ್ಸನ್ ಅವರ 26ನೇ ಐದು ವಿಕೆಟ್ ಗಳಿಕೆಯಾಗಿದ್ದು, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಸಮಕ್ಕೆ ನಿಂತಿದ್ದಾರೆ. ಹಾಲಿ ಟೆಸ್ಟ್ ಕ್ರಿಕೆಟ್ ಆಟಗಾರರ ಪೈಕಿ ಇವರಿಬ್ಬರ ನಂತರದ ಸ್ಥಾನದಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ (16) ಇದ್ದಾರೆ.
ಮೈದಾನವೊಂದರಲ್ಲಿ ಅತ್ಯಧಿಕ ವಿಕೆಟ್ ಕಿತ್ತವರು
166- ಮುತ್ತಯ್ಯ ಮುರಳೀಧರನ್, ಕೊಲಂಬೋ
117- ಮುತ್ತಯ್ಯ ಮುರಳೀಧರನ್, ಕ್ಯಾಂಡಿ
111- ಮುತ್ತಯ್ಯ ಮುರಳೀಧರನ್, ಗಾಲೆ
101*- ಜೇಮ್ಸ್ ಆಂಡರ್ಸನ್, ಲಾರ್ಡ್ಸ್(ಪಂದ್ಯ ಜಾರಿಯಲ್ಲಿದೆ, ಭಾನುವಾರ ಸಂಜೆ 6.30ರ ಸಮಯಕ್ಕೆ)
99- ರಂಗನಾ ಹೆರಾತ್, ಗಾಲೆ
ಭಾರತದ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ವೇಗಿಗಳು
101- ಜೇಮ್ಸ್ ಆಂಡರ್ಸನ್(ಪಂದ್ಯ ಜಾರಿಯಲ್ಲಿದೆ, ಇದು ಭಾನುವಾರ 6.30ರ ಸಮಯದ ಅಪ್ಡೇಟ್)
94- ಇಮ್ರಾನ್ ಖಾನ್
76- ಮಾಲ್ಕಂ ಮಾರ್ಷಲ್
67- ಆಂಡ್ರೂ ರಾಬರ್ಟ್ಸ್
65- ವೆಸ್ ಹಾಲ್/ರಿಚರ್ಡ್ ಹ್ಯಾಡ್ಲಿ/ಕರ್ಟ್ನಿ ವಾಲ್ಶ್/ಡೇಲ್ ಸ್ಟೇಯ್ನ್