ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ v ಇಂಗ್ಲೆಂಡ್: ಗಾಯದ ಕಾರಣ ಫೀಲ್ಡಿಂಗ್‌ಗೆ ಇಳಿಯದ ಚೇತೇಶ್ವರ್ ಪೂಜಾರ

Injured Cheteshwar Pujara absent on field against england in 1st innings

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಫೀಲ್ಡಿಂಗ್ ವೆಳೆ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಫೀಲ್ಡಿಂಗ್‌ಗೆ ಇಳಿದಿಲ್ಲ. ಬ್ಯಾಟಿಂಗ್‌ ವೇಳೆ ಆದ ಗಾಯದ ಕಾರಣದಿಂದ ಪೂಜಾರ ಪೀಲ್ಡಿಂಗ್‌ನಿಂದ ದೂರ ಉಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾ ಪರವಾಗಿ ಶನಿವಾರ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಚೆಂಡು ಪೂಜಾರ ಕೈಗೆ ಬಡಿದಿತ್ತು. ಹೀಗಾಗಿ ಪೂಜಾರ ಮೊದಲ ಇನ್ನಿಂಗ್ಸ್‌ನ ಫೀಲ್ಡಿಂಗ್ ವೇಳೆ ಅಂಗಳಕ್ಕೆ ಇಳಿದಿಲ್ಲ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಫೂಜಾರ 58 ಎಸೆತಗಳನ್ನು ಎದುರಿಸಿ 21 ರನ್‌ಗಳಿಸಿ ಔಟಾದರು.

ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!

ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ತನ್ನ ಅಂತಿಮ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮುನ್ನ ಕೇವಲ 29 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ದಿನ ವಿಕೆಟ್ ಕೀಪರ್ ರಿಷಭ್ ಪಂತ್ ತಮ್ಮ ಅರ್ಧ ಶತಕವನ್ನು ಪೂರೈಸಲುವಲ್ಲಿ ಯಶಸ್ವಿಯಾದರು.

ಇನ್ನು ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಬದಿಂದಲೇ ಭಾರೀ ಆಘಾತವನ್ನು ಅನುಭವಿಸಿದೆ. ಟೀಮ್ ಇಮಡಿಯಾ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡಲು ವಿಫಲವಾಗಿ ನಾಲ್ವರು ದಾಂಡಿಗರು ಭೋಜನ ವಿರಾಮಕ್ಕೂ ಮುನ್ನವೇ ಫೆವಿಲಿಯನ್ ಸೇರಿಕೊಂಡಿದ್ದಾರೆ.

ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!

ಇಂಗ್ಲೆಂಡ್ ತಂಡದ ಆರಂಭಿಕ ರೋರಿ ಬರ್ನ್ಸ್, ಡಾಮಿನಿಕ್ ಸಿಬ್ಲಿ, ನಾಯಕ ಜೋ ರೂಟ್ ಹಾಗೂ ಡೇನಿಯಲ್ ಲಾರೆನ್ಸ್ ಭೋಜನ ವಿರಾಮಕ್ಕೂ ಮುನ್ನ ಔಟಾಗಿ ಹೊರ ನಡೆದರು. ಅದರಲ್ಲೂ ಲಾರೆನ್ಸ್ ಭೋಜನ ವಿರಾಮಕ್ಕೂ ಮುನ್ನ ಅಂತಿಮ ಎಸೆತದಲ್ಲಿ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.

Story first published: Sunday, February 14, 2021, 12:41 [IST]
Other articles published on Feb 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X