ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್‌ನ ನಾಲ್ವರು ಆಟಗಾರರನ್ನು ಹೀನಾಯವಾಗಿ ಟ್ರೋಲ್ ಮಾಡಿದ ಬುಮ್ರಾ ಪತ್ನಿ!

ING vs ENG: Jasprit Bumrahs wife Sanjana Ganesan trolled England batsmen during 1st ODI

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಿದ್ದು ಪ್ರಥಮ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಬೂಮ್ ಬೂಮ್ ಅಫ್ರಿದಿಯ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ: ಏಕದಿನ ಕ್ರಿಕೆಟ್‌ನಲ್ಲಿ 250 ಸಿಕ್ಸರ್‌ಬೂಮ್ ಬೂಮ್ ಅಫ್ರಿದಿಯ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ: ಏಕದಿನ ಕ್ರಿಕೆಟ್‌ನಲ್ಲಿ 250 ಸಿಕ್ಸರ್‌

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ಈ ಪ್ರಥಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅತ್ತ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 25.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿ ಟೀಮ್ ಇಂಡಿಯಾಗೆ 111 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 18.4 ಓವರ್‌ಗಳಲ್ಲಿ 114 ರನ್ ಕಲೆಹಾಕಿ ಭರ್ಜರಿ ಜಯ ಸಾಧಿಸಿತು.

IND vs ENG: ಭಾರತದ ಈ ಜೋಡಿ ಮುಂದೆ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಜೋಡಿ ಇಲ್ಲ; ವೀರೇಂದ್ರ ಸೆಹ್ವಾಗ್IND vs ENG: ಭಾರತದ ಈ ಜೋಡಿ ಮುಂದೆ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಜೋಡಿ ಇಲ್ಲ; ವೀರೇಂದ್ರ ಸೆಹ್ವಾಗ್

ಟೀಮ್ ಇಂಡಿಯಾದ ಈ ಭರ್ಜರಿ ಗೆಲುವಿಗೆ ಕಾರಣ ತಂಡದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ. ಹೌದು, ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು ಹಾಗೂ ಉಳಿದೊಂದು ವಿಕೆಟ್ ಕೂಡ ತಂಡದ ಮತ್ತೋರ್ವ ವೇಗಿ ಪ್ರಸಿದ್ಧ್ ಕೃಷ್ಣ ಪಾಲಾಯಿತು. ಹೀಗೆ ಭಾರತದ ವೇಗಿಗಳು ಇಂಗ್ಲೆಂಡ್ ತಂಡದ ಎಲ್ಲಾ ವಿಕೆಟ್‍ಗಳನ್ನು ಕಬಳಿಸಿ ಪಾರುಪತ್ಯ ಮೆರೆದರು. ಅದರಲ್ಲಿಯೂ ಜಸ್ಪ್ರೀತ್ ಬುಮ್ರಾ ತನ್ನ ಮೊದಲನೇ ಓವರ್‌ನಲ್ಲಿಯೇ 2 ವಿಕೆಟ್ ಪಡೆದು ಯಾವುದೇ ರನ್ ನೀಡದೇ ಅಬ್ಬರಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು ಮತ್ತು ಇಂಗ್ಲೆಂಡ್ ತಂಡದ ಮೂವರು ಆಟಗಾರರನ್ನು ಡಕ್ ಔಟ್ ಆಗುವಂತೆ ಮಾಡಿದರು. ಹೀಗೆ ಜಸ್ ಪ್ರಿತ್ ಬುಮ್ರಾ ಮೈದಾನದಲ್ಲಿ ಇಂಗ್ಲೆಂಡ್ ಆಟಗಾರರ ವಿಕೆಟ್ ಪಡೆದು ಎದುರಾಳಿಗಳನ್ನು ಕಾಡಿದರೆ, ಜಸ್ ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಮೈದಾನದಿಂದ ಆಚೆಗೆ ಇಂಗ್ಲೆಂಡ್ ಆಟಗಾರರನ್ನು ಟ್ರೋಲ್ ಮಾಡಿ ಇದೀಗ ಸದ್ದು ಮಾಡುತ್ತಿದ್ದಾರೆ.

ಡಕ್ ಹೋಟೆಲ್ ಮುಂದೆ ನಿಂತು ಡಕ್ ಔಟ್ ಆದವರ ಟ್ರೋಲ್

ಸಂಜನಾ ಗಣೇಶನ್ ಪಂದ್ಯದ ಕುರಿತ ಲೈವ್ ವೇಳೆ ಲಂಡನ್‌ನ ಫುಡ್ ಕೋರ್ಟ್ ಒಂದಕ್ಕೆ ಭೇಟಿ ನೀಡಿ ಅಲ್ಲಿನ ತಿನಿಸುಗಳ ಬಗ್ಗೆ ವಿಮರ್ಶೆ ಮಾಡುವ ರೀತಿ ವಿಡಿಯೋ ಮಾಡಿದ್ದಾರೆ. ಈ ವೇಳೆ ಅಲ್ಲಿರುವ ವಿವಿಧ ಬಗೆಯ ತಿನಿಸುಗಳ ಬಗ್ಗೆ ವಿವರಿಸುತ್ತಿದ್ದ ಸಂಜನಾ ಗಣೇಶನ್ ಫುಡ್ ಕೋರ್ಟ್ ಜನಜಂಗುಳಿಯಿಂದ ಕೂಡಿದೆ ಏಕೆಂದರೆ ಇಂಗ್ಲೆಂಡ್ ಜನತೆ ಕ್ರಿಕೆಟ್ ನೋಡಲು ಬಯಸುತ್ತಿಲ್ಲ ಎಂದು ಮೊದಲಿಗೆ ಇಂಗ್ಲೆಂಡ್ ತಂಡದ ಕಳಪೆ ಆಟವನ್ನು ಗೇಲಿ ಮಾಡಿದರು. ನಂತರ ಮುಂದುವರಿದು ಮಾತನಾಡಿದ ಸಂಜನಾ ಇಲ್ಲೊಂದು ಕ್ರಿಸ್ಪಿ ಡಕ್ ಎಂಬ ಹೋಟೆಲ್ ಇದೆ, ಇಲ್ಲಿನ ಡಕ್ ತಿನಿಸೊಂದನ್ನು ನಾನು ಖರೀದಿಸಿದ್ದೇನೆ ಹಾಗೂ ಮೈದಾನದಿಂದಾಚೆಗಿನ ಈ ಡಕ್ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ ಏಕೆಂದರೆ ಮೈದಾನದಲ್ಲಿರುವ ಡಕ್‌ಗಳು ಅದ್ಭುತವಾಗಿವೆ ಎಂದು ಹೇಳುವುದರ ಮೂಲಕ ಡಕ್ ಔಟ್ ಆದ ಇಂಗ್ಲೆಂಡ್ ಆಟಗಾರರ ಕಾಲನ್ನು ಎಳೆದಿದ್ದಾರೆ.

4 ಆಟಗಾರರು ಡಕ್ ಔಟ್

4 ಆಟಗಾರರು ಡಕ್ ಔಟ್

ಇಂಗ್ಲೆಂಡ್ ತಂಡದ ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್ ಸ್ಟನ್ ಶೂನ್ಯ ಸುತ್ತಿದರು. ಅದರಲ್ಲಿಯೂ ನಾಯಕ ಬೆನ್ ಸ್ಟೋಕ್ಸ್ ಗೋಲ್ಡನ್ ಡಕ್ ಔಟ್ ಆದರು. ಜೇಸನ್ ರಾಯ್, ಜೋ ರೂಟ್ ಮತ್ತು ಲಿಯಾಮ್ ಲಿವಿಂಗ್ ಸ್ಟನ್ ಜಸ್ ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿ ಡಕ್ ಔಟ್ ಆದರೆ ಬೆನ್ ಸ್ಟೋಕ್ಸ್ ಮೊಹಮ್ಮದ್ ಶಮಿ ಎಸೆತದಲ್ಲಿ ಡಕೌಟ್ ಆದರು.

ಪಂದ್ಯಶ್ರೇಷ್ಠ ಪಡೆದ ಜಸ್ಪ್ರೀತ್ ಬುಮ್ರಾ

ಪಂದ್ಯಶ್ರೇಷ್ಠ ಪಡೆದ ಜಸ್ಪ್ರೀತ್ ಬುಮ್ರಾ

ಇನ್ನು ಈ ಪಂದ್ಯದಲ್ಲಿ 7.2 ಓವರ್ ಬೌಲಿಂಗ್ ಮಾಡಿದ ಜಸ್ಪ್ರೀತ್ ಬೂಮ್ರಾ 19 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಬುಮ್ರಾ 3 ಮೇಡನ್ ಓವರ್‌ಗಳನ್ನೂ ಸಹ ಮಾಡಿದರು. ಹೀಗೆ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Wednesday, July 13, 2022, 16:20 [IST]
Other articles published on Jul 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X